Sunday, September 5, 2010

ಮಕ್ಕಳ ಯಕ್ಷಗಾನ ಸ್ಪರ್ಧೆ : ಕದ್ರಿ, ಕಲ್ಲಡ್ಕ ತಂಡಗಳಿಗೆ ಪ್ರಶಸ್ತಿ













ಕಟೀಲುವಿನ ಶಾಲಾ ಸರಸ್ವತೀ ಸದನದಲ್ಲಿ ಭಾನುವಾರ(ಸ.೫) ನಡೆದ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಶ್ರೀ ಕೃಷ್ಣ ಲೀಲೆ ಪ್ರದರ್ಶಿಸಿದ ಕದ್ರಿಯ ಬಾಲ ಯಕ್ಷ ಕೂಟ ಪ್ರಥಮ ಹಾಗೂ ವೀರಬಬ್ರುವಾಹನ ಪ್ರದರ್ಶಿಸಿದ ಕಲ್ಲಡ್ಕದ ಚೈತನ್ಯ ಕಲಾ ವೇದಿಕೆ ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿವೆ.
ಅತ್ಯುತ್ತಮ ಪುಂಡುವೇಷದಲ್ಲಿ ಕಲ್ಲಡ್ಕದ ಚಿನ್ಮಯ, ಸ್ತ್ರೀವೇಷಕ್ಕೆ ಕದ್ರಿಯ ಅಶ್ವಿನಿ ಮಯ್ಯ, ಹಾಸ್ಯಕ್ಕೆ ಕದ್ರಿಯ ಶ್ರೀನಿಧಿ ರಾವ್, ಬಣ್ಣದ ವೇಷಕ್ಕೆ ಕದ್ರಿಯ ಆಕಾಶ ಎನ್, ಶ್ರೀಪ್ರಿಯಾ, ರಾಜವೇಷಕ್ಕೆ ಮಂಜನಾಡಿ ದುರ್ಗಾಪರಮೇಶ್ವರೀ ಯಕ್ಷಕಲಾ ಕಂದ್ರದ ಆವ್ಯತಾ, ಪೋಷಕ ಪಾತ್ರಕ್ಕೆ ಕಳಸ ಹಳುವಳ್ಳಿಯ ಸುಬ್ರಹ್ಮಣ್ಯೇಶ್ವರ ತಂಡದ ಕೆ.ಎ.ಲಾಸ್ಯ ಪ್ರಶಸ್ತಿ ಪಡೆದರು.
ಶ್ರೀ ದುರ್ಗಾ ಮಕ್ಕಳ ಮೇಳದ ಎರಡನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿದ ಯಕ್ಷಗಾನ ಬಯಲಾಟ ಅಕಾಡಮಿಯ ಕುಂಬ್ಳೆ ಸುಂದರ ರಾವ್, ಯಕ್ಷಗಾನ ಮುಗಿದು ಹೋಗುತ್ತಿದೆ ಎಂಬುದು ಸುಳ್ಳು. ಭವ್ಯ ಭವಿತವ್ಯ ಇದೆ ಎಂಬುದಕ್ಕೆ ನೂರಾರು ಮಕ್ಕಳು ಯಕ್ಷಗಾನಗಳಲ್ಲಿ ತೊಡಗಿಕೊಂಡಿರುವುದೇ ಸಾಕ್ಷಿ ಎಂದು ಹೇಳಿದರು.
ಇದೇ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್‌ರನ್ನು ಸಂಮಾನಿಸಲಾಯಿತು. ಪು.ಶ್ರೀನಿವಾಸ ಭಟ್, ಕಟೀಲು ರಮಾನಂದ ರಾಯರನ್ನು ಗೌರವಿಸಲಾಯಿತು.
ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ.ಜಯರಾಂ ಭಟ್, ಮೂಡುಬಿದ್ರೆ ಆಳ್ವಾಸ್ ಸಂಸ್ಥೆಯ ಡಾ.ಮೋಹನ ಆಳ್ವ, ಬಳ್ಳಾರಿಯ ಉದ್ಯಮಿ ಕಳತ್ತೂರು ಸುರೇಶ್ ಶೆಟ್ಟಿ, ಮುರಳೀಧರ ಕಡೇಕಾರ್, ಮುಂಬೈನ ಎಚ್.ಬಿ.ಎಲ್.ರಾವ್, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಉಪಪ್ರಾಚಾರ್ಯ ಸುರೇಶ್ ಭಟ್, ಮುಖ್ಯ ಶಿಕ್ಷಕಿ ವೈ.ಮಾಲತಿ, ಕೆ.ಪಿ.ಮಲ್ಯ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದುರ್ಗಾ ಮಕ್ಕಳ ಮೇಳದ ಕಲಾವಿದರಂದ ಯಕ್ಷಗಾನ ಬಯಲಾಟ ನಡೆಯಿತು.

No comments:

Post a Comment