Monday, March 26, 2012

ವೆಂಕಟೇಶ ಪ್ರಸಾದ ಕಟೀಲಿಗೆ ಭೇಟಿ


ಕ್ರಿಕೆಟಿಗ ವೆಂಕಟೇಶ ಪ್ರಸಾದ ಕಟೀಲಿಗೆ ಭೇಟಿ ನೀಡಿದರು.

Wednesday, March 21, 2012

ಕಟೀಲು ದೇಗುಲಕ್ಕೆ ನಂದಿನೀ ನದಿಯಿಂದ ೨೫ಕಿ.ವ್ಯಾ.ವಿದ್ಯುತ್





ದೇಶದಲ್ಲೇ ಮೊದಲು

ಕಟೀಲು : ಸ್ವಂತ ಬಳಕೆಗಾಗಿ ಖಾಸಗಿ ಸಂಸ್ಥೆಯೊಂದು ಟರ್ಬೋ ತಂತ್ರಜ್ಞಾನ ಬಳಸಿ ಕೇವಲ ಐದಾರು ಲಕ್ಷ ರೂ.ನಲ್ಲಿ ಇಪ್ಪತ್ತೈದು ಕಿಲೋ ವಾಟ್ ವಿದ್ಯುತನ್ನು ನದಿಯಿಂದ ಉತ್ಪಾದಿಸುವ ಸಾಧನೆಗೆ ಕಟೀಲು ದೇಗುಲ ಸಿದ್ಧವಾಗಿದ್ದು, ಇಂತಹ ಸಾಧನೆ ದೇಶದಲ್ಲೇ ಮೊದಲನೆಯದ್ದಾಗಿದೆ ಎಂದು ಹೇಳಲಾಗಿದೆ.javascript:void(0)
ನಂದಿನೀ ನದೀ ಮಧ್ಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉಪಯೋಗಕ್ಕೆ ಸುತ್ತಲೂ ಹರಿಯುವ ನಂದಿನೀ ನದಿಯಿಂದಲೇ ಮಳೆಗಾಲದ ಆರು ತಿಂಗಳ ವಿದ್ಯುತ್ ಉತ್ಪಾದನೆ ಮಾಡುವ ಕನಸು ಮುಂದಿನ ಜೂನ್ ತಿಂಗಳಲ್ಲಿ ನನಸಾಗಲಿದ್ದು, ಇದಕ್ಕಾಗಿ ಟರ್ಬೋ ಯಂತ್ರವನ್ನು ಅಳವಡಿಸುವ ಕಾರ‍್ಯವನ್ನು ಶೃಂಗೇರಿ ಜಯಪುರದ ಜಿ.ಕೆ.ರತ್ನಾಕರ್ ಶುಕ್ರವಾರ ಮುಗಿಸಿದ್ದಾರೆ.
ನಿರಂತರ ಏಳೆಂಟು ತಿಂಗಳಲ್ಲಿ ೨೫ಕಿಲೋವ್ಯಾಟ್ ವಿದ್ಯುತ್ ಪಡೆಯುವುದು ಕಷ್ಟವೇ ಅಲ್ಲ ಎಂದು ಈಗಾಗಲೇ ೨೭೭ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿರುವ ಹಾಗೂ ಕಟೀಲಿನಲ್ಲಿ ಟರ್ಬೋ ಯಂತ್ರವನ್ನು ಸ್ಥಾಪಿಸಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜಿ.ಕೆ.ರತ್ನಾಕರ್ ತಿಳಿಸಿದ್ದಾರೆ.
ಕಟೀಲು ದೇಗುಲದಲ್ಲಿ ೭೦ಕಿಲೋವ್ಯಾಟ್‌ನ ೩ ಜನರೇಟರ್‌ಗಳು ಇವೆ. ಇಷ್ಟು ಸಾಕಾಗುವುದಿಲ್ಲವೆಂದು ನೂರು ಕಿಲೋವ್ಯಾಟ್ ವಿದ್ಯುತ್ ಸಾಮರ್ಥ್ಯದ ಜನರೇಟರ್ ಪರಿಶೀಲನೆಯಲ್ಲಿದೆ. ನಾಲ್ಕು ವಿದ್ಯಾ ಸಂಸ್ಥೆಗಳಲ್ಲಿ ೨೫ಕಿಲೋ ವ್ಯಾಟ್ ವಿದ್ಯುತ್ ಖರ್ಚಾಗುತ್ತದೆ. ಮಾಸ್ಟರ್ ಪ್ಲಾನ್ ಬಳಿಕ ನೂರು ಕೋಣೆಗಳ ವಸತಿಗೃಹ, ಅಡಿಟೋರಿಯಂ ಇತ್ಯಾದಿ ಕಟ್ಟಡಗಳಾದರೆ ಇನ್ನಷ್ಟು ವಿದ್ಯುತ್ ಬೇಕಾಗುತ್ತದೆ. ಅಂದರೆ ೧೦೦ ಕಿಲೋವ್ಯಾಟ್ ವಿದ್ಯುತ್ ಕಟೀಲು ದೇವಸ್ಥಾನ ಹಾಗೂ ಸಹಸಂಸ್ಥೆಗಳಿಗೆ ಬೇಕಾಗುತ್ತದೆ. ಈಗಾಗಲೇ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಹಣವನ್ನು ವಿದ್ಯುತ್‌ಗಾಗಿಯೇ ಕಟೀಲು ದೇಗುಲ ಭರಿಸುತ್ತಿದೆ.
ಇಂತಹ ಹಿನ್ನಲೆಗಳಿರುವಾಗ ವೇಗದಿಂದ ಹರಿಯುವ ನಂದಿನೀ ನದಿಯಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಕಟೀಲು ದೇಗುಲದ ಆಡಳಿತ ಯೋಜಿಸಿ, ಕೆಲಸವನ್ನು ಜಯಪುರದ ಟರ್ಬೋ ಜಲವಿದ್ಯುತ್ ದೀಪಗಳು ಸಂಸ್ಥೆಯ ರತ್ನಾಕರ್‌ಗೆ ವಹಿಸಲಾಗಿತ್ತು.
ಕಟೀಲಿನಲ್ಲಿ ದೇಗುಲದ ಎದುರು ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿಗೆ ಟರ್ಬನೈರ್ ಅಳವಡಿಸಲಾಗಿದ್ದು, ಮೂಲಕ ೨೫ಕಿಲೋ ವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಒಂದಿಷ್ಟು ಬದಲಾವಣೆ ಮಾಡಿದರೆ ೫೦ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲೂ ಸಾಧ್ಯವಿದೆ. ಸುಮಾರು ನೂರು ಮೀಟರ್ ದೂರದಲ್ಲಿ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪು ಮೂಲಕ ವೇಗವಾಗಿ ಹರಿಸಿದರೆ ೪ ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತನ್ನು ಆರು ತಿಂಗಳ ಕಾಲ ನಿರಂತರ ಆರಾಮವಾಗಿ ಪಡೆಯಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಸದ್ಯಕ್ಕೆ ೨೫ಕೆವಿಯಷ್ಟನ್ನೇ ಉತ್ಪಾದನೆ ಮಾಡುವ ಯಂತ್ರ ಅಳವಡಿಸಿದ್ದು, ಕೇವಲ ರೂ.ಐದಾರು ಲಕ್ಷದಲ್ಲಿ ಇಷ್ಟು ಮೊತ್ತದ ವಿದ್ಯುತ್ ಘಟಕವನ್ನು ಖಾಸಗಿ ಸಂಸ್ಥೆಯೊಂದು ತಯಾರಿಸಿರುವುದು ದೇಶದಲ್ಲೇ ಮೊದಲು ಎಂದು ರತ್ನಾಕರ್ ಹೇಳುತ್ತಾರೆ. ನೂರಾರು ಕಡೆಗಳಲ್ಲಿ ನೀರಿನಿಂದ ವಿದ್ಯುತ್ ತಯಾರಿಸುವ ಘಟಕಗಳಿವೆ. ನಾನೇ ನಕ್ಸಲ್ ಬಾಧಿತ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಮುನ್ನೂರರಷ್ಟು ಘಟಕಗಳನ್ನು ಸ್ಥಾಪಿಸಿದ್ದೇನೆ. ಅವೆಲ್ಲ ಒಂದು ಎರಡು ಮೂರು ನಾಲ್ಕು ಕೆವಿಯಷ್ಟೇ ಇವೆ. ಆದರೆ ೨೫ ಕೆವಿಯಷ್ಟು ದೊಡ್ಡ ಘಟಕ ಖಾಸಗಿಯಾಗಿ ಸ್ಥಾಪಿಸಿದ್ದು ಕಟೀಲಿನಲ್ಲೇ ಮೊದಲು ಎಂದು ಅವರು ಹೇಳಿದ್ದಾರೆ.
ಕಾಶೀ ಹರಿದ್ವಾರದಲ್ಲಿ ಇದೇ ರೀತಿಯ ಘಟಕ ಮಾಡಬೇಕು ಅಂತ ಬೇಡಿಕೆ ಬಂದಿತ್ತಾದರೂ ಸಾಧ್ಯವಾಗಿರಲಿಲ್ಲ ಎಂದು ರತ್ನಾಕರ್ ಹೇಳಿದ್ದಾರೆ. ವರ್ಷಕ್ಕೆ ಹತ್ತು ಲಕ್ಷ ರೂ. ಖರ್ಚು ಮಾಡುವ ಕಟೀಲು ದೇಗುಲಕ್ಕೆ ಈ ಘಟಕಕ್ಕೆ ತೊಡಗಿಸಿದ ಹಣ ಒಂದೇ ವರ್ಷದಲ್ಲಿ ವಾಪಾಸಾದಂತಾಗುತ್ತದೆ. ಇದೇ ತಂತ್ರಜ್ಞಾನಕ್ಕೆ ನೀರು ಮೇಲೆತ್ತುವ ಯಂತ್ರ ಅಳವಡಿಸಿದರೆ ಭಕ್ತರಿಗೆ ಕಾಲು ತೊಳೆಯಲು ನೀರನ್ನು ಯಾವುದೇ ಖರ್ಚಿಲ್ಲದೆ ದಿನವಿಡೀ ನದಿಯಿಂದ ಮೇಲೆತ್ತಬಹುದು. ವಿದ್ಯುತ್ ಉಪಯೋಗವಿಲ್ಲದ ವೇಳೆಯಲ್ಲಿ ಅಕ್ಕಿ ಗೋಧಿ ಇತ್ಯಾದಿ ಹಿಟ್ಟು ಮಾಡುವ ಗಿರಣಿಯನ್ನೂ ಇಲ್ಲೇ ನಡೆಸುವ ಮೂಲಕ ದೇಗುಲಕ್ಕೆ ಇನ್ನಷ್ಟು ಉಪಯೋಗ ಪಡೆಯಬಹುದು. ಆದರೆ ಈ ಘಟಕಕ್ಕೆ ನದಿಯಲ್ಲಿ ಹೋಗುವ ದಿಮ್ಮಿಗಳು ಸಮಸ್ಯೆಯಾಗದಂತೆ ರಕ್ಷಣೆ ಅಗತ್ಯವಿದೆ ಎಂದು ರತ್ನಾಕರ್ ತಿಳಿಸಿದ್ದಾರೆ.
ಆದರೆ ವಿದ್ಯುತ್ ಉತ್ಪಾದನೆಯನ್ನು ನೋಡಲು ಮಳೆ ಬರುವ ಜೂನ್‌ವರೆಗೆ ಕಾಯಬೇಕು.
ಚಿತ್ರ : ಕಟೀಲ್ ಸ್ಟುಡಿಯೋ

Tuesday, March 20, 2012

ಕಟೀಲ್ ಕ್ಲಬ್ ಅಧ್ಯಕ್ಷರಾಗಿ ಕೇಶವ


ಕಟೀಲು : ಇಲ್ಲಿನ ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಕೇಶವ ಕೆ, ಉಪಾಧ್ಯಕ್ಷರಾಗಿ ದೇವೀಪ್ರಸಾದ್ ಬಿ, ಕಾರ‍್ಯದರ್ಶಿಯಾಗಿ ದಾಮೋದರ ಆಚಾರ‍್ಯ, ಕೋಶಾಧಿಕಾರಿಯಾಗಿ ಪಿ.ವಿ.ಮಯ್ಯ, ಸಾಂಸ್ಕೃತಿಕ ಕಾರ‍್ಯದರ್ಶಿಯಾಗಿ ಶಿವಪ್ಪ, ಕ್ರೀಡಾಕಾರ‍್ಯದರ್ಶಿಯಾಗಿ ಮಧು ಕಿರಣ್, ಕ್ರಿಕೆಟ್ ನಾಯಕನಾಗಿ ಸಂದೀಪ್, ಉಪ ನಾಯಕನಾಗಿ ಸತೀಶ ಆಚಾರ‍್ಯ, ಜೊತೆ ಕಾರ‍್ಯದರ್ಶಿಯಾಗಿ ಐವನ್ ಡಿಸೋಜ, ಕೊತೆ ಕೋಶಾಧಿಕಾರಿಯಾಗಿ ಹರೀಶ ಕುಲಾಲ್ ಆಯ್ಕೆಯಾಗಿದ್ದಾರೆ.

Friday, March 9, 2012

ಕೊಡೆತ್ತೂರು ಅರಸು ಕುಂಜರಾಯ ನೇಮ




ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಕುಂಜರಾಯ, ಕೊಡಮಣಿತ್ತಾಯ, ಜಾರಂದಾಯ, ಸರಳ ಜುಮಾದಿ, ಕಾಂತೇರಿ ಜುಮಾದಿ ದೈವಗಳ ನೇಮ ನಡೆಯಿತು.
ಚಿತ್ರ : ಅರುಣ್ ಉಲ್ಲಂಜೆ

ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಪ್ರಸಾದ ಸ್ವೀಕರಿಸಿದರು.
ಚಿತ್ರ : ಅರುಣ್ ಉಲ್ಲಂಜೆ

Tuesday, March 6, 2012

ಕಟೀಲು ಪ್ರೌಢಶಾಲೆ ಹಳೆವಿದ್ಯಾರ್ಥಿಗಳ ಸಭೆ

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಸುವರ್ಣ ಮಹೋತ್ಸವದ ಸಿದ್ಧತೆಯಲ್ಲಿದ್ದು ಈ ಹಿನ್ನಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನಡೆಯಿತು.
ಶಾಲೆಯಿಂದ ಈ ವರೆಗೆ ಹನ್ನೆರಡು ಸಾವಿರ ಮಂದಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದು, ಅವರಲ್ಲಿ ಕನಿಷ್ಟ ಐದು ಸಾವಿರ ಮಂದಿಯನ್ನಾದರೂ ಒಟ್ಟು ಸೇರಿಸುವ ಕಾರ‍್ಯವಾಗಬೇಕು ಎಂದು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ವಿದ್ಯಾರ್ಥಿಗಳ ಕಲಿಕೆಗೆ ಕಂಪ್ಯೂಟರ್‌ಗಳನ್ನು ನೀಡುವುದು ಹಾಗೂ ಕಟೀಲು ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್ ಮಾಡುವ ಬಗ್ಗೆ ತಿಳಿಸಲಾಯಿತು.
ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕರಾದ ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ಹಳೆ ವಿದ್ಯಾರ್ಥಿಗಳಾದ ಪ್ರದ್ಯಮ್ನ ರಾವ್, ಮಧುಕರ ಅಮೀನ್, ಅರುಣಾ ಉಡುಪ, ಸುಧಾಕರ ಶೆಟ್ಟಿ, ರಾಮ್‌ಗೋಪಾಲ್, ಗುರುರಾಜ ಉಡುಪ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಐಎಎಸ್ ಕೆಎಎಸ್ ಪರೀಕ್ಷೆಗೆ ಸಿದ್ದತೆಯ ಮಾಹಿತಿ

ಕಟೀಲು : ದಕ್ಷಿಣ ಕನ್ನಡ ಜಿಲ್ಲೆ ಮುಂದುವರಿದ, ಬುದ್ಧಿವಂತರ ಜಿಲ್ಲೆ ಎನಿಸಿದರೂ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ಇಲ್ಲಿನವರು ಗಮನಾರ್ಹ ಸಾಧನೆ ಮಾಡಿಲ್ಲ ಎಂದು ಮಂಗಳೂರು ಸಹಾಯಕ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಎಎಸ್ ಕೆಎಎಸ್ ಪರೀಕ್ಷೆಗೆ ಸಿದ್ದತೆಯ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಂಚಾಲಕ ವಿಜಯ ವಿ. ಉಪಸ್ಥಿತರಿದ್ದರು.

ಶ್ರದ್ಧೆ ಶ್ರಮದಿಂದ ಸಾಧನೆ


ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಯ ಬೇಡ. ಅಸಾಮಾನ್ಯ ಬುದ್ಧಿವಂತಿಕೆಗಿಂತಲೂ ಒಂದಿಷ್ಟು ಶ್ರದ್ಧೆ ಮತ್ತು ಶ್ರಮದಿಂದ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಗೊಳ್ಳುವುದು ಕಷ್ಟವಲ್ಲ. ವಾಣಿಜ್ಯ ಪದವಿಯ ಬಳಿಕ ಚಾರ್ಟರ್ಡ್ ಅಕೌಂಟೆಟ್, ಕಾಸ್ಟ್ ಮತ್ತು ವರ್ಕ್ಸ್ ಅಕೌಂಟೆಟ್, ಕಂಪನಿ ಸಕ್ರೆಟರಿಯಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಉಜ್ವಲವಿದೆ ಎಂದು ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಟ್ಸ್ ತರಬೇತಿ ಸಂಸ್ಥೆ ಕಾಪ್ಸ್ ಅಕಾಡಮಿ ಮುಖ್ಯಸ್ಥ ಚಂದ್ರಶೇಖರ್ ಶೆಟ್ಟಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಡಾ.ಕ್ರಣ, ಕುಮಾರಿ ತೀಕ್ಷಿತಾ, ನೀಲನ್, ಸಚಿವ್ ಮತ್ತಿತರರಿದ್ದರು.

Thursday, March 1, 2012

ಕಟೀಲು ಬ್ರಹ್ಮಗುಡಿಯಲ್ಲಿ ಕಲಶಾಭಿಷೇಕ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಸುಮಾರು ಹತ್ತು ಲಕ್ಷ ರೂ.ನಲ್ಲಿ ಶಿಲಾಮಯ ಮತ್ತು ಕೆಂಪು ಕಲ್ಲಿನಿಂದ ನಿರ್ಮಾಣಗೊಂಡ ಬ್ರಹ್ಮರ ಗುಡಿಯಲ್ಲಿ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು.
ಶಿಬರೂರು ಹಯಗ್ರೀವ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್, ಸ್ಕಂದ ಪ್ರಸಾದ ಭಟ್, ಸಾಂಸದ ನಳಿನ್ ಕುಮಾರ್, ದಾನಿಗಳಾದ ಗಣೇಶ ಬಂಗೇರ, ಪದ್ಮನಾಭ ಬಂಗೇರ, ರಾಘವೇಂದ್ರ ಆಚಾರ‍್ಯ, ರವಿ ಆಚಾರ‍್ಯ, ಜಯಾನಂದ ರಾವ್ ಮತ್ತಿತರರಿದ್ದರು.