Monday, September 29, 2014

ಕಟೀಲಮ್ಮನ ನಂಬಿದರೆ ಯಶಸ್ಸು ಖಂಡಿತ -ನಳಿನ್ ಕುಮಾರ್

ಕಟೀಲು : ಶ್ರದ್ಧಾ ಭಕ್ತಿಯನ್ನು ನಂಬಿದ ಭಕ್ತನನ್ನು ಕಟೀಲಮ್ಮ ಯಾವತ್ತಿಗೂ ಕೈ ಬಿಡಲಾರಳು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಶ್ರೀ ಕ್ಷೇತ್ರ ಕಟೀಲಿಗೆ ಕೊಡೆತ್ತೂರಿನಿಂದ ಬರುವ ಹುಲಿವೇಷ ಮೆರವಣಿಗೆಯ ಐವತ್ತರ ವರ್ಷದ ಸಂಭ್ರಮಾಚರಣೆಯ ಪೂರ್ವಭಾವಿಯಾಗಿ ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಆಯೋಜಿಸಿದ ಕೊಡೆತ್ತೂರು ಮೂಡುಮನೆಯ ಮುಂಭಾಗದ ಲಲಿತಾ ನಂದಿನಿ ವೇದಿಕೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ   ಮಾತನಾಡಿದರು.
ಗುರುಪುರ ಶ್ರೀ Pತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, . ಮೂ. ವಾಸುದೇವ ಆಚಾರ್ಯ ಶಿಬರೂರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಭುವನಾಭಿರಾಮ ಉಡುಪ,ಐಕಳ ಗಣೇಶ್ ವಿ. ಶೆಟ್ಟಿ, ಯಾದವ ಕೋಟ್ಯಾನ್ ಪೆರ್ಮುದೆ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ರಘುರಾಮ ಶೆಟ್ಟಿ ಪದವಿನಂಗಡಿ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ನಿರಂಜನ ಶೆಟ್ಟಿ  ಕೊಡೆತ್ತೂರು ಮಾಗಂದಡಿ, ಮುಂಬಯಿ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಕೊಡೆತ್ತೂರು ಸಾಂತ್ಯ, ಸಮಿತಿ ಅಧ್ಯಕ್ಷ ಈಶ್ವರ  ಕಟೀಲ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಎಸ್. ಶೆಟ್ಟಿ, ಕಾರ್ಯಧ್ಯಕ್ಷ ಲೋಕೇಶ್ ಶೆಟ್ಟಿ,ಸೋಂದಾ ಭಾಸ್ಕರ ಭಟ್,ಗುರುರಾಜ್  ಉಪಸ್ಥಿತರಿದ್ದರು.
ಕಳೆದ ೫೦ ವರ್ಷಗಳಿಂದ ಕೊಡೆತ್ತೂರು ಮೆರವಣಿಗೆ ಸೇವಾ ಸಮಿತಿಯಲ್ಲಿ ಸೇವೆಗೈದ ಬಿ. ವಿಶ್ವನಾಥ ಶೆಟ್ಟಿ ಕೊಡೆತ್ತೂರು, ಚಂದ್ರಕಾಂತ್ ನಾಯಕ್ ಕಟೀಲು, ಪ್ರಭಾಕರ ಶೆಟ್ಟಿ, ವಾಸುದೇವ ಆಚಾರ್ಯ ಹಾಗೂ ಕಂಬಳಿ ಅವರನ್ನು ಸನ್ಮಾನಿಸಲಾಯಿತು. " ಸುವರ್ಣ ಸ್ಪರ್ಶ " ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಉಚಿತ ನೇತ್ರ ಚಿಕಿತ್ಸೆಯ ಫಲಾನುಭಾವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಉತ್ತಮ ಸಾಧನೆಗೈದ ಪರಿಸರದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮಲ್ಲಿಗೆಯಂಗಡಿ ಕಾಂಕ್ರೀಕರಣ ರಸ್ತೆ ಉದ್ಘಾಟನೆ
ಇದೇ ಸಂದರ್ಭ ದ.ಕ. ಸಂಸದರ ಅನುದಾನದಿಂದ ೧೫ ಲಕ್ಷ, ಜಿಲ್ಲಾ ಪಂಚಾಯಿತಿಯಿಂದ ೫ ಲಕ್ಷ ಮೆನ್ನಬೆಟ್ಟು ಗ್ರಾ. ಪಂ. ನಡುಗೋಡು ಸದಸ್ಯರ ೨.೪೦ಲಕ್ಷ ಅನುದಾನಗಳಿಂದ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಲ್ಲಿಗೆಯಂಗಡಿಯ ಕಾಂಕ್ರೀಕರಣ ರಸ್ತೆಯನ್ನು ಉದ್ಘಾಟಿಸಲಾಯಿತು.

Friday, September 26, 2014

katil temple navaratri



ಕಟೀಲು ದೇಗುಲದಲ್ಲಿ ಚೆನ್ನೈನ ಧ್ವನಿ ಬಳಗದವರಿಂದ ಭರತನಾಟ್ಯ ನಡೆಯಿತು.




 ಕಟೀಲು ಗ್ರಾಮಸ್ಥರು ನವರಾತ್ರಿ ತ್ರತೀಯ ದಿನ ಹುಲಿವೇಷ ಸಹಿತ ವಿವಿಧ ವೇಷಗಳನ್ನು ತೊಟ್ಟು ವೈಭವದ ಮೆರವಣಿಗೆಯಲ್ಲಿ ಬಂದು ಹರಕೆ ತೀರಿಸಿದರು. 

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿ ಪ್ರಯುಕ್ತ ಭಾನುವಾರ ಸಂಜೆ ಗಾರ್ಗಿ ಶಬರಾಯ, ಅರ್ಚನಾ ಮತ್ತು ಸಮನ್ವಿಯವರಿಂದ ಶಾಸ್ತ್ರೀಯ ಸಂಗೀತ ಜರಗಿತು.






Saturday, September 20, 2014

ಕಟೀಲು : ಆಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಸಂಮಾನ

ಕಟೀಲು : ದೇವೀ ಆರಾಧಕರಾಗಿಯಷ್ಟೇ ಅಲ್ಲ ಜನಮಾನಸದಲ್ಲೂ ಸ್ಥಿರಸ್ಥಾಯಿಯಾಗಿ ಉಳಿಯುವಂತಹ ಪ್ರೀತಿ, ಸಹಾಯ ಹಸ್ತ, ಧೈರ‍್ಯ ತುಂಬುವ ವ್ಯಕ್ತಿತ್ವದಿಂದಾಗಿಯೂ ಗೋಪಾಲಕೃಷ್ಣ ಆಸ್ರಣ್ಣರು ಸದಾ ಸ್ಮರಣೀಯರು ಎಂದು ಮಂಗಳೂರಿನ ಎ.ಜೆ ಆಸ್ಪತ್ರೆಯ ನಿರ್ದೇಶಕ ಎ.ಜೆ ಶೆಟ್ಟಿ ಹೇಳಿದರು.
ಶನಿವಾರ ಕಟೀಲಿನ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ  ನಡೆದ  ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ, ಆಸ್ರಣ್ಣ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ ಡಾ. ರಾಧಾಕೃಷ್ಣ ಭಟ್ ಪೆರ್ಲ ಸಂಸ್ಮರಣಾ ಭಾಷಣ ಮಾಡಿದರು.
ಕಟೀಲು ಮೇಳದ ಕಲಾವಿದರಾದ ಮಂಜುನಾಥ ಭಟ್ ಅವರಿಗೆ ಕದ್ರಿ ಬಳಗದ ವತಿಯಿಂದ ದಿ.ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಅರ್ಚಕರ ನೆಲೆಯಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಅರ್ಚಕ ವೇದಮೂರ್ತಿ ನರಸಿಂಹ ಉಪಾಧ್ಯಾಯ, ಮೊಕ್ತೇಸರರ ನೆಲೆಯಲ್ಲಿ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಳದ ಮೊಕ್ತೇಸರ ಸುದರ್ಶನ ಶೆಟ್ಟಿ ಹಾಗೂ ಕಲಾವಿದರ ನೆಲೆಯಲ್ಲಿ ಕಟೀಲು ಮೇಳದ ಸುರೇಶ ಕುಪ್ಪೆಪದವು ಅವರನ್ನು ಸನ್ಮಾನಿಸಲಾಯಿತು.
ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್,  ಎಮ್‌ಸಿಎಫ್‌ನ ಪ್ರಭಾಕರ ರಾವ್, ಬಜಪೆ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಶಂಕರನಾರಾಯಣ ಭಟ್‌ರನ್ನು ಗೌರವಿಸಲಾಯಿತು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರಿಯ ಉದ್ಯಮಿ ಶ್ರೀಪತಿ ಭಟ್, ಭಂಡಾರಿ ಮಹಾಮಂಡಲದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಮುಂಬೈ ಉದ್ಯಮಿಗಳಾದ ಐಕಳ ಗಣೇಶ್ ಶೆಟ್ಟಿ , ಮರವೂರು ಜಗದೀಶ ಶೆಟ್ಟಿ , ಭುಜಂಗ ಶೆಟ್ಟಿ , ನಿಲೇಶ್ ಶೆಟ್ಟಿಗಾರ್, ಲೀಲಾಕ್ಷ ಕರ್ಕೇರಾ, ಕೆ. ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ ,  ಕದ್ರಿ ನವನೀತ ಶೆಟ್ಟಿ, ಪಿ. ಸತೀಶ್ ರಾವ್, ದೊಡ್ಡಯ್ಯ ಮೂಲ್ಯ, ಮೋಹನ್ ಮೆಂಡನ್, ಗುರುಪ್ರಸಾದ್, ಶರತ್ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ರಮ್ಯಾ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಯಕ್ಷಗಾನ ಬಯಲಾಟ ನಡೆಯಿತು.

Thursday, September 11, 2014

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ : ಕಟೀಲು, ಬಜ್ಪೆಗೆ ಪ್ರಶಸ್ತಿ

ಕಟೀಲು : ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಟೀಲು ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಳದ ಸಹಕಾರದೊಂದಿಗೆ ಕಟೀಲಿನಲ್ಲಿ ನಡೆದ ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಟೀಲು, ಬೋಂದೇಲ್ ಹಾಗೂ ಬಜಪೆ ಶಾಲಾ ತಂಡಗಳು ಪ್ರಶಸ್ತಿ ಪಡೆದವು.
ಉದ್ಘಾಟನೆ ಸಮಾರಂಭದಲ್ಲಿ ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣರು, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಘುನಾಥ ಶೆಟ್ಟಿ ಹಾಗೂ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ದಯಾನಂದ ಮಾಡ ಎಕ್ಕಾರು, ಉಪ ಪ್ರಾಂಶುಪಾಲರಾದ ಶ್ರೀ ಕೆ. ವಿ. ಶೆಟ್ಟಿ, ದೈಹಿಕ ಶಿಕ್ಷಕರಾದ ಪುಂಡಲೀಕ ಕೊಠಾರಿ ಉಪಸ್ಥಿತರಿದ್ದರು.
ಶ್ರೀಹರಿನಾರಾಯಣದಾಸ ಆಸ್ರಣ್ಣರು ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಾಥಮಿಕ ಶಾಲಾ: ಬಾಲಕರು:
ಪ್ರಥಮ: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆ, ಕಟೀಲು.
ದ್ವಿತೀಯ: ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೋಂದೇಲ್, ಮಂಗಳೂರು.
ಪ್ರಾಥಮಿಕ ಶಾಲಾ ಬಾಲಕಿಯರು:



ಪ್ರಥಮ: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆ, ಕಟೀಲು.
ದ್ವಿತೀಯ: ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೋಂದೇಲ್, ಮಂಗಳೂರು.
ಪ್ರೌಢಶಾಲಾ ವಿಭಾಗ: ಬಾಲಕರು:
ಪ್ರಥಮ: ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಜ್ಪೆ.
ದ್ವಿತೀಯ: ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ,
       ಕಟೀಲು
ಪ್ರೌಢಶಾಲಾ ವಿಭಾಗ: ಬಾಲಕಿಯರು:
ಪ್ರಥಮ: ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ,
      ಕಟೀಲು
ದ್ವಿತೀಯ: ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಜ್ಪೆ.

Wednesday, September 10, 2014

ಕಟೀಲಿಗೆ ಉತ್ತರಾದಿ ಮಠ ಶ್ರೀ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಬುಧವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಬಂಧುಗಳಾದ ಲಕ್ಷ್ಮೀನಾರಾಯಣ, ಅನಂತಪದ್ಮನಾಭ, ಶ್ರೀಹರಿನಾರಾಯಣದಾಸ, ದೇವೀಕುಮಾರ, ಗೋಪಾಲಕೃಷ್ಣ ಆಸ್ರಣ್ಣ ಮತ್ತಿತರರಿದ್ದರು.


Saturday, September 6, 2014

ಕಟೀಲಿನಲ್ಲಿ ಯಕ್ಷಗಾನ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೮ರಂದು ರಾತ್ರಿ ೮.೩೦ರಿಂದ ಭೀಷ್ಮ ಪರ್ವ ಹಾಗೂ ವಿಷ್ಣು ಸಹಸ್ರನಾಮ ಯಕ್ಷಗಾಣ ನಡೆಯಲಿದ್ದು, ಶ್ರೀರಮಣ ಆಚಾರ್, ವಾದಿರಾಜ ಕಲ್ಲೂರಾಯ, ಸುಣ್ಣಂಬಲ ವಿಶ್ವೇಶ ರಾವ್, ಪಶುಪತಿ ಶಾಸ್ತ್ರಿ, ಲಕ್ಷ್ಮಣ ಕುಮಾರ ಮರಕಡ, ವಾಸುದೇವ ರಂಗಾ ಭಟ್, ಶ್ರೀಹರಿ ಆಸ್ರಣ್ಣ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.

ಕಟೀಲಿನಲ್ಲಿ ಮಕ್ಕಳ ಸಂಗಮ

ಕಟೀಲು : ಅಮ್ಮ ಮಕ್ಕಳಿಗೆ ಸಾಹಿತ್ಯದ ಗುರುವಾಗಬೇಕು. ಕನ್ನಡ ಸಾಹಿತ್ಯದ ಪದಗಳನ್ನು ಹಾಡಿ ಮಗುವನ್ನು ಮಲಗಿಸುವುದರ ಬದಲಿಗೆ ಮೊಬೈಲ್ ಹಾಡುಗಳನ್ನು ಉಪಯೋಗಿದಲ್ಲಿ ಮಗು ಮುಂದೆ ದೊಡ್ಡವರಾದಾಗ ಸುಸಂಸ್ಕೃತರಾಗುವುದು ಹೇಗೆ ಎಂದು ಹೇಳಿದ್ದು ಕಾಸರಗೋಡು ಉಪ್ಪಳದ ಪೈವಳಿಕೆ ಸರಕಾರಿ ಉನ್ನತ ಪ್ರೌಢ ಶಾಲೆಯ ಪ್ರಥಮ ಪದವಿ ಪೂರ್ವ ವಿದ್ಯಾರ್ಥಿನಿ ಶ್ರದ್ಧಾ ಎನ್ ಹೇಳಿದರು.
ಕಟೀಲು ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸಂಯೋಜನೆಯಲ್ಲಿ ಶನಿವಾರ ನಡೆದ ದ.ಕ ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ೨೧ನೇ ವರ್ಷದ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರದ್ಧಾ ಮಕ್ಕಳಿಗೆ ಸಾಹಿತ್ಯ ಆಸಕ್ತಿ ಮೂಡಿಸುವ ಕೆಲಸವಾಗಬೇಕು.. ಕಾಸರಗೋಡು ಗಡಿ ಪ್ರದೇಶದ  ಶಾಲೆಯ ಕನ್ನಡ ಪಠ್ಯದಲ್ಲಿ ಸಾಹಿತ್ಯದ ಕೊರತೆ ಇದೆ ಅದನ್ನು ಪರಿಶೀಲಿಸಿ ತಿದ್ದುವ ಕೆಲಸವಾಗಬೇಕು. ಎಂದರು.
ಕಟೀಲು ದೇವಳದ ಆಡಳಿತಾಧಿಕಾರಿ ನಿಂಗಯ್ಯ ಮಕ್ಕಳ ಧ್ವನಿ ಉದ್ಘಾಟಿಸಿದರು. ಕಟೀಲು ದೇವಳದ ಮೊಕ್ತೇಸರ ಕೆ.ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಸಿ. ಉಪೇಂದ್ರ ಸೋಮಯಾಜಿ, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರಾ, ಕೇರಳ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಭುವನಾಭಿರಾಮ ಉಡುಪ, ಮಕ್ಕಳ ಸಾಹಿತ್ಯ ಸಂಗಮದ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ರಾವ್ ವೇದಿಕೆಯಲ್ಲಿದ್ದರು. ಕಟೀಲು ಪ.ಪೂ.ಕಾಲೇಜು ವಿದ್ಯಾರ್ಥಿನಿಯರಾದ ವರ್ಷಾ ಮತ್ತು ಸಂವಾದ ಪ್ರಾರ್ಥಿಸಿದರು. ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಜಯರಾಮ ಪೂಂಜಾ ಸ್ವಾಗತಿಸಿದರು. ಸಾವಿತ್ರಿ ಎಸ್.ರಾವ್ ಪ್ರಸ್ತಾವಿಸಿದರು. ಪುತ್ತೂರು ಸಾತ್ವಿಕ್ ನಾಯಕ್ ವಿಶೇಷ ಜಾದೂ ಮೂಲಕ ಬುದ್ದಿಮಾಂದ್ಯ ಜನ ಜಾಗೃತಿ ಹಾಗೂ ಸನ್ಮೇಳನ ಲಾಂಛನ ಅನಾವರಣ ನಡೆಯಿತು. ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರು ಪುಸ್ತಕ ಪ್ರಕಟಿಸಿದ ಶೃದ್ಧಾ ಎನ್. ಪೈವಳಿಕೆ, ವಿನಯ ಕೆ.ಪೆರ‍್ವ, ಶ್ರಾವ್ಯ ಕೊಲ್ನಾಡು, ಅನನ್ಯ ಬೆಳ್ತಂಗಡಿಯವರಿಗೆ ಗೌರವಧನ ವಿತರಿಸಿದರು. ಕಟೀಲು ಪ.ಪೂ ಕಾಲೇಜು ಉಪನ್ಯಾಸಕ ಗೋಪೀನಾಥ ಹೆಗ್ಡೆ ನಿರೂಪಿಸಿದರು. ಕಾರ್ಯದರ್ಶಿ ಬಿ.ಶ್ರೀನಿವಾಸ ರಾವ್ ವಂದಿಸಿದರು.

Tuesday, September 2, 2014

ಪ್ರತಿಭಾಕಾರಂಜಿ

ದಿನಾಂಕ ೨೭.೦೮.೨೦೧೪ರಂದು ಪದ್ಮನೂರು ಮತ್ತು ಉಲ್ಲಂಜೆ ಕ್ಲಸ್ಟರ‍್ಗಳ ಪ್ರತಿಭಾಕಾರಂಜಿ ೨೦೧೪. ಕಟೀಲು ಶ್ರೀ ದು.ಪ.ಹಿ.ಪ್ರಾ.ಶಾಲೆಯಲ್ಲಿ ಜರಗಿತು.ಕಾರ್ಯಕ್ರಮವನ್ನು ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ರೇಸರ ಕೆ,ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಜನಾರ್ದನ ಕಿಲೆಂಜೂರು ವಹಿಸಿದ್ದರು.ಪಂಚಾಯತ್ ಸದಸ್ಯರಾದ ಶ್ರೀಮತಿ ರೋಜಿ ಪಿಂಟೋ ಶ್ರೀ ರಾಮ್ ಗೋಪಾಲ್,ಶಾಲಾಭಿವೃದ್ಧಿ ಅಧ್ಯಕ್ಷ ವೆಂಕಟರಮಣ ಹೆಗಡೆ,ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಗದೀಶ ನಾವಡ,ದೇವಳದ ಪ್ರೌಢಶಾಲಾ ಉಪ ಪ್ರಾಚಾರ‍್ಯ ಶ್ರೀ ಕೆ.ವಿ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಮತ್ತು ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.ಶಿಕ್ಷಕ ಶ್ರೀ ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು.ಶಿಕ್ಷಕ ವೈ.ಗೋಪಾಲ ಶೆಟ್ಟಿ ವಂದಿಸಿದರು

ವಾದಕ ಕದ್ರಿ ಗೋಪಾಲನಾಥ್‌ ಸ್ಯಾಕ್ಸೋಫೋನ್

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಂಗಳವಾರ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್‌ರಿಂದ ಚಂಡಿಕಾಹೋಮ ಹಾಗೂ ಸ್ಯಾಕ್ಸೋಫೋನ್ ವಾದನ ಸೇವೆ

ಜರಗಿತು.

Monday, September 1, 2014

ಕಟೀಲಿನಲ್ಲಿ ಕದ್ರಿಗೋಪಾಲನಾಥ್ ಸ್ಯಾಕ್ಸೋಫೋನ್

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಸಪ್ಟಂಬರ್ ೨ರ ಮಂಗಳವಾರ ಬೆಳಿಗ್ಗೆ ಕದ್ರಿ ಗೋಪಾಲನಾಥ್‌ರಿಂದ ಸ್ಯಾಕ್ಸೋಫೋನ್ ಕಛೇರಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.