Sunday, August 31, 2014

ಕೃಷಿ ಋಷಿ ಪ್ರಶಸ್ತಿ


ಕಟೀಲು : ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದಿಂದ ಕೊಡಮಾಡುವ ಕೃಷಿ ಋಷಿ ಪ್ರಶಸ್ತಿಯನ್ನು ಕಟೀಲು ಸರಸ್ವತೀ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಂದರ ದೇವಾಡಿಗ ಮಿತ್ತಬೈಲು ಹಾಗೂ ಪದ್ಮಾವತಿ ಮೂಲ್ಯೆದಿ ನಡುಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸಂಘಟಕ ಚಂದ್ರಕಾಂತ ನಾಯಕ್, ಕೃಷಿಕ ಮುರ ಸದಾಶಿವ ಶೆಟ್ಟಿ, ದೇವಸ್ಯ ಮಠದ ಕೊಡೆತ್ತೂರು ವೇದವ್ಯಾಸ ಉಡುಪ, ಬಜಪೆ ವ್ಯವಸಾಯ ಬ್ಯಾಂಕಿನ ಮೋನಪ್ಪ ಶೆಟ್ಟಿ ಎಕ್ಕಾರು, ಉದ್ಯಮಿ ರಾಧಾಕೃಷ್ಣ ನಾಯಕ್ ಮೂರುಕಾವೇರಿ ಉಪಸ್ಥಿತರಿದ್ದರು.


Sunday, August 17, 2014

ಗಿಡಿಗೆರೆ : ಮುದ್ದು ಕೃಷ್ಣ ಸ್ಪರ್ಧೆ



ಕಟೀಲು : ಇಲ್ಲಿನ ಗಿಡಿಗೆರೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ದುರ್ಗಾಂಬಿಕಾ ಯುವಕ ಯುವತಿ ಮಂಡಲಗಳ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವೀರಪ್ಪ ಮೇಸ್ತ್ರಿ ಸ್ಮರಣಾರ್ಥ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು. ಉಪನ್ಯಾಸಕ ಸುರೇಶ್, ನಾರಾಯಣ ಮುಗೇರ, ಶ್ರೀಮತಿ ಕಸ್ತೂರಿ ಪೂವಪ್ಪ ಲೋಕಯ್ಯ ಸಾಲ್ಯಾಣ್, ಕಿರಣ್ ಶೆಟ್ಟಿ, ಶ್ರೀಮತಿ ಶೋಭಾ, ತಿಮ್ಮಪ್ಪ ಮೇಸ್ತ್ರಿ, ಸುಶೀಲ ಯುವಕ ಮಂಡಲದ ಪುರಂದರ, ಗಿರಿಯಪ್ಪ ಎಂ., ಹರೀಶ್ ಎಂ, ಲೋಕಯ್ಯ ಗಿಡಿಗೆರೆ ಮತ್ತಿತರರಿದ್ದರು.
ವಿಜೇತರು :ತೊಟ್ಟಿಲು ಕೃಷ್ಣ : ಸಾತ್ವಿಕ್, ವಿಲಾಸ್, ಅಂಗನವಾಡಿ : ಋಷಿಕಾ, ಸಾನ್ವಿ ಶೆಟ್ಟಿ, ೧ರಿಂದ ೪ತರಗತಿ: ಅಭೀಷ್ಣ, ಸುಚಿತ್ರಾ, ರಾಧಾಕೃಷ್ಣ : ಮೇಘ ಮತ್ತು ಶ್ರಾವ್ಯ, ಪೂಜಾ ಮತ್ತು ಸಾಕ್ಷಿ

ಕಟೀಲು ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ

ಬ್ರಾಹ್ಮಣ್ಯದ ಉಳಿವಿನಿಂದ ಗೌರವ-ವೇದವ್ಯಾಸ ಐತಾಳ್
ಕಟೀಲು : ಜಪ, ಪೂಜೆ, ಧಾರ್ಮಿಕ ಕರ್ಮಾನುಷ್ಟಾನಗಳಿಂದ, ನಡತೆಯಿಂದ ಬ್ರಾಹ್ಮಣ್ಯವನ್ನು ಉಳಿಸಿಕೊಂಡರಷ್ಟೇ ಬ್ರಾಹ್ಮಣರಿಗೆ ಗೌರವ. ಆಧುನಿಕತೆಯ ಜೊತೆಜೊತೆಯಲ್ಲೇ ಸಂಪ್ರದಾಯ, ಆಚರಣೆಗಳ, ಸಂಬಂಧ, ಮಹತ್ವಗಳ ಅರಿವು ಇಂದಿನ ಜನಾಂಗಕ್ಕೆ ಕೊಡಬೇಕಾದ ಅಗತ್ಯವಿದೆ ಎಂದು ಉಡುಪಿ ಅನಂತೇಶ್ವರ ದೇವಸ್ಥಾನದ ಸಗ್ರಿ ವೇದವ್ಯಾಸ ಐತಾಳ್ ಹೇಳಿದರು.
ಅವರು ಭಾನುವಾಋ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಬರಹಗಾರ್ತಿ ಶಕುಂತಳಾ ಭಟ್, ಇವತ್ತಿನ ದಿನಮಾನಕ್ಕೆ ಅನುಗುಣವಾಗಿ ಸಂಘಟನೆಯೊಂದಿಗೆ ಆಚರಣೆಗಳಲ್ಲಿ, ಅನುಷ್ಠಾನಗಳಲ್ಲಿ ಬದಲಾವಣೆಯ ಕುರಿತೂ ಚಿಂತಿಸಬೇಕಾಗಿದೆ ಎಂದರು.
ಸಾಧಕ ಎಕ್ಕಾರು ಡಾ.ಪದ್ಮನಾಭ ಭಟ್, ಸೌಮ್ಯಾ ನಾರಾಯಣ ಭಟ್‌ರನ್ನು ಅಭಿನಂದಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಸಭಾದ ಅಧ್ಯಕ್ಷ ಡಾ.ಶಶಿಕುಮಾರ್, ಕಾರ‍್ಯದರ್ಶಿ ಕೊಡೆತ್ತೂರು ವೇದವ್ಯಾಸ ಉಡುಪ, ರಾಘವೇಂದ್ರ ಭಟ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ ಮತ್ತಿತರರಿದ್ದರು. ಅನಂತಕೃಷ್ಣ, ಸುಧಾ ಉಡುಪ ಅತಿಥಿಗಳನ್ನು ಪರಿಚಯಿಸಿದರು. ಸುರೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Saturday, August 16, 2014

18 : ಕಟೀಲಿನಲ್ಲಿ ಯಕ್ಷಗಾನ

18 : ಕಟೀಲಿನಲ್ಲಿ ಯಕ್ಷಗಾನ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೧೮ರ ಸೋಮವಾರ ಮಧ್ಯಾಹ್ನ ೩.೩೦ರಿಂದ ’ಕಾಳಿಂಗ ಮರ್ದನ, ಕೃಷ್ಣ ಲೀಲೆ, ರಾಧಾ ವಿಲಾಸ’ ಯಕ್ಷಗಾನ ನಡೆಯಲಿದೆ. ಬಲಿಪ ಪ್ರಸಾದ, ಪ್ರಪುಲ್ಲಚಂದ್ರ, ನಾರಾಯಣ ಭಟ್, ಸೋಮಶೇಖರ, ವಿಶ್ವೇಶ್ವರ ರಾವ್, ರೆಂಜಾಳ ರಾಮಕೃಷ್ಣ, ಪಡ್ರೆ ಕುಮಾರ, ಮುಖ್ಯಪ್ರಾಣ ಕಿನ್ನಿಗೋಳಿ,  ವಿಶ್ವನಾಥ ತೋಡಿಕಾನ, ಚಂದ್ರ ಶೇಖರ ಧರ್ಮಸ್ಥಳ, ಸತೀಶ್ ನೈನಾಡು, ರಾಜೇಶ, ಅಕ್ಷಯ, ಪ್ರೇಮರಾಜ್, ರವಿಶಂಕರ ವಳಕ್ಕುಂಜ, ಬಾಬು ಗೌಡ, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ, ಪ್ರಜ್ವಲ್ ಕುಮಾರ್, ಮಹೇಶ್ ಮಣಿಯಾಣಿ, ಲಕ್ಷ್ಮಣ ಕೋಟ್ಯಾನ್ ಭಾಗವಹಿಸಲಿದ್ದಾರೆಂದು ಕಟೀಲು ಶ್ರೀನಿವಾಸ ಆಸ್ರಣ್ಣ ಟ್ರಸ್ಟ್, ಹಾಗೂ ದೇಗುಲದ ಪ್ರಕಟನೆ ತಿಳಿಸಿದೆ.