Tuesday, June 30, 2015

ಕಟೀಲಿನಲ್ಲಿ ರಾಮಾಯಣ ಕಥಾ ಮಾಲಿಕೆ

ಕಟೀಲು : ತಂದೆಯ ಮಾತಿನಂತೆ ವನವಾಸಕ್ಕೆ ತೆರಳಿದ ಶ್ರೀ ರಾಮಚಂದ್ರ ಆದರ್ಶ ಪುರುಷನಾಗಿ ಸರ್ವರಿಂದಲೂ ಪೂಜ್ಯನೀಯನೆನಿಸಿದಾತ. ರಾಮರಾಜ್ಯವಾಗಲಿ ಎಂಬ ಆಶಯದ ಹಿಂದೆ ಅವತ್ತಿನ ಆಡಳಿತದ ಶ್ರೇಷ್ಟತೆ ಅರ್ಥೈಸಿಕೊಳ್ಳಬಹುದೆಂದು ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಶಾಲಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿ ತಿಂಗಳು ರಾಮಾಯಣದ ವಿವಿಧ ಪಾತ್ರಗಳ ಪರಿಚಯ ನೀಡುವ ರಾಮಾಯಣ ಕಥಾ ಮಾಲಿಕೆಯಲ್ಲಿ ಶ್ರೀ ರಾಮನ ಬಗ್ಗೆ ಉಪನ್ಯಾಸವಿತ್ತರು. 
ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಕೆ. ವನಮಾಲಾ ಸ್ವಾಗತಿಸಿದರು. ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಕ್ಷಕ ಸಂಘದ ವೆಂಕಟರಮಣ ಹೆಗ್ಡೆ ವಂದಿಸಿದರು.

Friday, June 12, 2015

ಕಟೀಲು ಸಾಮೂಹಿಕ ವಿವಾಹ :

೮ಜೋಡಿಗಳು ದಾಂಪತ್ಯಕ್ಕೆ ಜೀವನಕ್ಕೆ
ಕಟೀಲು : ಇಲ್ಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಉಸ್ತುವಾರಿಯಲ್ಲಿ ಬುಧವಾರ ನಡೆದ ಎಂಟನೆಯ ವರುಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು.
ಏಳು ವರುಷಗಳಲ್ಲಿ ೭೫ಜೋಡಿಗಳು ವಿವಾಹವಾಗಿದ್ದರೆ ಈ ವರುಷ ಹರೀಶ್ - ಹರಿಣಾಕ್ಷಿ, ಮಹಾಬಲ - ಬೇಬಿ, ಶಿವಕುಮಾರ್ - ಗೀತಾ, ರಂಜಿತ್ - ಸಾವಿತ್ರಿ, ಶಿವಪ್ರಸಾದ ಎ.ಪಿ.- ಯಶೋದಾ, ಸಂದೀಪ್ - ಶ್ವೇತಾ, ವಸಂತ - ವಾಣಿಶ್ರೀ, ಹರಿಪ್ರಸಾದ್ - ಶ್ವೇತಾ ವಿವಾಹವಾದರು.
ಮುಂಬೈನ ಸುವರ್ಣ ಬಾಬಾ, ಅನಿಲ್ ಶೆಟ್ಟಿ, ರಾಘವೇಂದ್ರ ಶಾಸ್ತ್ರಿ, ಕೇಶವ ಅಂಚನ್ ಮುಂಬೈ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಪಿ. ಸತೀಶ್ ರಾವ್, ಧನಂಜಯ ಆಚಾರ್, ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ ಮುಂತಾದವರಿದ್ದರು.

Saturday, June 6, 2015

ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕ ವಿತರಣೆ


ಕಟೀಲು : ಇಲ್ಲಿನ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೯೦ ವಿದ್ಯಾರ್ಥಿಗಳಿಗೆ ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದಾನಿ ರಾಜು ಪಿ. ಶೆಟ್ಟಿ ಮುಂಬೈ, ರವೀಶ ಪಿಂಟೋ, ಸಂಸ್ಥೆಯ ಕೇಶವ ಕಟೀಲು, ಪ್ರದೀಪ್ ಶೆಟ್ಟಿ, ಸುವಿನ್ ಆಚಾರ‍್ಯ, ರಮೇಶ್ ಐ.ಕೆ, ಐವನ್ ಡಿಸೋಜ, ಮುಖ್ಯ ಶಿಕ್ಷಕಿ ವನಮಾಲಾ ಕೆ., ಗೋಪಾಲ್  ಮತ್ತಿತರರಿದ್ದರು.