Saturday, September 6, 2014

ಕಟೀಲಿನಲ್ಲಿ ಮಕ್ಕಳ ಸಂಗಮ

ಕಟೀಲು : ಅಮ್ಮ ಮಕ್ಕಳಿಗೆ ಸಾಹಿತ್ಯದ ಗುರುವಾಗಬೇಕು. ಕನ್ನಡ ಸಾಹಿತ್ಯದ ಪದಗಳನ್ನು ಹಾಡಿ ಮಗುವನ್ನು ಮಲಗಿಸುವುದರ ಬದಲಿಗೆ ಮೊಬೈಲ್ ಹಾಡುಗಳನ್ನು ಉಪಯೋಗಿದಲ್ಲಿ ಮಗು ಮುಂದೆ ದೊಡ್ಡವರಾದಾಗ ಸುಸಂಸ್ಕೃತರಾಗುವುದು ಹೇಗೆ ಎಂದು ಹೇಳಿದ್ದು ಕಾಸರಗೋಡು ಉಪ್ಪಳದ ಪೈವಳಿಕೆ ಸರಕಾರಿ ಉನ್ನತ ಪ್ರೌಢ ಶಾಲೆಯ ಪ್ರಥಮ ಪದವಿ ಪೂರ್ವ ವಿದ್ಯಾರ್ಥಿನಿ ಶ್ರದ್ಧಾ ಎನ್ ಹೇಳಿದರು.
ಕಟೀಲು ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸಂಯೋಜನೆಯಲ್ಲಿ ಶನಿವಾರ ನಡೆದ ದ.ಕ ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ೨೧ನೇ ವರ್ಷದ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರದ್ಧಾ ಮಕ್ಕಳಿಗೆ ಸಾಹಿತ್ಯ ಆಸಕ್ತಿ ಮೂಡಿಸುವ ಕೆಲಸವಾಗಬೇಕು.. ಕಾಸರಗೋಡು ಗಡಿ ಪ್ರದೇಶದ  ಶಾಲೆಯ ಕನ್ನಡ ಪಠ್ಯದಲ್ಲಿ ಸಾಹಿತ್ಯದ ಕೊರತೆ ಇದೆ ಅದನ್ನು ಪರಿಶೀಲಿಸಿ ತಿದ್ದುವ ಕೆಲಸವಾಗಬೇಕು. ಎಂದರು.
ಕಟೀಲು ದೇವಳದ ಆಡಳಿತಾಧಿಕಾರಿ ನಿಂಗಯ್ಯ ಮಕ್ಕಳ ಧ್ವನಿ ಉದ್ಘಾಟಿಸಿದರು. ಕಟೀಲು ದೇವಳದ ಮೊಕ್ತೇಸರ ಕೆ.ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಸಿ. ಉಪೇಂದ್ರ ಸೋಮಯಾಜಿ, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರಾ, ಕೇರಳ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಭುವನಾಭಿರಾಮ ಉಡುಪ, ಮಕ್ಕಳ ಸಾಹಿತ್ಯ ಸಂಗಮದ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ರಾವ್ ವೇದಿಕೆಯಲ್ಲಿದ್ದರು. ಕಟೀಲು ಪ.ಪೂ.ಕಾಲೇಜು ವಿದ್ಯಾರ್ಥಿನಿಯರಾದ ವರ್ಷಾ ಮತ್ತು ಸಂವಾದ ಪ್ರಾರ್ಥಿಸಿದರು. ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಜಯರಾಮ ಪೂಂಜಾ ಸ್ವಾಗತಿಸಿದರು. ಸಾವಿತ್ರಿ ಎಸ್.ರಾವ್ ಪ್ರಸ್ತಾವಿಸಿದರು. ಪುತ್ತೂರು ಸಾತ್ವಿಕ್ ನಾಯಕ್ ವಿಶೇಷ ಜಾದೂ ಮೂಲಕ ಬುದ್ದಿಮಾಂದ್ಯ ಜನ ಜಾಗೃತಿ ಹಾಗೂ ಸನ್ಮೇಳನ ಲಾಂಛನ ಅನಾವರಣ ನಡೆಯಿತು. ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ರವರು ಪುಸ್ತಕ ಪ್ರಕಟಿಸಿದ ಶೃದ್ಧಾ ಎನ್. ಪೈವಳಿಕೆ, ವಿನಯ ಕೆ.ಪೆರ‍್ವ, ಶ್ರಾವ್ಯ ಕೊಲ್ನಾಡು, ಅನನ್ಯ ಬೆಳ್ತಂಗಡಿಯವರಿಗೆ ಗೌರವಧನ ವಿತರಿಸಿದರು. ಕಟೀಲು ಪ.ಪೂ ಕಾಲೇಜು ಉಪನ್ಯಾಸಕ ಗೋಪೀನಾಥ ಹೆಗ್ಡೆ ನಿರೂಪಿಸಿದರು. ಕಾರ್ಯದರ್ಶಿ ಬಿ.ಶ್ರೀನಿವಾಸ ರಾವ್ ವಂದಿಸಿದರು.

No comments:

Post a Comment