Saturday, September 20, 2014

ಕಟೀಲು : ಆಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಸಂಮಾನ

ಕಟೀಲು : ದೇವೀ ಆರಾಧಕರಾಗಿಯಷ್ಟೇ ಅಲ್ಲ ಜನಮಾನಸದಲ್ಲೂ ಸ್ಥಿರಸ್ಥಾಯಿಯಾಗಿ ಉಳಿಯುವಂತಹ ಪ್ರೀತಿ, ಸಹಾಯ ಹಸ್ತ, ಧೈರ‍್ಯ ತುಂಬುವ ವ್ಯಕ್ತಿತ್ವದಿಂದಾಗಿಯೂ ಗೋಪಾಲಕೃಷ್ಣ ಆಸ್ರಣ್ಣರು ಸದಾ ಸ್ಮರಣೀಯರು ಎಂದು ಮಂಗಳೂರಿನ ಎ.ಜೆ ಆಸ್ಪತ್ರೆಯ ನಿರ್ದೇಶಕ ಎ.ಜೆ ಶೆಟ್ಟಿ ಹೇಳಿದರು.
ಶನಿವಾರ ಕಟೀಲಿನ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ  ನಡೆದ  ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ, ಆಸ್ರಣ್ಣ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ ಡಾ. ರಾಧಾಕೃಷ್ಣ ಭಟ್ ಪೆರ್ಲ ಸಂಸ್ಮರಣಾ ಭಾಷಣ ಮಾಡಿದರು.
ಕಟೀಲು ಮೇಳದ ಕಲಾವಿದರಾದ ಮಂಜುನಾಥ ಭಟ್ ಅವರಿಗೆ ಕದ್ರಿ ಬಳಗದ ವತಿಯಿಂದ ದಿ.ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಅರ್ಚಕರ ನೆಲೆಯಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಅರ್ಚಕ ವೇದಮೂರ್ತಿ ನರಸಿಂಹ ಉಪಾಧ್ಯಾಯ, ಮೊಕ್ತೇಸರರ ನೆಲೆಯಲ್ಲಿ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಳದ ಮೊಕ್ತೇಸರ ಸುದರ್ಶನ ಶೆಟ್ಟಿ ಹಾಗೂ ಕಲಾವಿದರ ನೆಲೆಯಲ್ಲಿ ಕಟೀಲು ಮೇಳದ ಸುರೇಶ ಕುಪ್ಪೆಪದವು ಅವರನ್ನು ಸನ್ಮಾನಿಸಲಾಯಿತು.
ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್,  ಎಮ್‌ಸಿಎಫ್‌ನ ಪ್ರಭಾಕರ ರಾವ್, ಬಜಪೆ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಶಂಕರನಾರಾಯಣ ಭಟ್‌ರನ್ನು ಗೌರವಿಸಲಾಯಿತು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರಿಯ ಉದ್ಯಮಿ ಶ್ರೀಪತಿ ಭಟ್, ಭಂಡಾರಿ ಮಹಾಮಂಡಲದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಮುಂಬೈ ಉದ್ಯಮಿಗಳಾದ ಐಕಳ ಗಣೇಶ್ ಶೆಟ್ಟಿ , ಮರವೂರು ಜಗದೀಶ ಶೆಟ್ಟಿ , ಭುಜಂಗ ಶೆಟ್ಟಿ , ನಿಲೇಶ್ ಶೆಟ್ಟಿಗಾರ್, ಲೀಲಾಕ್ಷ ಕರ್ಕೇರಾ, ಕೆ. ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ ,  ಕದ್ರಿ ನವನೀತ ಶೆಟ್ಟಿ, ಪಿ. ಸತೀಶ್ ರಾವ್, ದೊಡ್ಡಯ್ಯ ಮೂಲ್ಯ, ಮೋಹನ್ ಮೆಂಡನ್, ಗುರುಪ್ರಸಾದ್, ಶರತ್ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ರಮ್ಯಾ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಯಕ್ಷಗಾನ ಬಯಲಾಟ ನಡೆಯಿತು.

No comments:

Post a Comment