Monday, September 29, 2014

ಕಟೀಲಮ್ಮನ ನಂಬಿದರೆ ಯಶಸ್ಸು ಖಂಡಿತ -ನಳಿನ್ ಕುಮಾರ್

ಕಟೀಲು : ಶ್ರದ್ಧಾ ಭಕ್ತಿಯನ್ನು ನಂಬಿದ ಭಕ್ತನನ್ನು ಕಟೀಲಮ್ಮ ಯಾವತ್ತಿಗೂ ಕೈ ಬಿಡಲಾರಳು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಶ್ರೀ ಕ್ಷೇತ್ರ ಕಟೀಲಿಗೆ ಕೊಡೆತ್ತೂರಿನಿಂದ ಬರುವ ಹುಲಿವೇಷ ಮೆರವಣಿಗೆಯ ಐವತ್ತರ ವರ್ಷದ ಸಂಭ್ರಮಾಚರಣೆಯ ಪೂರ್ವಭಾವಿಯಾಗಿ ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಆಯೋಜಿಸಿದ ಕೊಡೆತ್ತೂರು ಮೂಡುಮನೆಯ ಮುಂಭಾಗದ ಲಲಿತಾ ನಂದಿನಿ ವೇದಿಕೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ   ಮಾತನಾಡಿದರು.
ಗುರುಪುರ ಶ್ರೀ Pತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, . ಮೂ. ವಾಸುದೇವ ಆಚಾರ್ಯ ಶಿಬರೂರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಭುವನಾಭಿರಾಮ ಉಡುಪ,ಐಕಳ ಗಣೇಶ್ ವಿ. ಶೆಟ್ಟಿ, ಯಾದವ ಕೋಟ್ಯಾನ್ ಪೆರ್ಮುದೆ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ರಘುರಾಮ ಶೆಟ್ಟಿ ಪದವಿನಂಗಡಿ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ನಿರಂಜನ ಶೆಟ್ಟಿ  ಕೊಡೆತ್ತೂರು ಮಾಗಂದಡಿ, ಮುಂಬಯಿ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಕೊಡೆತ್ತೂರು ಸಾಂತ್ಯ, ಸಮಿತಿ ಅಧ್ಯಕ್ಷ ಈಶ್ವರ  ಕಟೀಲ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಎಸ್. ಶೆಟ್ಟಿ, ಕಾರ್ಯಧ್ಯಕ್ಷ ಲೋಕೇಶ್ ಶೆಟ್ಟಿ,ಸೋಂದಾ ಭಾಸ್ಕರ ಭಟ್,ಗುರುರಾಜ್  ಉಪಸ್ಥಿತರಿದ್ದರು.
ಕಳೆದ ೫೦ ವರ್ಷಗಳಿಂದ ಕೊಡೆತ್ತೂರು ಮೆರವಣಿಗೆ ಸೇವಾ ಸಮಿತಿಯಲ್ಲಿ ಸೇವೆಗೈದ ಬಿ. ವಿಶ್ವನಾಥ ಶೆಟ್ಟಿ ಕೊಡೆತ್ತೂರು, ಚಂದ್ರಕಾಂತ್ ನಾಯಕ್ ಕಟೀಲು, ಪ್ರಭಾಕರ ಶೆಟ್ಟಿ, ವಾಸುದೇವ ಆಚಾರ್ಯ ಹಾಗೂ ಕಂಬಳಿ ಅವರನ್ನು ಸನ್ಮಾನಿಸಲಾಯಿತು. " ಸುವರ್ಣ ಸ್ಪರ್ಶ " ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಉಚಿತ ನೇತ್ರ ಚಿಕಿತ್ಸೆಯ ಫಲಾನುಭಾವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಉತ್ತಮ ಸಾಧನೆಗೈದ ಪರಿಸರದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮಲ್ಲಿಗೆಯಂಗಡಿ ಕಾಂಕ್ರೀಕರಣ ರಸ್ತೆ ಉದ್ಘಾಟನೆ
ಇದೇ ಸಂದರ್ಭ ದ.ಕ. ಸಂಸದರ ಅನುದಾನದಿಂದ ೧೫ ಲಕ್ಷ, ಜಿಲ್ಲಾ ಪಂಚಾಯಿತಿಯಿಂದ ೫ ಲಕ್ಷ ಮೆನ್ನಬೆಟ್ಟು ಗ್ರಾ. ಪಂ. ನಡುಗೋಡು ಸದಸ್ಯರ ೨.೪೦ಲಕ್ಷ ಅನುದಾನಗಳಿಂದ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಲ್ಲಿಗೆಯಂಗಡಿಯ ಕಾಂಕ್ರೀಕರಣ ರಸ್ತೆಯನ್ನು ಉದ್ಘಾಟಿಸಲಾಯಿತು.

No comments:

Post a Comment