Friday, May 9, 2014

Monday, April 28, 2014

ಕಟೀಲು ವಸಂತ ವೇದ ಶಿಬಿರ

ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾರ್ಥಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು ಎಂದು ಹಿರಿಯ ವಿದ್ವಾಂಸ ಕೃಷ್ಣ ಭಟ್ ಅಂಗಡಿಮಾರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಸಂಜೀವಿನಿ ಟ್ರಸ್ಟ್ ಮುಂಬೈ ಹಾಗೂ ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಬುಧವಾರ ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ವಸಂತ ವೇದ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ, ಕಟೀಲು ದೇವಳ ಅರ್ಚಕ ಹರಿ ನಾರಾಯಣ ಆಸ್ರಣ್ಣ, ಉಪಸ್ಥಿತರಿದ್ದರು.
ಸಂಜೀವಿನಿ ಟ್ರಸ್ಟ್‌ನ ಡಾ| ಸುರೇಶ್ ರಾವ್, ಉಪನ್ಯಾಸಕ ನಾಗರಾಜ್ ಭಟ್ ವೇದ ಘೋಷದೊಂದಿಗೆ ಪ್ರಾರ್ಥಿಸಿದರು, ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಕಾಲೇಜು ಪ್ರಿನ್ಸಿಪಾಲ್ ಡಾ| ಪದ್ಮನಾಭ ಮರಾಠೆ ಸ್ವಾಗತಿಸಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.

Friday, April 11, 2014

ಕಟೀಲು ಜಾತ್ರೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ.೧೪ರಿದ ೨೧ರವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ. ತಾ.೧೪ರಂದು ಧ್ವಜಾರೋಹಣ, ತಾ.೧೬ಕ್ಕೆ ಮೂಡು ಸವಾರಿ, ತಾ.೧೮ಕ್ಕೆ ಬೆಳ್ಳಿ ರಥೋತ್ಸವ, ತಾ.೧೯ಕ್ಕೆ ಪಡು ಸವಾರಿ, ತಾ.೨೦ಕ್ಕೆ ಹಗಲು ಬ್ರಹ್ಮರಥೋತ್ಸವ, ತಾ.೨೧ಕ್ಕೆ ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಆರಟ ನಡೆಯಲಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ ತಿಳಿಸಿದ್ದಾರೆ. ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ತಾ. ೧೪ಕ್ಕೆ ಸಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ತಂಡದಿಂದ ಗೊಂಬೆಯಾಟ - ’ನರಕಾಸುರ ಮೋಕ್ಷ’ ತಾ. ೧೫ಕ್ಕೆ ಡಮರು ನೃತ್ಯ ಕಲಾಕೇಂದ್ರ ಕಿನ್ನಿಗೋಳಿ ಇವರಿಂದ ನೃತ್ಯ ವೈವಿಧ್ಯ, ತಾ. ೧೬ಕ್ಕೆ ಯಕ್ಷಗಾನ ತಾಳಮದ್ದಲೆ - ’ಸತ್ವ ಪರೀಕ್ಷೆ’ ನಡೆಯಲಿದ್ದು, ಪದ್ಯಾಣ ಗಣಪತಿ ಭಟ್, ಪದ್ಮನಾಭ ಉಪಾಧ್ಯಾಯ, ಯೋಗೀಶ ಆಚಾರ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಸರ್ಪಂಗಳ ಈಶ್ವರ ಭಟ್, ವಾಸುದೇವ ರಂಗಾ ಭಟ್ಟ, ರಾಮ ಜೋಯಿಸ, ವಾದಿರಾಜ ಕಲ್ಲೂರಾಯ ಭಾಗವಹಿಸಲಿದ್ದಾರೆ. ತಾ. ೧೭ಕ್ಕೆ ಕಲಾತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಹೊಸಬೆಟ್ಟು ಇದರ ಬಾಗ್ಲೋಡಿ ರಾಜೇಶ್ ರಾವ್ ಮತ್ತು ಶಿಷ್ಯರಿಂದ ವೇಣುವಾದನವಿದೆ.
ತಾ. ೧೮ಕ್ಕೆ ವಿದುಷಿ ಡಾ.ಶೋಭಾ ಶಶಿಕುಮಾರ್ ಬೆಂಗಳೂರು ಇವರಿಂದ ಭರತನಾಟ್ಯ, ತಾ.೧೯ಕ್ಕೆ ವಿದ್ವಾನ್ ತ್ರಿಚಿ ಕೆ.ಆರ್.ಕುಮಾರ್ ಮತ್ತು ಬಳಗದಿಂದ ತಾಳಲಯ ವೈವಿಧ್ಯ
ತಾ. ೨೦ಕ್ಕೆ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ’ಯಾದವ ವಿನೋದ’ ತಾ. ೨೧ರಂದು ಯಕ್ಷಗಾನ - ಗಾನಾರ್ಪಣಂ ಜರಗಲಿದೆ. ಇದರಲ್ಲಿ ಬಲಿಪ ನಾರಾಯಣ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕುಬಣೂರು ಶ್ರೀಧರ ರಾವ್, ಲೀಲಾವತಿ ಬೈಪಾಡಿತ್ತಾಯ, ಪಟ್ಲ ಸತೀಶ ಶೆಟ್ಟಿ, ಹೆರೆಂಜಾಲು ಗೋಪಾಲ ಗಾಣಿಗ, ದಾಂಟಲಿಕೆ ಅನಂತ ಹೆಗಡೆ
ಹರಿನಾರಾಯಣ ಬೈಪಾಡಿತ್ತಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ಎನ್.ಜಿ.ಹೆಗಡೆ ಭಾಗವಹಿಸಲಿದ್ದಾರೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

Wednesday, April 9, 2014

katil utsava ಕಟೀಲು ಜಾತ್ರೆ





ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ, ಅಟ್ಟೆ ಕನ್ನಡಿಗಳಿಗೆ ಚಿನ್ನದ ಲ್ಯಾಮಿನೇಷನ್

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಶ್ರೀ ದೇವರ ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ, ಅಟ್ಟೆ ಕನ್ನಡಿಗಳಿಗೆ ಬಜಪೆ ಪಾಪ್ಯಲರ್ ಜಗದೀಶ ಶೆಟ್ಟರು ೨೬೦ಗ್ರಾಂ ಚಿನ್ನದಿಂದ ಲ್ಯಾಮಿನೇಷನ್ ಮಾಡಿಸಿ ಕಾಣಿಕೆಯಾಗಿ ಶ್ರೀ ದೇವರಿಗೆ ಅರ್ಪಿಸಿದರು. ಈ ಸಂದರ್ಭ ಅರ್ಚಕರಾದ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಉಮೇಶ ರಾಔ ಎಕ್ಕಾರು, ಡಾ.ಗೋಪಿನಾಥ ಭಟ್ ಮತ್ತಿತರರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

Monday, March 31, 2014

ಸುರೇಶ್ ಭಟ್ ಬೀಳ್ಕೊಡುಗೆ

ಕಟೀಲು ಪ್ರೌಢಶಾಲೆಯಲ್ಲಿ ಉಪಪ್ರಾಚಾರ್ಯರಾಗಿದ್ದ ಸುರೇಶ್ ಭಟ್ ನಿವೃತ್ತರಾದ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸುರೇಶ ಭಟ್ ಮತ್ತು ಪತ್ನಿ ಶಿಕ್ಷಕಿ ಮಂಗಳಾ ಎಸ್ ಭಟ್‌ರನ್ನು ಸಂಮಾನಿಸಲಾಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಪದವಿ ಕಾಲೇಜು ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಪ್ರಾಥಮಿಕ ಶಾಲೆಯ ಮಾಲತಿ ವೈ, ಕೆ.ವಿಶೆಟ್ಟಿ, ಸಾಯಿನಾಥ ಶೆಟ್ಟಿ ಮತ್ತಿತರರಿದ್ದರು.

Sunday, March 9, 2014

ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದಲ್ಲಿ ನೇಮ

ಕಿನ್ನಿಗೋಳಿ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದಲ್ಲಿ ಒಲಿಮದೆಯಿಂದ ಹೊರಬರುವ ಕುಂಜರಾಯ ಉಳ್ಳಾಯ ದೈವದ ನೇಮ ಜಾರಂದಾಯ, ಕಾಂತೇರಿಜುಮಾದಿ, ಸರಳ ಧೂಮಾವತಿ, ಕೊಡಮಣಿತ್ತಾಯ ದೈವಗಳ ಸಹಿತ ನಡೆಯಿತು.
ಚಿತ್ರ : ಅರುಣ್ ಉಲ್ಲಂಜೆ




Monday, February 24, 2014

ತೀರ್ಥ ಕಟೀಲ್‌ರ ರಂಗ ಪ್ರವೇಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿದುಷಿ ರಶ್ಮಿ ಚಿದಾನಂದ್ ಶಿಷ್ಯೆ ನೀಲಯ್ಯ ಕೋಟ್ಯಾನ್, ಸಂಧ್ಯಾ ಪುತ್ರಿ ಕು.ತೀರ್ಥ ಕಟೀಲ್‌ರ ರಂಗ ಪ್ರವೇಶ ಕಾರ್ಯಕ್ರಮ ಶನಿವಾರ ನಡೆಯಿತು. ವಿದುಷಿ ಗೀತಾ ಸರಳಾಯ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ನಿತ್ಯಾನಂದ ರಾವ್, ಲಿಂಗಪ್ಪ ಕಟೀಲ್ ನಾಗೇಶ್ ಬಪ್ಪನಾಡು ಮತ್ತಿತರರಿದ್ದರು.

Friday, February 14, 2014

ಕಟೀಲಿನಲ್ಲಿ ನಂದಿನಿ ಅವತರಣ ದಿನ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನೀ ಅವತರಣ ದಿನದ ಅಂಗವಾಗಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಪೂಜೆ, ಸೀಯಾಳಾಭಿಷೇಕ, ಸಾವಿರ ಲೀಟರ್ ಹಾಲಿನ ಕ್ಷೀರಪಾಯಸ ಸೇವೆ ನಡೆಯಿತು. ಬೆಂಗಳೂರು ದೇವನಹಳ್ಳಿಯ ಮುನಿಯಪ್ಪ ಎಂಬ ಹೂವಿನ ವ್ಯಾಪಾರಿ ಇಡೀ ದೇಗುಲವನ್ನು ಹೂವಿನ ಅಲಂಕಾರದಿಂದ ಸುಂದರಗೊಳಿಸಿದ್ದರು.
ದಿ.ಕೃಷ್ಣ ಆಸ್ರಣ್ಣರ ಸಂಸ್ಮರಣಾರ್ಥವಾಗಿ ಶ್ರೀ ದುರ್ಗಾ ಮಕ್ಕಳ ಮೇಳದ ಬಾಲಕಲಾವಿದರಿಂದ ಯಕ್ಷಗಾನ ಗಾನ ವೈಭವ ಮನಸೂರೆಗೊಂಡಿತು. ಬಳಿಕ ಇಂದ್ರಜಿತು ಕಾಳಗ ಯಕ್ಷಗಾನ ಬಯಲಾಟ ನಡೆಯಿತು.
ಮಂಗಳೂರಿನ ದುರ್ಗಾಫೆಸಿಲಿಟಿ ಸಂಸ್ಥೆಯ ಬೊಂಡಾಲ ಸಚ್ಚಿದಾನಂದ ಶೆಟ್ಟಿ ದೇಗುಲಕ್ಕೆ ಸ್ವಚ್ಛತಾಯಂತ್ರವನ್ನು ಕಾಣಿಕೆಯಾಗಿ ದೇಗುಲಕ್ಕೆ ನೀಡಿದರು. ಈ ಸಂದರ್ಭ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಮತ್ತಿತರರಿದ್ದರು.