Tuesday, August 31, 2010

ತಾ.೫: ಕಟೀಲಿನಲ್ಲಿ ಮಕ್ಕಳ ಯಕ್ಷಗಾನ ಸ್ಪರ್ಧೆ

ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಶಾಲಾ ಸರಸ್ವತೀ ಸದನದಲ್ಲಿ ಸ.೫ರಂದು ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಗಂಟೆ ೮.೪೫ರಿಂದ ಆರಂಭವಾಗುವ ಸ್ಪರ್ಧೆಯಲ್ಲಿ ಉಲ್ಲಂಜೆ ದ.ಕ.ಜಿ.ಪಂ.ಶಾಲೆಯ ವಿದ್ಯಾರ್ಥಿಗಳು ಸುಧನ್ವಾರ್ಜುನ, ಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನ ಮಕ್ಕಳು ಸುದರ್ಶನ ವಿಜಯ, ಕದ್ರಿ ಬಾಲ ಯಕ್ಷಕೂಟದ ಸದಸ್ಯರು ಶ್ರೀ ಕೃಷ್ಣ ಲೀಲೆ, ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿದ್ಯುನ್ಮತಿ ಕಲ್ಯಾಣ, ಕಲ್ಲಡ್ಕ ಚೈತನ್ಯ ಕಲಾವೇದಿಕೆಯವರು ವೀರ ಬಬ್ರುವಾಹನ, ಮಂಜನಾಡಿ ಶ್ರೀ ದುರ್ಗಾಪರಮೇಶ್ವರೀ ಕೃಪಾಶ್ರಿತ ಯಕ್ಷಕಲಾ ಕೇಂದ್ರದವರಿಂದ ಲವ ಕುಶ, ಕಳಸ ಹಳುವಳ್ಳಿಯ ಶ್ರೀ ಸುಬ್ರಹ್ಮಣ್ಯೇಶ್ವರ ಮಕ್ಕಳ ಯಕ್ಷಗಾನ ತಂಡ ಸುಧನ್ವ ಮೋಕ್ಷವನ್ನು ಪ್ರದರ್ಶಿಸಲಿದ್ದಾರೆ.ಕಟೀಲಿನಲ್ಲಿ ದುರ್ಗಾ ಮಕ್ಕಳ ಮೇಳದಿಂದ ಕಳೆದೆರಡು ವರುಷಗಳಿಂದ ಉಚಿತವಾಗಿ ಹಿಮ್ಮೇಳ, ಮುಮ್ಮೇಳ ತರಗತಿಗಳನ್ನು ನಡೆಸಲಾಗುತ್ತಿದ್ದು, ಅಂದು ಸಂಜೆ ನಡೆಯಲಿರುವ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಗುವುದು.
ಕರ್ನಾಟಕ ಬ್ಯಾಂಕಿನ ಪಿ.ಜಯರಾಮ ಭಟ್, ಯಕ್ಷಗಾನ ಅಕಾಡಮಿಯ ಕುಂಬ್ಳೆ ಸುಂದರ ರಾವ್, ಡಾ.ಮೋಹನ ಆಳ್ವ, ಐಕಳ ಹರೀಶ ಶೆಟ್ಟಿ, ಕಳತ್ತೂರು ಸುರೇಶ ಶೆಟ್ಟಿ, ಮುಂಬೈ ಕಸಾಪದ ಎಚ್.ಬಿ.ಎಲ್.ರಾವ್, ಯಕ್ಷಗಾನ ಕಲಾರಂಗದ ಮುರಳಿ ಕಡೇಕಾರ್, ಎಕ್ಕಾರು ಮೋನಪ್ಪ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅನಂತ ಆಸ್ರಣ್ಣ, ವಾಸುದೇವ ಆಸ್ರಣ್ಣರ ಉಪಸ್ಥಿತಿಯಲ್ಲಿ ಡಾ.ಕೋಳ್ಯೂರು ರಾಮಚಂದ್ರ ರಾವ್‌ರಿಗೆ ಸಂಮಾನ, ಪು.ಶ್ರೀನಿವಾಸ ಭಟ್, ಕಟೀಲು ರಮಾನಂದ ರಾವ್‌ರಿಗೆ ಗೌರವಾರ್ಪಣೆ ನಡೆಯಲಿದೆ

No comments:

Post a Comment