Sunday, August 9, 2015

ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ

ಬ್ರಾಹಣತ್ವ ಉಳಿಸಿ - ವಾದಿರಾಜ ಕೊಲಕಾಡಿ
ಕಟೀಲು : ಜಪ, ತಪ, ಪೂಜೆ ಪುನಸ್ಕಾರಗಳಿಂದ ಆಚಾರಗಳಿಂದ ವ್ರತಾನುಷ್ಟಾನಗಳಿಂದ ಬ್ರಾಹ್ಮಣತ್ವವನ್ನು ಉಳಿಸುವ ಜವಾಬ್ದಾರಿ ಇದೆ ಎಂದು ವಿದ್ವಾಂಸ  ವಾದಿರಾಜ ಕೊಲಕಾಡಿ ಹೇಳಿದರು.
ಅವರು ಭಾನುವಾರ ಕಟೀಲು ಸಾನಿಧ್ಯ ಸಭಾಭವನದಲ್ಲಿ ನಡೆದ
ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮೂಡುಬಿದ್ರೆಯ ಉದ್ಯಮಿ ಶ್ರೀಪತಿ ಭಟ್ ಪ್ರತಿಭಾ ಪುರಸ್ಕಾರ ನೀಡಿದರು. 
ಸಾಹಿತಿ ಗಾಯತ್ರಿ ಎಸ್. ಉಡುಪರನ್ನು ಸಂಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ವಿತರಿಸಿದರು.
ಅಧ್ಯಕ್ಷ ಡಾ. ಶಶಿಕುಮಾರ್ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷ ಎಕ್ಕಾರು ಡಾ. ಪದ್ಮನಾಭ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ರಾಘವೇಂದ್ರ ಭಟ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ವೇದವ್ಯಾಸ ಉಡುಪ ವಂದಿಸಿದರು. ಗುರುಪ್ರಸಾದ್ ಭಟ್ ಕಾರ‍್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

No comments:

Post a Comment