Saturday, April 25, 2015

ಕಟೀಲು ಪ್ರಾಥಮಿಕ ಶಾಲಾ ಶತಮಾನೋತ್ಸವ ವರ್ಷಾಚರಣೆ

ಇಂಗ್ಲಿಷ್ ಮಾಧ್ಯಮ ಶಾಲೆಯ ಆರಂಭದ ಪ್ರಸ್ತಾಪ
ಕಟೀಲು : ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸುವುದೆಂದು ಗುರುವಾರ ಕಟೀಲು ಸರಸ್ವತೀ ಸದನದಲ್ಲಿ ನಡೆದ ಶಾಲೆಯ ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು.
ಕನ್ನಡ ಮಾಧ್ಯಮದ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಆಗದಂತೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ್, ಯಕ್ಷಗಾನ, ಸಂಗೀತ ನೃತ್ಯ ಮುಂತಾದ ಅನೇಕ ತರಗತಿಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವದ ಸವಿನೆನಪಿನಲ್ಲಿ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸುವುದು ಅಗತ್ಯವಾಗಿದೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರ್ಷಪೂರ್ತಿ ಕಾರ‍್ಯಕ್ರಮಗಳನ್ನು ಆಯೋಜಿಸುವುದು, ಶಾಲೆಯ ಸವಲತ್ತುಗಳನ್ನು ಇನ್ನಷ್ಟು ಹೆಚ್ಚಿಸುವುದರ ಬಗ್ಗೆ ಸಲಹೆಗಳು ಬಂದವು. 
ದೇಗುಲವು ಈಗಾಗಲೇ ಪ್ರಾಥಮಿಕ ಹಂತದಿಂದ ಪದವಿಯವರೆಗೆ ವರ್ಷಕ್ಕೆ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಕಳೆದ ಆರೇಳು ವರ್ಷಗಳಲ್ಲಿ ಪ್ರಾಥಮಿಕ ಶಾಲೆಗೆ ಎರಡೂವರೆ ಕೋಟಿ ರೂ.ಗಳನ್ನು ವ್ಯಯಿಸಿಲಾಗಿದೆ ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು. 
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ನಿವೃತ ಉಪಪ್ರಾಚಾರ‍್ಯ ಉಮೇಶ ರಾವ್ ಎಕ್ಕಾರು, ರುಕ್ಮಯದಾಸ್, ಈಶ್ವರ ಕಟೀಲ್, ಮುಖ್ಯ ಶಿಕ್ಷಕಿ ವನಮಾಲಾ, ಗೋಪಾಲ್, ರಾಜೇಶ್, ಕೃಷ್ಣ, ಪದ್ಮನಾಭ ಭಟ್, ಸಂಜೀವ ಮಡಿವಾಳ, ಕೆ.ವಿ.ಶೆಟ್ಟಿ, ಲೋಕೇಶ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ, ಭಾಸ್ಕರ ದಾಸ್, ಸುಬ್ರಹ್ಮಣ್ಯ ಪ್ರಸಾದ್, ತಿಮ್ಮಪ್ಪ ಕೋಟ್ಯಾನ್, ಭುವನಾಭಿರಾಮ ಉಡುಪ, ನೀಲಯ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

No comments:

Post a Comment