Sunday, December 14, 2014

ಯಕ್ಷಗಾನ ವಾಚಿಕ ಸಮಾರಾಧನೆ, ದೃಶ್ಯಾವಳೀ ಕೃತಿಗಳ ಬಿಡುಗಡೆ

ಕಟೀಲು : ಯಕ್ಷಗಾನ ಕಲಾವಿದರು ಅಧ್ಯಯನಾಸಕ್ತರಾಗಬೇಕಾದ ಅಗತ್ಯವಿದೆ ಎಂದು ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸರಸ್ವತಿ ಸದನದಲ್ಲಿ ಯಕ್ಷಗಾನ ಕಲಾವಿದ ಲೇಖಕ ರವಿಶಂಕರ್ ವಳಕ್ಕುಂಜ ರಚಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ಕೃತಿಗಳ ಬಗ್ಗೆ ಮಾತನಾಡಿದರು.
ವಳಕ್ಕುಂಜರ ಯಕ್ಷಗಾನ ಪ್ರಸಂಗ ದ್ಯಶಾವಳೀ ಕೃತಿಯನ್ನು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಯಕ್ಷಗಾನ ವಾಚಿಕ ಸಮಾರಾಧನೆ ಕೃತಿಯನ್ನು ಪಳ್ಳತ್ತಡ್ಕ ಪರಮೇಶ್ವರ ಭಟ್ಟ ಬಿಡುಗಡೆಗೊಳಿಸಿದರು. ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಹಿರಣ್ಯ ವೇಕಟೇಶ್ ಭಟ್ಟ ಉಪಸ್ಥಿರಿದ್ದರು.
ಕೃತಿಕಾರ ರವಿಶಂಕರ ವಳಕ್ಕುಂಜ ಸ್ವಾಗತಿಸಿ, ವಾಸುದೇವರಂಗಾ ಭಟ್ ಹಾಗೂ ರಾಮಜೋಯಿಸ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment