Wednesday, August 17, 2011

ಕುಕ್ಕೆ ಮಾದರಿಯಲ್ಲಿ ಕಟೀಲು ಅಭಿವೃದ್ಧಿ೧೫ ದಿನದಲ್ಲಿ ಸಭೆ-ಮುಖ್ಯಮಂತ್ರಿ ಸದಾನಂದ




ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಾದರಿಯಲ್ಲಿ ಕಟೀಲು ಕ್ಷೇತ್ರವನ್ನೂ ಅಭಿವೃದ್ಧಿ ಪಡಿಸಲಾಗುವುದು. ಅದಕ್ಕಾಗಿಯೇ ಹದಿನೈದು ದಿನಗಳ ಒಳಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಪತ್ನಿ ಡಾಟಿ ಹಾಗೂ ಮಗನೊಂದಿಗೆ ಭೇಟಿ ನೀಡಿ, ಮಹಾಪೂಜೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು.ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಡಿ.ವಿ.ಸದಾನಂದ ಗೌಡರಿಗೆ ಶ್ರೀ ದೇವರ ಪ್ರಸಾದ, ಶೇಷವಸ್ತ್ರ ನೀಡುತ್ತ, ಭಾವಪರವಶರಾಗಿ ಕಟೀಲು ಕ್ಷೇತ್ರದ ಅಭಿವೃದ್ಧಿಗೆ ತಾವು ಮುಂದಾಗಬೇಕೆಂದು ಕೇಳಿಕೊಂಡರು.ಬಳಿಕ ಸಾಂಸದ ನಳಿನ್ ಕುಮಾರ್, ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ, ದೇಗುಲದ ಆಡಳಿತಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ, ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪ್ರಬಂಧಕ ವಿಶ್ವೇಶ ರಾವ್, ಮುಖ್ಯಮಂತ್ರಿಗೆ ಮನವಿ ನೀಡಿ, ದೇಗುಲಕ್ಕೆ ಭೂಸ್ವಾಧೀನ, ಒಳಚರಂಡಿ, ಮಾಸ್ಟರ್ ಪ್ಲಾನ್, ಬೈಪಾಸ್, ವಸತಿ ಗೃಹ, ಶಾಲೆ ಕಾಲೇಜುಗಳಿಗೆ ಸರಕಾರಿ ಅನುದಾನ, ದೇಗುಲದ ಸುತ್ತಮುತ್ತ ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣದ ಅಗತ್ಯತೆಗಳ ಕುರಿತು ಅನುದಾನ ಒದಗಿಸಬೇಕೆಂದು ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ೧೫ದಿನಗಳ ಒಳಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.ಡಿಸೆಂಬರ್ ತಿಂಗಳಲ್ಲಿ ಕಟೀಲು ಕ್ಷೇತ್ರದಲ್ಲಿ ಚಂಡಿಕಾಹವನ, ತುಲಾಭಾರ ಸೇವೆ ಹಾಗೂ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವೆ ಸದಾನಂದ ಗೌಡರ ಹೆಸರಿನಲ್ಲಿ ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿದ್ದು, ಅನ್ನಪ್ರಸಾದ ಸ್ವೀಕರಿಸಿದ ಬಳಿಕ, ಇಷ್ಟು ಒಳ್ಳೆಯ ಊಟ ಮಾಡದೆ ಅನೇಕ ದಿನಗಳಾದವು ಎಂದು ಡಿವಿ ಹೇಳಿದರು.ಕಾರ‍್ಯಕರ್ತರು, ಅಭಿಮಾನಿಗಳು ಮುಖ್ಯಮಂತ್ರಿಗಳಿಗೆ ಹೂಹಾರ ಹಾಕಿ, ಕೈಕುಲುಕಿ ರಕ್ಷಾ ಬಂಧನ ಕಟ್ಟಿ ಸಂಭ್ರಮಿಸಿದರು.
ಎಲ್ಲರಿಗಿಂತ ಬೆಸ್ಟು ಎಂಬಾಸೆಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಇರಬೇಕೆಂಬುದು ತನ್ನ ನಿಲುವಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಪ್ರತ್ಯೇಕ ಬ್ಯಾಂಕ್ ಆಗಬೇಕೆಂದು ಈಗಾಗಲೇ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನವಾಗಿದೆ. ಆದರೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ಧಾರದ ಬಳಿಕ ದಕ್ಷಿಣ ಕನ್ನಡ ಬ್ಯಾಂಕನ್ನು ಉಡುಪಿಗೆ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸೂಚನೆಗಳನ್ನೂ ಗಮನಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಸದಾನಂದ ಗೌಡ, ಈವರೆಗಿನ ಎಲ್ಲ ಮುಖ್ಯಮಂತ್ರಿಗಳಿಗಿಂತಲೂ ಒಳ್ಳೆಯ ಮುಖ್ಯಮಂತ್ರಿ ತಾನಾಗಬೇಕೆಂಬ ಆಸೆ ಇದ್ದು, ಇದೀಗ ತನ್ನ ಕರಾವಳಿ ಕ್ಷೇತ್ರ ಭೇಟಿಯ ಬಳಿಕ ರಾಜ್ಯಾದ್ಯಂತ ಓಡಾಟ ನಡೆಸಿ, ಸಮಸ್ಯೆ, ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಜೊತೆಗೆ, ರಾಜಕೀಯ ಸಂಘರ್ಷ ದೂರವಾಗಲಿ, ನಾಡು ಸುಭಿಕ್ಷವಾಗಲಿ ಎಂದು ಕರಾವಳಿಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ ಎಂದು ಅವರು ತಿಳಿಸಿದರು.ಮುಖ್ಯಮಂತ್ರಿಯವರೊಂದಿಗೆ ಸಚಿವ ಕೃಷ್ಣ ಪಾಲೇಮಾರ್, ಶಾಸಕ ಯೋಗೀಶ ಭಟ್, ಮಲ್ಲಿಕಾ ಭಂಡಾರಿ, ಗಣೇಶ್ ಕಾರ್ಣಿಕ್, ಜಿ.ಪಂ.ಅಧ್ಯಕ್ಷೆ ಸುಲೋಚನಾ ಭಟ್, ಸದಸ್ಯ ಈಶ್ವರ್, ರತ್ನಾ, ಬಿಜೆಪಿಯ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಕಿಶೋರ್‌ಕುಮಾರ್, ಕಸ್ತೂರಿ, ಜಗದೀಶ ಅಧಿಕಾರಿ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ, ಜನಾರ್ದನ ಕಿಲೆಂಜೂರು, ದೇವಪ್ರಸಾದ ಮತ್ತಿತರರಿದ್ದರು.

No comments:

Post a Comment