Wednesday, April 27, 2011

ಗಿಡಿಗೆರೆಯಲ್ಲಿ ಬ್ರಹ್ಮಕಲಶ


ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀ ದೇವರ ಮೂರ್ತಿಗಳನ್ನು ಕಟೀಲಿನಿಂದ ಮೆರವಣಿಗೆಯಲ್ಲಿ ತರಲಾಯಿತು.


ಧಾರ್ಮಿಕ ಜಾಗೃತಿಯಿಂದ ಗ್ರಾಮದಲ್ಲಿ ಸಹಬಾಳ್ವೆ, ಶಾಂತಿ ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದರು.ಅವರು ಬುಧವಾರ ಗಿಡಿಗಿರೆಯ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಆಯೋಜಿಸಲಾದ ಸಭಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಮಂಜೇಶ್ವರದ ಶ್ರೀ ಆಂಜನೇಯ ಸ್ವಾಮೀಜಿ. ಶಾಸಕ ಅಭಯಚಂದ್ರ ಜೈನ್, ಶಿಬರೂರು ಹಯಗ್ರೀವ ತಂತ್ರಿ, ಮುರ ಕೃಷ್ಣ ಶೆಟ್ಟಿ, ಸೋಂದಾ ಭಾಸ್ಕರ ಭಟ್, ಕೃಷ್ಣಪ್ಪ ಕೊಂಚಾಡಿ, ಸೀತಾರಾಮ ಕೊಂಚಾಡಿ, ಸಮಿತಿಯ ತಿಮ್ಮಪ್ಪ ಗುರಿಕಾರ, ಶ್ಯಾಮ, ಮೆನ್ನಬೆಟ್ಟು ಗ್ರಾ.ಪಂ.ನ ಶೈಲಾ ಶೆಟ್ಟಿ, ಸದಾನಂದ ಶೆಟ್ಟಿ, ರವಿಶಂಕರ ಶೆಟ್ಟಿ, ರಾಜ್ಯ ಅಲೆಮಾರಿಗಳ ಸಂಘದ ಭಾಸ್ಕರದಾಸ್ ಎಕ್ಕಾರು ಮತ್ತಿತರರಿದ್ದರು.ರುಕ್ಮಯ ಸ್ವಾಗತಿಸಿದರು. ಕಿರಣ್ ಪಕ್ಕಳ ಕಾರ‍್ಯಕ್ರಮ ನಿರೂಪಿಸಿದರು.

No comments:

Post a Comment