Saturday, August 6, 2011

ಕಟೀಲು ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ



ಕಟೀಲು : ನಮ್ಮ ದೇಶದ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಗುರುಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಎಂಆರ್‌ಪಿಎಲ್‌ನ ಡಿಜಿಎಂ ಲಕ್ಷ್ಮೀ ಕುಮಾರನ್ ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ ಉತ್ತಮರನ್ನು ಬೆಳೆಸಲು ಸಂಘಗಳ ಅವಶ್ಯಕತೆಯಿದೆ ಎಂದರು.
ಪ್ರಾಚಾಋಯ ಬಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪರಿಪಾಲನಾಧಿಕಾರಿ ವಿಜಯ್ ವಿ., ವಿದ್ಯಾರ್ಥಿ ಸಂಘದ ಸಂದೀಪ್, ಇಮ್ತಿಯಾಜ್, ಪ್ರಸನ್ನ, ಕೃತ್ತಿಕಾ ಮತ್ತಿತರರಿದ್ದರು. ಸೋಂದಾ ಭಾಸ್ಕೆರ ಭಟ್ ಸ್ವಾಗತಿಸಿದರು. ತೀಕ್ಷಿತಾ ಕಾರ‍್ಯಕ್ರಮ ನಿರೂಪಿಸಿದರು.

No comments:

Post a Comment