Saturday, August 27, 2011

ಕಟೀಲು ಕಾಲೇಜಿನಲ್ಲಿ ಸ್ವ ಉದ್ಯೋಗ ತರಬೇತಿ ಶಿಬಿರ

ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ತರಬೇತಿ ನೀಡಲಾಯಿತು. ಪಡುಬಿದ್ರೆಯ ಮಧ್ವರಾಜ್ ಸುವರ್ಣ ಫಿನಾಯಿಲ್, ಕ್ಯಾಂಡಲ್, ಬ್ಲೀಚಿಂಗ್ ಪೌಡರ್ ಮುಂತಾದ ಗೃಹೋಪಯೋಗಿ ವಸ್ತುಗಳ ತಯಾರಿಕೆಯನ್ನು ಹೇಳಿಕೊಟ್ಟರು. ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಕೇಶವ ಎಚ್, ಕೃಷ್ಣ ಕಾಂಚನ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್ ಮತ್ತಿತರರಿದ್ದರು. ಇನ್ನೂರರಷ್ಟು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.

No comments:

Post a Comment