Friday, August 19, 2011

ವಿವಿ ಚೆಸ್: ವಿವೇಕಾನಂದ, ಎಸ್‌ಡಿಎಂಗೆ ಪ್ರಶಸ್ತಿ



ಕಟೀಲು : ಕಟೀಲು ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಚೆಸ್ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಎಸ್‌ಡಿಎಂ ಉಜಿರೆ, ಮಹಿಲೆಯರ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜು ಪ್ರಶಸ್ತಿ ಗಳಿಸಿದೆ.
ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ ತಂಡ ದ್ವಿತೀಯ, ಎಂಜಿಎಂ ಉಡುಪಿ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಮಂಗಳೂರು ಸೈಂಟ್ ಆಗ್ನೆಸ್ ದ್ವಿತೀಯ, ಪುತ್ತೂರಿನ ಫಿಲೋಮಿನಾ ಕಾಲೇಜು ತೃತೀಯ ಪ್ರಶಸ್ತಿ ಪಡೆದಿದೆ.
ಶುಕ್ರವಾರ ನಡೆದ ಸಮಾರೋಪದಲ್ಲಿ ಕಟೀಲು ವಿಜಯಾ ಬ್ಯಾಂಕಿನ ಭುವನಪ್ರಸಾದ ಹೆಗ್ಡೆ, ಜಿ.ಪಂ.ಸದಸ್ಯ ಈಶ್ವರ, ಕಟೀಲ್ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್‌ನ ಪ್ರವೀಣ್ ಶೆಟ್ಟಿ, ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ದೈಹಿಕ ನಿರ್ದೇಶಕ ಡಾ.ನಾಗಲಿಂಗಪ್ಪ, ತೀರ್ಪುಗಾರ ಪ್ರಸನ್ನ ರಾವ್, ಜಯರಾಮ ರೈ ಪ್ರಶಸ್ತಿ ವಿತರಿಸಿದರು.

No comments:

Post a Comment