Saturday, August 13, 2011

ಕಟೀಲು ಕಾಲೇಜಿನಲ್ಲಿ ಸಂಸ್ಕೃತ ಕೃತಿಗಳ ಬಿಡುಗಡೆಸಂಸ್ಕೃತಕ್ಕೆ ರಾಷ್ಟ್ರಭಾಷೆಯ ಸ್ಥಾನಮಾನ ಅಗತ್ಯ



ಲಿಪಿಯಿಲ್ಲದಿದ್ದರೂ ಎಲ್ಲ ಭಾಷೆಗಳಿಗಿಂತಲೂ ಅತ್ಯಂತ ಹೆಚ್ಚು ಪದಗಳನ್ನು ಹೊಂದಿರುವ ದೇವಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಕೃತಕ್ಕೆ ರಾಷ್ಟ್ರಭಾಷೆಯ ಸ್ಥಾನಮಾನ ಸಿಗುವುದಕ್ಕಾಗಿ ಆಂದೋಲನವಾಗಬೇಕಾದ ಅಗತ್ಯವಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ಸಂಸ್ಕೃತ ಸಂಘಗಳ ಉದ್ಘಾಟನೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಸಂಗ್ರಹಿತ ೩೬ಕಥೆಗಳುಳ್ಳ ಸಂಸ್ಕೃತ ಕಥಾಂಜಲಿ ಹಾಗೂ ಸಂಸ್ಕಾರ ಸೌರಭ ಕೃತಿಗಳನ್ನು ನಿಡ್ಡೋಡಿ ಜ್ಞಾನರತ್ನ ಎಜಿಕೇಶನ್ ಟ್ರಸ್ಟ್‌ನ ಭಾಸ್ಕರ ದೇವಸ್ಯ ಬಿಡುಗಡೆಗೊಳಿಸಿದರು. ರಕ್ಷಾಬಂಧನ ಕಾರ‍್ಯಕ್ರಮವನ್ನೂ ನಡೆಸಲಾಯಿತು.ಗಂಜೀಮಠ ರಾಜ್ ಅಕಾಡಮಿಯ ಪ್ರಾಚಾರ‍್ಯ ಗಜಾನನ ಭಟ್ಟ, ಮೂಡುಬಿದ್ರೆಯ ಪ್ರೇಮನಾಥ ಮಾರ್ಲ, ಕಟೀಲು ಕಾಲೇಜಿನ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಸಂಸ್ಕೃತ ಸಂಘದ ಶ್ರೀರಕ್ಷಾ, ಅಕ್ಷತಾ, ಅಧ್ಯಯನ ಕೇಂದ್ರದ ವಿಕ್ರಮ ರಾವ್, ದೇವಿಕಾ ಮತ್ತಿತರರಿದ್ದರು. ಸಂಯೋಜಕ ಡಾ.ಸೋಂದಾ ಭಾಸ್ಕರ ಭಟ್ ಸ್ವಾಗತಿಸಿದರು. ಶ್ರೀದೀಕ್ಷಾ ಕಾರ‍್ಯಕ್ರಮ ನಿರೂಪಿಸಿದರು.

No comments:

Post a Comment