ಇಲ್ಲಿನ ಪುರಾಣ ಪ್ರಸಿದ್ಧ ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಆಡಳಿತಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಪ್ರಬಂಧಕ ವಿಶ್ವೇಶ್ವರ ರಾವ್, ಧಾರ್ಮಿಕ ದತ್ತಿ ಇಲಾಖೆಯ ಎ.ಆರ್. ಪ್ರಭಾಕರ್, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಿತಿ ಕೇಂದ್ರದ ರಾಜೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು.ಕಳೆದ ಫೆಬ್ರವರಿಯಲ್ಲಿ ದೇಗುಲಕ್ಕೆ ಭೇಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ನಂದಕುಮಾರ್ ಸೂಚಿಸಿರುವ ಕಾರ‍್ಯಗಳ ಬಗ್ಗೆ ಪ್ರಮುಖ ಚರ್ಚೆ ನಡೆಯಿತು.ದೇಗುಲದ ಒಳಗೆ ಶುಚಿತ್ವ, ಏರ್‌ಕೂಲರ್ ಅಳವಡಿಕೆ, ಉಗ್ರಾಣದಲ್ಲಿರುವ ಹಳೆಯ ಸ್ಟೀಮ್ ಬಾಯ್ಲರ್‌ಗಳ ರಿಪೇರಿ, ಭೋಜನ ಶಾಲೆಯಲ್ಲಿ ಹೆಚ್ಚು ಮಂದಿಗೆ ಅವಕಾಶ ಇರುವಂತೆ ಬದಲಾವಣೆ ಕಾರ‍್ಯ, ನದಿಯ ನೀರಿನಿಂದ ದೇಗುಲಕ್ಕೆ ವಿದ್ಯುತ್ ತಯಾರಿ, ಬಾಡಿಗೆ ಅಂಗಡಿದಾರರನ್ನು ಬಸ್‌ನಿಲ್ದಾಣದಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದು, ಪ್ರವಾಸೋದ್ಯಮ ಇಲಾಖೆಯಿಂದ ಅರ್ಧಕ್ಕೇ ನಿಂತಿರುವ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಗೋಶಾಲೆಯ ದುರಸ್ತಿ ಹೀಗೆ ಮೂವತ್ತೈದಕ್ಕೂ ಹೆಚ್ಚು ವಿಚಾರಗಳು ಚರ್ಚಿತವಾದವು. ಮಾಸ್ಟರ್ ಪ್ಲಾನ್‌ನಲ್ಲಿ ಅಳವಡಿಕೆಯಾಗುವ ಡ್ರೈನೇಜ್, ಉದ್ಯಾನವನ ಇತ್ಯಾದಿಗಳ ವಿವರವನ್ನು ಅಧಿಕಾರಿಗಳು ನೀಡಿದರು.
No comments:
Post a Comment