ಅಯೋಗ್ಯ ಮನುಷ್ಯರು ಅಂತಿಲ್ಲ. ಸಂಯೋಜಕರು ಪ್ರತಿಯೊಬ್ಬನನ್ನೂ ಒಂದಿಲ್ಲೊಂದು ವಿಚಾರದಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಿದಾಗ ಸಂಘದೊಂದಿಗೆ ವ್ಯಕ್ತಿಯೂ ಬೆಳೆಯುತ್ತಾನೆ, ಬೆಳಗುತ್ತಾನೆ ಎಂದು ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಅವರು ಶುಕ್ರವಾರ ಕಟೀಲು ಶ್ರೀ ದು.ಪ. ದೇವಳ ಪ್ರೌಢಶಾಲೆಯಲ್ಲಿ ಪಾಠ್ಯೇತರ ಚಟುವಟಿಕೆಗಳ ಹತ್ತು ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕರಾದ ಕೆ.ವಿ.ಶೆಟ್ಟಿ, ಸಾಯಿನಾಥ ಶೆಟ್ಟಿ, ಅಲೆಕ್ಸ್ ತಾವ್ರೋ ಉಪಸ್ಥಿತರಿದ್ದರು.
No comments:
Post a Comment