ಕಟೀಲು ಪ್ರೌಢಶಾಲೆಯಲ್ಲಿ ಮೂವತ್ತೈದು ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ನಿವೃತ್ತರಾದ ಸುಂದರ ಪೂಜಾರಿಯವರನ್ನು ಅವರ ಶಿಷ್ಯವರ್ಗದವರು ಕಟೀಲಿನಲ್ಲಿ ಅದ್ದೂರಿಯಾಗಿ ಸಂಮಾನಿಸಿದ್ದರು. ಆ ಸಂದರ್ಭ ಸಂಮಾನ ಸಮಿತಿಗೆ ಸಂಗ್ರಹವಾಗಿ ಖರ್ಚಾದ ಹಣದಲ್ಲಿ ರೂ.೪೦ಸಾವಿರ ಉಳಿಕೆಯಾಗಿತ್ತು. ಆ ಮೊತ್ತವನ್ನು ಸುಂದರ ಪೂಜಾರಿಯವರಿಗೆ ನೀಡಿದಾಗ ಅವರು ಸ್ವೀಕರಿಸದೆ, ಈ ಮೊತ್ತವನ್ನು ಕಟೀಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕ್ರೀಡಾಪರಿಕರಣಗಳಿಗೆ ಉಪಯೋಗಿಸಿ ಎಂದಿದ್ದರು.ಆ ಪ್ರಕಾರ ರೂ.೨೫ಸಾವಿರ ರೂ.ಗಳ ಕ್ರೀಡಾಪರಿಕರಣಗಳನ್ನು ಕಟೀಲಿನ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ರೂ. ೧೫ಸಾವಿರವನ್ನು ಪ್ರೌಢಶಾಲೆಗೆ ಸೋಮವಾರ ನೀಡಲಾಯಿತು. ಈ ಸಂದರ್ಭ ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಸುಂದರ ಪೂಜಾರಿ, ನಿವೃತ್ತ ಉಪಪ್ರಾಚಾರ‍್ಯ ಉಮೇಶ್ ರಾವ್ ಎಕ್ಕಾರು, ಉಪಪ್ರಾಚಾರ‍್ಯ ಸುರೇಶ್ ಭಟ್, ಮುಖ್ಯ ಶಿಕ್ಷಕಿ ವೈ. ಮಾಲತಿ, ತಿಮ್ಮಪ್ಪ ಕೋಟ್ಯಾನ್, ಸುದೀಪ್ ಅಮೀನ್, ಉದಯ ಅಜಿಲ, ವಾಸುದೇವ ಶೆಣೈ ಮತ್ತಿತರರಿದ್ದರು.
No comments:
Post a Comment