ಕನಸು, ಗುರಿಗಳನ್ನು ಸಾಧಿಸುವ ಪ್ರಯತ್ನ ಇದ್ದಾಗ ಯಶಸ್ಸು ಕೂಡ ಸುಲಭ ಎಂದು ಕಟೀಲು ಸಮೀಪದ ನಿಡ್ಡೋಡಿ ಶ್ರೀ ದುರ್ಗಾದೇವಿ ಕೈಗಾರಿಕಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಭಾಸ್ಕರ ದೇವಸ್ಯ ಹೇಳಿದರು. ಅವರು ೨೦೦೯-೧೧ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆಯ ಗೌರವಾಧ್ಯಕ್ಷ ಎಂ.ಆರ್. ಜೈನ್, ಸಂಸ್ಥೆಯ ಪ್ರಥಮ ಬ್ಯಾಚ್‌ಗೆ ನೂರು ಶೇಕಡಾ ಉದ್ಯೋಗಾವಕಾಶ ನೀಡಲಾಗಿದೆ ಎಂದರು. ಭಾರತ್ ಎಗ್ರೋವೇಟ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಡಾ.ಅರುಣ್ ಕುಮಾರ್ ರೈ, ದುರ್ಗಾದೇವಿ ಇಂಗ್ಲಿಷ್ ಮಾಧ್ಯಮ ಶಾಲೆಯ ಸಂಚಾಲಕ ರಾಮಣ್ಣ ಗೌಡ, ಸಂಗೀತಾ ಭಾಸ್ಕರ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ‍್ಯೆ ಅನುರಾಧಾ ಎಸ್. ಸಾಲಿಯಾನ್ ಸ್ವಾಗತಿಸಿದರು. ಸ್ವಾತಿ ಕಾರ‍್ಯಕ್ರಮ ನಿರೂಪಿಸಿದರು. ಸುನೀತಾ ಶೆಟ್ಟಿ ವಂದಿಸಿದರು.
No comments:
Post a Comment