ಪಾಠ, ಮಾತು ಹೀಗೆ ಮತ್ತೊಬ್ಬರು ಹೇಳುವುದನ್ನು ಕೇಳುವುದು ಮಾತ್ರವಲ್ಲ ಆಲಿಸುವುದೂ ಕೂಡ ಒಂದು ಕಲೆಯಂತೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಚಾಲಕಿ ಸುಲೋಚನಾ ಕೊಡವೂರು ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಆಯೋಜಿಸಿದ ಜೀವನ ಕೌಶಲ್ಯ ಮಾಹಿತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು.ದಿನೇಶ್ ಕೊಡಿಯಾಲ್‌ಬೈಲ್ ಏಕಾಗ್ರತೆ, ವ್ಯಕ್ತಿತ್ವ ವಿಕಸನ ಕುರಿತು ಮಾಹಿತಿ ನೀಡಿದರು.ಉಪಪ್ರಾಚಾರ‍್ಯ ಸುರೇಶ್ ಭಟ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಕೆ.ಬಿ.ಸುರೇಶ್, ಜಾಕ್ಸನ್ ಪಕ್ಷಿಕೆರೆ ಉಪಸ್ಥಿತರಿದ್ದರು.
No comments:
Post a Comment