ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರೋತ್ಸವಾಂಗ ದಿನಂಪ್ರತಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ದಿನಂಪ್ರತಿ ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ‍್ಯಕ್ರಮ, ರಾತ್ರಿ ಯಕ್ಷಗಾನವಿದೆ.
ತಾ.೨೮ಕ್ಕೆ ಬುಜೈ ಶ್ರೀ ದೇವಿ ಭಜನಾ ಮಂಡಳಿ, ಉಜಿರೆಯವರಿಂದ ಭಜನೆ, ಸಂಜೆ ಯಕ್ಷಗಾನ, ತಾ೨೯ಕ್ಕೆ ಬಿಜೈ ತಿರುಮಲ ಮಹಿಳಾ ಮಂಡಳಿಯಿಂದ ಭಜನೆ, ಬಾನಂಗಡಿ ಚಂದ್ರಕಾಂತ ಭಟ್ಟರಿಂದ ಹರಿಕಥೆ, ಯಕ್ಷಗಾನ, ತಾ.೩೦ರಂದು ಕಟೀಲು ಭ್ರಾಮರೀ ಮಂಡಳಿಯಿಂದ ಭಜನೆ, ಅಂಕುಶ್ ನಾಯಕ್‌ರಿಂದ ಸೀತಾರ್ ವಾದನ, ರಾತ್ರಿ ಯಕ್ಷಗಾನ, ಕಟೀಲು ಗ್ರಾಮಸ್ಥರಿಂದ ಹುಲಿವೇಷ ಮೆರವಣಿಗೆ ತಾ.೧ಕ್ಕೆ ಲಲಿತಾ ಪಂಚಮಿಯಂದು ಕಟೀಲು ದೇವೀ ಮಂಡಳಿಯಿಂದ ಭಜನೆ, ಚೆನ್ನೈನ ರಾಜು ಭಾಗವತರ್ ಸಂಗೀತ ನೃತ್ಯ ವೈಭವ, ಯಕ್ಷಗಾನ, ತಾ.೨ಕ್ಕೆ ಮೂಲಾ ನಕ್ಷತ್ರದಂದು ಪಡುಬಿದ್ರೆ ನವಶಕ್ತಿ ಮಂಡಳಿಯಿಂದ ಭಜನೆ, ಲಕ್ಷ್ಮೀ ಪರಶುರಾಮ್‌ರಿಂದ ಭಕ್ತಿಗಾನ, ಕು.ಮಾಲತಿಯವರಿಂದ ಕರ್ನಾಟಕ ಸಂಗೀತ, ರಾತ್ರಿ ಯಕ್ಷಗಾನ, ತಾ.೩ಕ್ಕೆ ಬಜಪೆ ಶಾಂತಿ ಕಲಾ ಕೇಂದ್ರದವರಿಂದ ಭಕ್ತಗಾನ, ಪಂ.ನಾಗನಾಥ ಒಡೆಯರ್‌ರಿಂದ ಹಿಂದೂಸ್ಥಾನಿ ಸಂಗೀತ, ತಾ.೪ರ ದುರ್ಗಾಷ್ಟಮಿಯಂದು ಕಿನ್ನಿಗೋಳಿ ಸ್ವರರ್ಣಾವ ಸಂಗೀತ ಶಾಲೆಯವರಿಂದ ಸಂಗೀತ, ಸಂಯಮ ತಂಡದಿಂದ ತಾಳಮದ್ದಲೆ, ತಾ.೫ರ ಮಹಾನವಮಿಯಂದು ಕಿನ್ನಿಗೋಳಿ ವಾಗ್ದೇವಿ ತಂಡದಿಂದ ಭಜನೆ, ಧನಶ್ರೀ ಶಬರಾಯರಿಂದ ವಾಯಲಿನ್ ವಾದನ, ತಾ. ೬ರ ವಿಜಯದಶಮಿಯಂದು ಸೂರಜ್ ಸನಿಲ್ ತಂಡದಿಂದ ಭಕ್ತಿಸಂಗೀತ, ಮೈಸೂರು ವಿಜಯಾಮೂರ್ತಿಯವರಿಂದ ಭರತನಾಟ್ಯ, ಯಕ್ಷಗಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Thanks for all the information about happenings in Kateel.
ReplyDeleteA kind request from side is that you create a facebook page where more people would be able to see your article. Further many people will be happy and eager to know about kateel.
Thanks and Regards,
Nithin K S