ಕಟೀಲು :ಇಲ್ಲಿನ ದೇಗುಲದಲ್ಲಿ ಅರ್ಚಕರಾಗಿ ಪೂಜ್ಯರಾದ ದಿ.ಗೋಪಾಲಕೃಷ್ಣ ಆಸ್ರಣ್ಣರ ಜನ್ಮ ಶತಾಬ್ದದ ಉದ್ಘಾಟನೆ ಸ.5ರ ರಾತ್ರಿ ಕಟೀಲಿನ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು.
ಇದೇ ಸಂದರ್ಭ ಆಸ್ರಣ್ಣ ಶಿಷ್ಯ ವೃಂದದ ವತಿಯಿಂದ ದಿ.ಆಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ಗೇರುಕಟ್ಟೆ ಗಂಗಯ್ಯ ಶೆಟ್ಟರಿಗೆ ನೀಡಿ ಸಂಮಾನಿಸಲಾಯಿತು. ತಲಪಾಡಿ ದೇಗುಲದ ಅರ್ಚಕ ಬಾಲಕೃಷ್ಣ ಭಟ್, ಭಾಗವತರಾದ ಕುಬಣೂರು ಶ್ರೀಧರ ರಾವ್, ಸುರಗಿರಿ ಮಹಾಲಿಂಗೇಶ್ವರ ದೇಗುಲದ ಮೊಕ್ತೇಸರ ಸೀತಾರಾಮ ಶೆಟ್ಟರನ್ನು ಗೌರವಿಸಲಾಯಿತು. ಪಂಜ ಭಾಸ್ಕರ ಭಟ್, ಡಾ.ಭಾಸ್ಕರಾನಂದ ಕುಮಾರ್, ಪುತ್ತಿಗೆ ಪದ್ಮನಾಭ ಉಡುಪ, ದುರ್ಗಾದಾಸ ಬಳ್ಕೂರು, ಪ್ರವೀಣ್ ಸೋಮೇಶ್ವರ, ಡಾ.ಮಾಧವ ರಾವ್, ಮುರಳೀಧರ ಆಚಾರ‍್ಯ, ಜಗದೀಶ್ಚಂದ್ರ ಕುಮಾರ್ ಮುಂತಾದವರನ್ನು ಅಭಿನಂದಿಸಲಾಯಿತು.
ಧರ್ಮಸ್ಥಳದ ಹರ್ಷೇಂದ್ರಕುಮಾರ್, ವಿಮಾನ ನಿಲ್ದಾಣ ಪ್ರಾಧಿಕಾರದ ಎಂ.ಆರ್.ವಾಸುದೇವ್, ಹರಿಕೃಷ್ಣ ಪುನರೂರು, ಮಿಜಾರುಗುತ್ತು ಆನಂದ ಆಳ್ವ, ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಅನಿಲ್, ಮರವೂರು ಜಗದೀಶ ಶೆಟ್ಟಿ, ಮೂಡುಬಿದ್ರೆ ಶ್ರೀಪತಿ ಭಟ್, ಪ್ರದೀಪ ಕುಮಾರ ಕಲ್ಕೂರ, ಪಿ.ಸತೀಶ್ ರಾವ್ ಮತ್ತಿತರರಿದ್ದರು. ಸಂಘಟಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಶರತ್ ಶೆಟ್ಟಿ ಮತ್ತು ರಮ್ಯಾ ಆಸ್ರಣ್ಣ ಕಾರ‍್ಯಕ್ರಮ ನಿರೂಪಿಸಿದರು.
No comments:
Post a Comment