ಕಟೀಲು : ಇಲ್ಲಿನ ದೇಗುಲದ ಸರಸ್ವತೀ ಸದನದಲ್ಲಿ ದುರ್ಗಾ ಮಕ್ಕಳ ಮೇಳ ತೃತೀಯ ವಾರ್ಷಿಕೋತ್ಸವದ ನಿಮಿತ್ತ ಒಂದು ವಾರಗಳ ಕಾಲ ಆಯೋಜಿಸಿರುವ ಮಕ್ಕಳ ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆ ಭಾನುವಾರ ಉದ್ಘಾಟನೆಗೊಂಡಿತು.
ಧರ್ಮಸ್ಥಳದ ಹರ್ಷೇಂದ್ರಕುಮಾರ್ ಮಾತನಾಡಿ ಯಕ್ಷಗಾನ ಕ್ಷೇತ್ರಕ್ಕೆ ಜನ ಬರುತ್ತಿಲ್ಲ ಎಂಬ ಸ್ಥಿತಿಯಲ್ಲಿ ಮಕ್ಕಳನ್ನು ಯಕ್ಷಗಾನ ಕಲಾವಿದರನ್ನಾಗಿ ತಯಾರು ಮಾಡುವ ಕಾರ‍್ಯ ಸ್ತುತ್ಯರ್ಹವಾಗಿದ್ದು, ವಿವಿಧೆಡೆ ಬೆಳೆಯುತ್ತಿರುವ ಮಕ್ಕಳ ಯಕ್ಷಗಾನ ಮೇಳಗಳಿಗೆ ಉತ್ತೇಜನ ನೀಡುವುದಕ್ಕೆ ಸ್ಪರ್ಧೆಗಳು ಪೂರಕ ಎಂದರು.
ಧಾರ್ಮಿಕ ಪರಿಷತ್‌ನ ಪಂಜ ಭಾಸ್ಕರ ಭಟ್, ಕಟೀಲು ಯಕ್ಷಗಾನಕ್ಕೆ ಕೊಡುತ್ತಿರುವ ಕೊಡುಗೆ ಅನನ್ಯ ಎಂದರು.
ಕಟೀಲಿನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಖ್ಯಾತ ಕಲಾವಿದ ಡಾ.ಭಾಸ್ಕರಾನಂದ ಕುಮಾರ್, ಮುಂಬೈನ ಉದ್ಯಮಿ ಜೆ.ಸಿ.ಕುಮಾರ್, ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಾರ‍್ಯದರ್ಶಿ ವಾಸುದೇವ ಶೆಣೈ, ಟ್ರಸ್ಟಿ ಬಜಪೆ ರಾಘವೇಂದ್ರ ಭಟ್ ಮತ್ತಿತರರಿದ್ದರು.
ಜಿಲ್ಲೆಯ ವಿವಿಧ ಮಕ್ಕಳ ತಂಡಗಳು ದಿನಂಪ್ರತಿ ಸಂಜೆ ೬ಗಂಟೆಯಿಂದ ೮ತನಕ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಲಿದ್ದು, ತಾ.೧೧ರಂದು ಬಹುಮಾನ ವಿತರಣೆ ನಡೆಯಲಿದೆ.
No comments:
Post a Comment