ಕಟೀಲು : ಯಕ್ಷಗಾನ ತಾಳಮದ್ದಲೆ, ವೈದಿಕ, ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟ, ಕೊರ್ಗಿ ಉಪಾಧ್ಯಾಯರು ಸದಾ ಸ್ಮರಣೀಯರು ಎಂದು ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್ ಸೋಮವಾರ ಕಟೀಲು ಸರಸ್ವತೀ ಸದನದಲ್ಲಿ ನಡೆದ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದರು.
ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಐದನೆಯ ತರಗತಿವರೆಗೆ ಕಲಿತ ನನ್ನಂತಹವನಲ್ಲಿ ಸಂಸ್ಕೃತ ಶ್ಲೋಕಗಳನ್ನು ರಂಗಸ್ಥಳ, ತಾಳಮದ್ದಲೆಗಳಲ್ಲಿ ಧೈರ‍್ಯವಾಗಿ ಹೇಳುವುದಕ್ಕೆ ಕಲಿಸಿ, ಪ್ರೇರಣೆ ಕೊಟ್ಟವರು ಕೊರ್ಗಿ ಉಪಾಧ್ಯಾಯರು ಎಂದರು.
ಕೊರ್ಗಿ ಉಪಾಧ್ಯಾಯರ ಹೆಸರಲ್ಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿ, ಅವರ ಕುರಿತಾದ ಗ್ರಂಥವನ್ನು ಪ್ರಕಟಿಸುವ ಯೋಚನೆಯಿದೆ ಎಂದು ವಾಸುದೇವ ರಂಗ ಭಟ್ ಹೇಳಿದರು.
ಪ್ರಭಾಕರ ಜೋಷಿ, ಕೆ.ಗೋವಿಂದ ಭಟ್, ಕಟೀಲಿನ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಾಧ್ಯಾಯರ ಕುರಿತು ಮಾತನಾಡಿದರು.
No comments:
Post a Comment