ಕಟೀಲು : ಯಕ್ಷಗಾನವನ್ನು ಅಕಡಮಿಕ್ ಆಗಿ ಬೆಳೆಸುವ, ರಾಷ್ಟ್ರಾಂತರ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಲಾಗುವುದು ಎಂದು ಯಕ್ಷಗಾನ ಬಯಲಾಟ ಅಕಾಡಮಿಯ ನೂತನ ಅಧ್ಯಕ್ಷ ಎಂ.ಎಲ್.ಸಾಮಗ ಹೇಳಿದರು.
ಅವರು ಸೋಮವಾರ ಕಟೀಲಿನ ಸರಸ್ವತೀ ಸದನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ತಾಳಮದ್ದಲೆ ಸಪ್ತಾಹ ಧರ್ಮಸ್ಯ ಸೂಕ್ಷ್ಮಾ ಗತಿಃ ಉದ್ಘಾಟಿಸಿ ಮಾತನಾಡಿದರು.
ಕುಂಬ್ಳೆ ಸುಂದರರಾಯರು ಹಾಗೂ ಇತರರು ಅಕಾಡಮಿಯನ್ನು ಹೇಗೆ ನಡೆಸಬೇಕೆಂಬ ಕಲ್ಪನೆ ನೀಡಿದ್ದಾರೆ. ಅದನ್ನು ಮುಂದುವರಿಸುವ ಕಾರ‍್ಯವನ್ನು ತಮ್ಮೆಲ್ಲರ ಸಹಕಾರದಿಂದ ಮಾಡುತ್ತೇವೆ ಎಂದು ಅವರು ಹೇಳಿದರು.
ಕಟೀಲು ದೇಗುಲದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಪ್ರಭಾಕರ ಜೋಷಿ, ವಿಜಯಾ ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ ಮತ್ತಿತರರಿದ್ದರು. ಬಳಿಕ ಪ್ರಸಿರ್ದದ ಕಲಾವಿದರಿಂದ ಕೌಶಿಕ ಚರಿತ್ರೆ ನಡೆಯಿತು.
No comments:
Post a Comment