
Friday, May 27, 2011
Monday, May 23, 2011
ಕಟೀಲು ಕುದ್ರು ಜೀರ್ಣೋದ್ಧಾರಕ್ಕೆ ಸಂಕಲ್ಪ ಪ್ರಾರ್ಥನೆ


ಭ್ರಾಮರೀ ದುರ್ಗಾಪರಮೇಶ್ವರೀ ದೇವರ ಮೂಲ ಸ್ಥಾನ ಕುದ್ರುವಿನ ಜೀರ್ಣೋದ್ಧಾರ ಕಾರ‍್ಯಕ್ಕೆ ಭಾನುವಾರ ಸಂಕಲ್ಪ ಪ್ರಾರ್ಥನೆ ನಡೆಯಿತು.ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶಿಬರೂರು ಕೃಷ್ಣರಾಜ ತಂತ್ರಿ, ದೇಗುಲದ ಪ್ರಬಂಧಕ ವಿಶ್ವೇಶರ ರಾವ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ನಂದಿನೀ ನದಿ ಮಧ್ಯೆದಲ್ಲಿರುವ ಕುದ್ರುವಿನಲ್ಲಿ ದೇವರ ಗರ್ಭಗುಡಿ, ಶಾಸ್ತಾರ, ನಾಗ, ಬ್ರಹ್ಮಸ್ಥಾನ, ಪಿಲಿಚಾಮುಂಡಿ ದೈವದ ಗುಡಿ, ಕೆರೆ, ತೀರ್ಥಬಾವಿಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಸುತ್ತಲೂ ಯಾಜ್ಞಿಕ ವೃಕ್ಷಗಳನ್ನು ನೆಡಲಾಗುವುದು. ಇದಕ್ಕಾಗಿ ಸುಮಾರು ರೂ.೨೪ಲಕ್ಷಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ನಿಟ್ಟಿನಲ್ಲಿ ಭಕ್ತರು ಈಗಾಗಲೇ ಸೇವಾರೂಪದಲ್ಲಿ ದೇಣಿಗೆ ನೀಡಲು ಆರಂಭಿಸಿದ್ದಾರೆ ಎಂದು ಅರ್ಚಕ ಅನಂತ ಆಸ್ರಣ್ಣ ತಿಳಿಸಿದ್ದಾರೆ.Monday, May 9, 2011
ಕಟೀಲಿನಲ್ಲಿ ಸಾಮಗ ಸಂಸ್ಮರಣೆ
ಶಾಸ್ತ್ರಜ್ಞರಾಗಿ ಅರ್ಥ ಹೇಳಿ ದೊಡ್ಡ ಸಾಮಗರು ಹಾಗೂ ರಸ ಪ್ರಧಾನವಾಗಿ ಅರ್ಥ ಹೇಳುವ ಮೂಲಕ ಸಣ್ಣ ಸಾಮಗರು ಪ್ರಸಿದ್ಧರಾದವರು. ಯಕ್ಷಗಾನ, ಹರಿಕಥೆ ಕ್ಷೇತ್ರಗಳಿಗೆ ಮಹತ್ತರವಾದ ಕೊಡುಗೆ ಕೊಟ್ಟ ಸಾಮಗದ್ವಯರು ಸದಾ ಸ್ಮರಣೀಯರು ಎಂದು ವಿದ್ವಾಂಸ, ಅರ್ಥವಾದಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ ಹೇಳಿದರು.ಅವರು ಸೋಮವಾರ ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆದ ಮಲ್ಪೆ ಶಂಕರನಾರಾಯಣ ಸಾಮಗ ಹಾಗೂ ರಾಮದಾಸ ಸಾಮಗರ ಸಂಸ್ಮರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಈ ಸಂದರ್ಭ ಖ್ಯಾತ ಕಲಾವಿದ ಪಾತಾಳ ವೆಂಕಟರಮಣ ಭಟ್ಟರನ್ನು ಸಂಮಾನಿಸಲಾಯಿತು. ಕಟೀಲು ದೇಗುಲದ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.ಎಂ.ಎಲ್.ಸಾಮಗ ಸ್ವಾಗತಿಸಿದರು. ವಾಸುದೇವ ಸಾಮಗ ವಂದಿಸಿದರು. ಬಳಿಕ ಸಂಯಮ ತಂಡದಿಂದ ತಾಳಮದ್ದಲೆ ನಡೆಯಿತು. ಸಾಮಗದ್ವಯರ ಸಂಸ್ಮರಣೆ ಕಾರ‍್ಯಕ್ರಮವನ್ನು ಹದಿನೈದು ದಿನಗಳ ಕಾಲ ವಿವಿಧೆಡೆ ಆಯೋಜಿಸಲಾಗುತ್ತಿದ್ದು, ಕಟೀಲಿನಲ್ಲಿ ನಡೆದದ್ದು ೯ದಿನದ ಕಾರ್ಯಕ್ರಮ.
Saturday, May 7, 2011
Wednesday, April 27, 2011
ಗಿಡಿಗೆರೆಯಲ್ಲಿ ಬ್ರಹ್ಮಕಲಶ
ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶ್ರೀ ದೇವರ ಮೂರ್ತಿಗಳನ್ನು ಕಟೀಲಿನಿಂದ ಮೆರವಣಿಗೆಯಲ್ಲಿ ತರಲಾಯಿತು.
ಧಾರ್ಮಿಕ ಜಾಗೃತಿಯಿಂದ ಗ್ರಾಮದಲ್ಲಿ ಸಹಬಾಳ್ವೆ, ಶಾಂತಿ ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದರು.ಅವರು ಬುಧವಾರ ಗಿಡಿಗಿರೆಯ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಆಯೋಜಿಸಲಾದ ಸಭಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಮಂಜೇಶ್ವರದ ಶ್ರೀ ಆಂಜನೇಯ ಸ್ವಾಮೀಜಿ. ಶಾಸಕ ಅಭಯಚಂದ್ರ ಜೈನ್, ಶಿಬರೂರು ಹಯಗ್ರೀವ ತಂತ್ರಿ, ಮುರ ಕೃಷ್ಣ ಶೆಟ್ಟಿ, ಸೋಂದಾ ಭಾಸ್ಕರ ಭಟ್, ಕೃಷ್ಣಪ್ಪ ಕೊಂಚಾಡಿ, ಸೀತಾರಾಮ ಕೊಂಚಾಡಿ, ಸಮಿತಿಯ ತಿಮ್ಮಪ್ಪ ಗುರಿಕಾರ, ಶ್ಯಾಮ, ಮೆನ್ನಬೆಟ್ಟು ಗ್ರಾ.ಪಂ.ನ ಶೈಲಾ ಶೆಟ್ಟಿ, ಸದಾನಂದ ಶೆಟ್ಟಿ, ರವಿಶಂಕರ ಶೆಟ್ಟಿ, ರಾಜ್ಯ ಅಲೆಮಾರಿಗಳ ಸಂಘದ ಭಾಸ್ಕರದಾಸ್ ಎಕ್ಕಾರು ಮತ್ತಿತರರಿದ್ದರು.ರುಕ್ಮಯ ಸ್ವಾಗತಿಸಿದರು. ಕಿರಣ್ ಪಕ್ಕಳ ಕಾರ‍್ಯಕ್ರಮ ನಿರೂಪಿಸಿದರು.
ವಸಂತ ವೇದ ಶಿಬಿರ
Friday, April 22, 2011
ವೈಭವದ ಆರಟ







ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಗುರುವಾರ(ತಾ.೨೨) ರಾತ್ರಿ ವೈಭವದ ಆರಟ, ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಇದೇ ಸಂದರ್ಭ ಶ್ರೀ ಭ್ರಾಮರೀ ಶಿಬರೂರು ಕೊಡಮಣಿತ್ತಾಯ ಭೇಟಿ, ಶ್ರೀ ದೇವರ ಜಲಕದ ಬಳಿಕ ನಡೆದ ಅತ್ತೂರು ಕೊಡೆತ್ತೂರು ಗ್ರಾಮಸ್ಥರ ಮಧ್ಯೆ ನಡೆದ ಸೂಟೆದಾರ ಸೇವೆ, ಸಿಡಿಮದ್ದು ಪ್ರದರ್ಶನ ಭಕ್ತರ ನವಿರೇಳಿಸಿತು. ಜೇಸುದಾಸ್ ಸಂಗೀತ ರಥೋತ್ಸವಕ್ಕೆ ಮೆರುಗುಕೊಟ್ಟಿತು.
Thursday, April 14, 2011
Friday, April 8, 2011
Wednesday, April 6, 2011
ಕಟೀಲು ಕಾಲೇಜಿನಲ್ಲಿ ಪ್ರತಿಭಾಂಗಣ ಉದ್ಘಾಟನೆ
ಕಟೀಲು ಪದವಿ ಕಾಲೇಜಿನಲ್ಲಿ ನೂತನ ಜಿಮ್‌ನ್ನು ಸಾಂಸದ ನಳಿನ್ ಕುಮಾರ್ ಉದ್ಘಾಟಿಸಿದ್ದು ಹೀಗೆ!
ಶಿಕ್ಷಣದೊಂದಿಗೆ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಬೆಳವಣಿಗೆಗಳೂ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಟಿ.ಸಿ.ಶಿವಶಂಕರ ಮೂರ್ತಿ ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು ೨೦ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಭಾಗೃಹ ಪ್ರತಿಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.ಉನ್ನತ ಶಿಕ್ಷಣವನ್ನು ಪಡೆಯುವ ಕಾಲೇಜುಗಳಲ್ಲಿ ಶೇ. ೫೦ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದರೆ, ಅಂತಹ ೫೦೦ ಸಂಸ್ಥೆಗಳಿಗೆ ಕಂಪ್ಯೂಟರ್, ಎಲ್‌ಸಿಡಿ ಇತ್ಯಾದಿಗಳಿಗಾಗಿ ರೂ.೨೫ಲಕ್ಷ ಅನುದಾನ ನೀಡುವ ಯೋಜನೆಯಿದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೧೨.೫ರಷ್ಟು ಮಾತ್ರ ಎಂದು ಶಿವಶಂಕರಮೂರ್ತಿ ಹೇಳಿದರು.ಕಾಲೇಜಿನ ನೂತನ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿದ ಸಾಂಸದ ನಳಿನ್ ಕುಮಾರ್ ಕಾಲೇಜಿನ ಕಟ್ಟಡಕ್ಕೆ ಸಾಂಸದರ ನಿಧಿಯಿಂದ ರೂ.೫ಲಕ್ಷ ಅನುದಾನ ನೀಡುತ್ತೇನೆ. ಐದು ತಿಂಗಳ ಒಳಗೆ ಎಂಆರ್‌ಪಿಎಲ್ ಸಹಕಾರದಿಂದ ಕಟೀಲು ಕಾಲೇಜಿನಲ್ಲಿ ಕಂಪ್ಯೂಟರ್ ಕೇಂದ್ರ ಆರಂಭಿಸಲಾಗುವುದು. ಶಿಕ್ಷಣವೇ ಅಂತಿಮ ಎಂದು ಯಾರೂ ಭಾವಿಸಬೇಕಾಗಿಲ್ಲ. ಸಚಿನ್ ತೆಂಡೂಲ್ಕರ್ ಹೈಸ್ಕೂಲಿನಲ್ಲಿ ಅನುತ್ತೀರ್ಣನಾಗಿದ್ದ. ಆದರೆ ಆತನ ಕುರಿತಾದ ಪಾಠವನ್ನು ಇವತ್ತು ಹೈಸ್ಕೂಲು ಪಠ್ಯದಲ್ಲಿ ನೀಡಲಾಗಿದೆ. ನೈತಿಕತೆಯಿಲ್ಲದ ಶಿಕ್ಷಣ ಸಂಸ್ಕೃತಿಯಿಲ್ಲದ ಧರ್ಮ ದೇಶವನ್ನು ಅರಾಜಕತೆಯತ್ತ ಸಾಗಿಸುತ್ತದೆ ಎಂದರು.ಪ್ರತಿಭಾಂಗಣಕ್ಕೆ ದೇಣಿಗೆ ನೀಡಿದ ಸಂಜೀವನಿ ಟ್ರಸ್ಟ್‌ನ ಸಂಜೀವ ರಾವ್, ಉದಯಕುಮಾರ್ ಪರವಾಗಿ ಹೂವಯ್ಯರನ್ನು ಶಾಸಕ ಅಭಯಚಂದ್ರ ಗೌರವಿಸಿದರು.ಅರ್ಚಕ ವಾಸುದೇವ ಆಸ್ರಣ್ಣ, ರಕ್ಷಕ ಶಿಕ್ಷಕ ಸಂಘದ ಕೊಡೆತ್ತೂರು ವೇದವ್ಯಾಸ ಉಡುಪ, ಸದಾಶಿವ ಶೆಟ್ಟಿ, ಕೇಶವ ಎಚ್, ವನಿತಾ ವೇದಿಕೆಯಲ್ಲಿದ್ದರು.ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ಪರಮೇಶ್ವರ ಸಿ.ಎಚ್. ಕಾರ್‍ಯಕ್ರಮ ನಿರೂಪಿಸಿದರು. ಕೃಷ್ಣ ಕಾಂಚನ್ ವಂದಿಸಿದರು.
Subscribe to:
Posts (Atom)













