Wednesday, April 6, 2011
ಕಟೀಲು ಕಾಲೇಜಿನಲ್ಲಿ ಪ್ರತಿಭಾಂಗಣ ಉದ್ಘಾಟನೆ
ಕಟೀಲು ಪದವಿ ಕಾಲೇಜಿನಲ್ಲಿ ನೂತನ ಜಿಮ್‌ನ್ನು ಸಾಂಸದ ನಳಿನ್ ಕುಮಾರ್ ಉದ್ಘಾಟಿಸಿದ್ದು ಹೀಗೆ! ಶಿಕ್ಷಣದೊಂದಿಗೆ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಬೆಳವಣಿಗೆಗಳೂ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಟಿ.ಸಿ.ಶಿವಶಂಕರ ಮೂರ್ತಿ ಹೇಳಿದರು.ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು ೨೦ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಭಾಗೃಹ ಪ್ರತಿಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.ಉನ್ನತ ಶಿಕ್ಷಣವನ್ನು ಪಡೆಯುವ ಕಾಲೇಜುಗಳಲ್ಲಿ ಶೇ. ೫೦ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದರೆ, ಅಂತಹ ೫೦೦ ಸಂಸ್ಥೆಗಳಿಗೆ ಕಂಪ್ಯೂಟರ್, ಎಲ್‌ಸಿಡಿ ಇತ್ಯಾದಿಗಳಿಗಾಗಿ ರೂ.೨೫ಲಕ್ಷ ಅನುದಾನ ನೀಡುವ ಯೋಜನೆಯಿದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೧೨.೫ರಷ್ಟು ಮಾತ್ರ ಎಂದು ಶಿವಶಂಕರಮೂರ್ತಿ ಹೇಳಿದರು.ಕಾಲೇಜಿನ ನೂತನ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿದ ಸಾಂಸದ ನಳಿನ್ ಕುಮಾರ್ ಕಾಲೇಜಿನ ಕಟ್ಟಡಕ್ಕೆ ಸಾಂಸದರ ನಿಧಿಯಿಂದ ರೂ.೫ಲಕ್ಷ ಅನುದಾನ ನೀಡುತ್ತೇನೆ. ಐದು ತಿಂಗಳ ಒಳಗೆ ಎಂಆರ್‌ಪಿಎಲ್ ಸಹಕಾರದಿಂದ ಕಟೀಲು ಕಾಲೇಜಿನಲ್ಲಿ ಕಂಪ್ಯೂಟರ್ ಕೇಂದ್ರ ಆರಂಭಿಸಲಾಗುವುದು. ಶಿಕ್ಷಣವೇ ಅಂತಿಮ ಎಂದು ಯಾರೂ ಭಾವಿಸಬೇಕಾಗಿಲ್ಲ. ಸಚಿನ್ ತೆಂಡೂಲ್ಕರ್ ಹೈಸ್ಕೂಲಿನಲ್ಲಿ ಅನುತ್ತೀರ್ಣನಾಗಿದ್ದ. ಆದರೆ ಆತನ ಕುರಿತಾದ ಪಾಠವನ್ನು ಇವತ್ತು ಹೈಸ್ಕೂಲು ಪಠ್ಯದಲ್ಲಿ ನೀಡಲಾಗಿದೆ. ನೈತಿಕತೆಯಿಲ್ಲದ ಶಿಕ್ಷಣ ಸಂಸ್ಕೃತಿಯಿಲ್ಲದ ಧರ್ಮ ದೇಶವನ್ನು ಅರಾಜಕತೆಯತ್ತ ಸಾಗಿಸುತ್ತದೆ ಎಂದರು.ಪ್ರತಿಭಾಂಗಣಕ್ಕೆ ದೇಣಿಗೆ ನೀಡಿದ ಸಂಜೀವನಿ ಟ್ರಸ್ಟ್‌ನ ಸಂಜೀವ ರಾವ್, ಉದಯಕುಮಾರ್ ಪರವಾಗಿ ಹೂವಯ್ಯರನ್ನು ಶಾಸಕ ಅಭಯಚಂದ್ರ ಗೌರವಿಸಿದರು.ಅರ್ಚಕ ವಾಸುದೇವ ಆಸ್ರಣ್ಣ, ರಕ್ಷಕ ಶಿಕ್ಷಕ ಸಂಘದ ಕೊಡೆತ್ತೂರು ವೇದವ್ಯಾಸ ಉಡುಪ, ಸದಾಶಿವ ಶೆಟ್ಟಿ, ಕೇಶವ ಎಚ್, ವನಿತಾ ವೇದಿಕೆಯಲ್ಲಿದ್ದರು.ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ಪರಮೇಶ್ವರ ಸಿ.ಎಚ್. ಕಾರ್‍ಯಕ್ರಮ ನಿರೂಪಿಸಿದರು. ಕೃಷ್ಣ ಕಾಂಚನ್ ವಂದಿಸಿದರು.
Subscribe to:
Post Comments (Atom)
No comments:
Post a Comment