Monday, May 9, 2011
ಕಟೀಲಿನಲ್ಲಿ ಸಾಮಗ ಸಂಸ್ಮರಣೆ
ಶಾಸ್ತ್ರಜ್ಞರಾಗಿ ಅರ್ಥ ಹೇಳಿ ದೊಡ್ಡ ಸಾಮಗರು ಹಾಗೂ ರಸ ಪ್ರಧಾನವಾಗಿ ಅರ್ಥ ಹೇಳುವ ಮೂಲಕ ಸಣ್ಣ ಸಾಮಗರು ಪ್ರಸಿದ್ಧರಾದವರು. ಯಕ್ಷಗಾನ, ಹರಿಕಥೆ ಕ್ಷೇತ್ರಗಳಿಗೆ ಮಹತ್ತರವಾದ ಕೊಡುಗೆ ಕೊಟ್ಟ ಸಾಮಗದ್ವಯರು ಸದಾ ಸ್ಮರಣೀಯರು ಎಂದು ವಿದ್ವಾಂಸ, ಅರ್ಥವಾದಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ ಹೇಳಿದರು.ಅವರು ಸೋಮವಾರ ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆದ ಮಲ್ಪೆ ಶಂಕರನಾರಾಯಣ ಸಾಮಗ ಹಾಗೂ ರಾಮದಾಸ ಸಾಮಗರ ಸಂಸ್ಮರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಈ ಸಂದರ್ಭ ಖ್ಯಾತ ಕಲಾವಿದ ಪಾತಾಳ ವೆಂಕಟರಮಣ ಭಟ್ಟರನ್ನು ಸಂಮಾನಿಸಲಾಯಿತು. ಕಟೀಲು ದೇಗುಲದ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.ಎಂ.ಎಲ್.ಸಾಮಗ ಸ್ವಾಗತಿಸಿದರು. ವಾಸುದೇವ ಸಾಮಗ ವಂದಿಸಿದರು. ಬಳಿಕ ಸಂಯಮ ತಂಡದಿಂದ ತಾಳಮದ್ದಲೆ ನಡೆಯಿತು. ಸಾಮಗದ್ವಯರ ಸಂಸ್ಮರಣೆ ಕಾರ‍್ಯಕ್ರಮವನ್ನು ಹದಿನೈದು ದಿನಗಳ ಕಾಲ ವಿವಿಧೆಡೆ ಆಯೋಜಿಸಲಾಗುತ್ತಿದ್ದು, ಕಟೀಲಿನಲ್ಲಿ ನಡೆದದ್ದು ೯ದಿನದ ಕಾರ‍್ಯಕ್ರಮ.
Subscribe to:
Post Comments (Atom)
No comments:
Post a Comment