ಭ್ರಾಮರೀ ದುರ್ಗಾಪರಮೇಶ್ವರೀ ದೇವರ ಮೂಲ ಸ್ಥಾನ ಕುದ್ರುವಿನ ಜೀರ್ಣೋದ್ಧಾರ ಕಾರ‍್ಯಕ್ಕೆ ಭಾನುವಾರ ಸಂಕಲ್ಪ ಪ್ರಾರ್ಥನೆ ನಡೆಯಿತು.ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶಿಬರೂರು ಕೃಷ್ಣರಾಜ ತಂತ್ರಿ, ದೇಗುಲದ ಪ್ರಬಂಧಕ ವಿಶ್ವೇಶರ ರಾವ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.ಅಷ್ಟ ಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ನಂದಿನೀ ನದಿ ಮಧ್ಯೆದಲ್ಲಿರುವ ಕುದ್ರುವಿನಲ್ಲಿ ದೇವರ ಗರ್ಭಗುಡಿ, ಶಾಸ್ತಾರ, ನಾಗ, ಬ್ರಹ್ಮಸ್ಥಾನ, ಪಿಲಿಚಾಮುಂಡಿ ದೈವದ ಗುಡಿ, ಕೆರೆ, ತೀರ್ಥಬಾವಿಗಳನ್ನು ನಿರ್ಮಿಸಲಾಗುವುದು. ಅಲ್ಲದೆ ಸುತ್ತಲೂ ಯಾಜ್ಞಿಕ ವೃಕ್ಷಗಳನ್ನು ನೆಡಲಾಗುವುದು. ಇದಕ್ಕಾಗಿ ಸುಮಾರು ರೂ.೨೪ಲಕ್ಷಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ನಿಟ್ಟಿನಲ್ಲಿ ಭಕ್ತರು ಈಗಾಗಲೇ ಸೇವಾರೂಪದಲ್ಲಿ ದೇಣಿಗೆ ನೀಡಲು ಆರಂಭಿಸಿದ್ದಾರೆ ಎಂದು ಅರ್ಚಕ ಅನಂತ ಆಸ್ರಣ್ಣ ತಿಳಿಸಿದ್ದಾರೆ.
No comments:
Post a Comment