Wednesday, November 5, 2014

nov ೭-೯: ಕಟೀಲಿನಲ್ಲಿ ದುರ್ಗಾಮಕ್ಕಳ ಮೇಳದ ಕಲಾಪರ್ವ


ದಿನವಿಡೀ ಮಕ್ಕಳ ಯಕ್ಷಗಾನ
೧೫ತಂಡಗಳು ಭಾಗಿ
ಕಟೀಲು : ಮಕ್ಕಳಿಗೆ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ, ಮುಮ್ಮೇಳವನ್ನು ಕಲಿಸುವ ಉದ್ಧೇಶದಿಂದ ಕಟೀಲಿನಲ್ಲಿ ಆರಂಭವಾದ ಶ್ರೀ ದುರ್ಗಾ ಮಕ್ಕಳ ಮೇಳದ ಆರನೆಯ ವರ್ಷದ ಕಲಾಪರ್ವ ತಾ.೭ ಶುಕ್ರವಾರದಿಂದ ತಾ. ೯ರ ಭಾನುವಾರದವರೆಗೆ ನಡೆಯಲಿದೆ ಎಂದು ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ತಾ.೭ರಂದು ಬೆಳಿಗ್ಗೆ ಎಲ್ಲೂರು ಪಂಚಾಕ್ಷರೀ ಮಕ್ಕಳ ಮೇಳದವರಿಂದ ಗಣೇಶೋದ್ಭವ, ಪೊರ್ಕೋಡಿ ಸೋಮನಾಥೇಶ್ವರ ಯಕ್ಷನಿಧಿ ಟ್ರಸ್ಟ್‌ನವರಿಂದ ಗುರುದಕ್ಷಿಣೆ, ಕುರ್ನಾಡು ದತ್ತಾತ್ರೇಯ ಮಂಡಳಿಯವರಿಂದ ಬಬ್ರುವಾಹನ, ಇರಾ ಪ್ರಗತಿ ಹಿ.ಪ್ರಾ.ಶಾಲೆಯವರಿಂದ ಶಿವಭಕ್ತ ವೀರಮಣಿ, ಬಾಲಕಯಕ್ಷಕೂಟ ಕದ್ರಿಯವರಿಂದ ಜಾಂಬವತಿ ಕಲ್ಯಾಣ ಪ್ರದರ್ಶನಗೊಳ್ಳಲಿದೆ. 
ತಾ.೮ರಂದು ಕುಜಿಂಗಿರಿ ರಕ್ತೇಶ್ವರೀ ಕಲಾತಂಡದಿಂದ ಶಕ್ರಾರಿ, ಉರ್ಡೂರು ಅಡೂರು ಶಿವರಂಜಿನಿ ಕೇಂದ್ರದಿಂದ ಅಂಧಕಾಸುರ ಮೋಕ್ಷ, ಕುಂಪಲ ವರದಾಯಿನೀ ಕಲಾಸಂಪದದವರಿಂದ ಗರುಡ ಗರ್ವಭಂಗ, ಪಾಣಾಜೆ ಸುಬ್ರಹ್ಮಣ್ಯೇಶ್ವರ ಸಂಘದವರಿಂದ ಸುದರ್ಸನ ವಿಜಯ, ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯವರಿಂದ ನರಕಾಸುರ ವಧೆ ಪ್ರದರ್ಶನಗೊಳ್ಳಲಿದೆ. ತಾ.೯ರಂದು ಸಜಿಪಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನವರಿಂದ ಕುಶಲವ, ಮಂಜನಾಡಿ ದುರ್ಗಾಪರಮೇಶ್ವರೀ ಕಲಾಕೇಂದ್ರದವರಿಂದ ಭಕ್ತ ಸುಧನ್ವ, ಕಳಸ ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದವರಿಂದ ರಾಣಿ ಶಶಿಪ್ರಭೆ, ಸುಬ್ರಹ್ಮಣ್ಯ ವಿದ್ಯಾಸಾಗರ ಕಲಾಶಾಲೆಯವರಿಂದ ಪಾಂಚಜನ್ಯ ಹಾಗೂ ಕೊನೆಗೆ ಕಟೀಲು ಶ್ರೀ ದುರ್ಗಾ ಮಕ್ಕಳಮೇಳದವರಿಂದ ದಕ್ಷಾಧ್ವರ ಪ್ರದರ್ಶಿತಗೊಳ್ಳಲಿದೆ.
ತಾ.೭ರ ಬೆಳಿಗ್ಗೆ ವೆಂಕಟರಮಣ ಆಸ್ರನ್ಣ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಶೇಖರ ಶೆಟ್ಟಿ, ಬಿ.ಕೆ.ಸಂದೀಪ್, ಬಾಬು ಎನ್.ಶೆಟ್ಟಿ, ಬಿ.ಡಿ.ರಾಮಚಂದ್ರ, ಪ್ರಸಾದ ಆಸ್ರಣ ಉಪಸ್ಥಿತಿಯಲ್ಲಿ ಉದ್ಘಾಟನೆ, ತಾ.೯ರ ಸಂಜೆ ಶಾಸಕ ದಯಾನಂದ ರೆಡ್ಡಿ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಚಂದ್ರಹಾಸ ರೈ, ಪದ್ಮನಾಭ ಪಯ್ಯಡೆ, ಅಗರಿ ರಾಘವೇಂದ್ರ ರಾವ್, ಬಾಬು ಎನ್. ಶೆಟ್ಟಿ, ರತ್ನಾಕರ ಶೆಟ್ಟಿ, ಭುಜಂಗ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ರಾಜೇಶ ಶೆಟ್ಟಿ, ಐಕಳ ಆನಂದ ಶೆಟ್ಟಿ ಉಪಸ್ಥಿತಿಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಇವರಿಗೆ ಸಂಮಾನ, ಮಧೂರು ವೆಂಕಟಕೃಷ್ಣ ಹಾಗೂ ವಿಶ್ವೇಶ ರಾವ್‌ಗೆ ಅಭಿನಂದನೆ, ಗುರುವಂದನೆ, ಪ್ರತಿಭಾ ಪುರಸ್ಕಾರ ನಡೆಯಲಿದೆ. 

ಕಟೀಲು ದುರ್ಗಾ ಮಕ್ಕಳ ಮೇಳದಿಂದ ೬ವರ್ಷಗಳಲ್ಲಿ ೧೬೨ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡಲಾಗಿದ್ದು, ಈವರೆಗೆ ಮುಂಬೈ, ಬೆಂಗಳೂರು, ಸೋಂದಾ, ಮಡಿಕೇರಿ ಸೇರಿದಂತೆ ೧೩೦ಪ್ರದರ್ಶನಗಳನ್ನು ನೀಡಿದೆ. 
ವರ್ಷಂಪ್ರತಿ ಉಚಿತ ಪ್ರವಾಸ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರಗಳ ಮೂಲಕ ಯಕ್ಷಗಾನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಶ್ರೀ ಕೃಷ್ಣ ಕಂಸ ವಧೇ, ಮಹಿಷ ಮರ್ಧಿನಿ, ವೀರಮಣಿ ಕಾಳಗ, ಪಾಂಜನ್ಯ ಸೇರಿದಂತೆ ೧೬ಕ್ಕೂ ಹೆಚ್ಚು ಪ್ರಸಂಗಗಳನ್ನು ಪ್ರದರ್ಶಿಸಲು ಮಕ್ಕಳ ಮೇಳ ಸಿದ್ಧವಾಗಿದೆ. ಬಲಿಪ ಶಿವಶಂಕರ ಭಟ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತೀ ಬೈಪಾಡಿತ್ತಾಯ, ರಾಜೇಶ್ ಐ. ಯಕ್ಷಗಾನ ಗುರುಗಳಾಗಿದ್ದು, ಪ್ರತಿ ಶನಿವಾರ ಆದಿತ್ಯವಾರ ಕಟೀಲಿನಲ್ಲಿ ತರಗತಿಗಳು ನಡೆಯುತ್ತವೆ ಎಂದು ಮೇಳದ ಕಾರ್ಯ
ದರ್ಶಿ ವಾಸುದೇವ ಶೆಣೈ ತಿಳಿಸಿದ್ದಾರೆ.

No comments:

Post a Comment