Saturday, November 1, 2014

ಆಚರಣೆಗಳು ಸಂಸ್ಕಾರದ ಪ್ರತೀಕ - ಕಮಲಾದೇವಿಪ್ರಸಾದ ಆಸ್ರಣ್ಣ

ಕಟೀಲು : ದೀಪಾವಳಿ, ತುಳಸೀ ಪೂಜೆ ಸೇರಿದಂತೆ ಎಲ್ಲ ಹಬ್ಬಗಳ ಆಚರಣೆಗಳೂ ನಮ್ಮಲ್ಲಿ ಸಂತಸವನ್ನು ಹೆಚ್ಚಿಸುವುದರೊಂದಿಗೆ ಸಂಸ್ಕಾರವನ್ನು ಉಳಿಸುತ್ತವೆ. ಭಗವಂತನೆಡೆಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಪೂರಕ ಎಂದು ಕಟೀಲು ದೇಗುಲದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.
ಅವರು ಕಟೀಲಿನಲ್ಲಿ ನಂದಿನಿ ಬ್ರಾಹ್ಮಣ ಸಭಾದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಬ್ಬಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭ ಪ್ರತಿಭಾನ್ವಿತೆ ಕುಮಾರಿ ಚಂದನಪ್ರಿಯಾರನ್ನು ಸಂಮಾನಿಸಲಾಯಿತು. ರಂಗೋಲಿ, ಸಂಕೀರ್ತನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಭಾದ ಅಧ್ಯಕ್ಷ ಡಾ. ಶಶಿಕುಮಾರ್, ಉಪಾಧ್ಯಕ್ಷ ಡಾ.ಪದ್ಮನಾಭ ಭಟ್, ಕಾರ್ಯದರ್ಶಿ ಕೊಡೆತ್ತೂರು ವೇದವ್ಯಾಸ ಉಡುಪ ಉಪಸ್ಥಿತರಿದ್ದರು. ರಾಮಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment