ಕಟೀಲು ದುರ್ಗಾ ಮಕ್ಕಳ ಮೇಳದ ಕಲಾಪರ್ವ ಸಮಾರೋಪ
ಮಕ್ಕಳಲ್ಲಿ ಯಕ್ಷಗಾನದ ಮೂಲಕ ಸಂಸ್ಕಾರ ಶ್ಲಾಘನೀಯ- ದಯಾನಂದ ರೆಡ್ಡಿ
ಕಟೀಲು : ಕಲಾಮಾತೆ ದೇವಿಯ ಹೆಸರಿನಲ್ಲಿ ಯಕ್ಷಗಾನದ ಮೂಲಕ ಸಂಸ್ಕೃತಿ
ಮತ್ತು ಕಲೆಯನ್ನು ಮಕ್ಕಳಲ್ಲಿ ಬೆಳೆಸುತ್ತ ಸಂಸ್ಕಾರ ತುಂಬುವ ಕಾರ‍್ಯ ಮಹತ್ತರವಾದುದು
ಎಂದು ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ
ಆರನೆಯ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಖ್ಯಾತ ಕಲಾವಿದ ರೆಂಜಾಳ ರಾಮಕೃಷ್ಣ ರಾವ್‌ರನ್ನು ಹತ್ತು ಸಾವಿರ ರೂ. ನಗದು
ಸಹಿತ ಸಮ್ಮಾನಿಸಲಾಯಿತು. ಯಕ್ಷಗಾನ ಸಾಧಕರಾದ
ಮಧೂರು ವೆಂಕಟಕೃಷ್ಣ ಹಾಗೂ ವಿಶ್ವೇಶ ರಾವ್‌ರನ್ನು ಗೌರವಿಸಲಾಯಿತು.
ಯಕ್ಷಗಾನ ಶಿಕ್ಷಕರಾದ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ,
ರಾಜೇಶ್ ಐ.ಕಟೀಲುರನ್ನು ಅಭಿನಂದಿಸಲಾಯಿತು. ಮೇಳದ ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ,
ಅನಂತಪದ್ಮನಾಭ ಆಸ್ರಣ್ಣ, ಉದ್ಯಮಿ ಚಂದ್ರಹಾಸ ರೈ ಬೊಳ್ನಾಡುಗುತ್ತು,
ಅಗರಿ ಸಂಸ್ಥೆಗಳ ಅಗರಿ ರಾಘವೇಂದ್ರ ರಾವ್, ಪೆರಾರ ಬಾಬು ಎಸ್.ಶೆಟ್ಟಿ,
ಬಜಪೆ ವ್ಯವಸಾಯ ಬ್ಯಾಂಕಿನ ಎಕ್ಕಾರು ರತ್ನಾಕರ ಶೆಟ್ಟಿ, ಮುಂಬೈನ ಸುವರ್ಣಬಾಬಾ,
ಪೆರ್ಮುದೆ ಭುಜಂಗ ಶೆಟ್ಟಿ, ಕಸಾಪದ ಪ್ರದೀಪಕುಮಾರ ಕಲ್ಕೂರ,
ಕಟೀಲು ಮೇಳಗಳ ಸಂಚಾಲಕ ಕೆ.ದೇವೀಪ್ರಸಾದ ಶೆಟ್ಟಿ, ಪಂಜ ಭಾಸ್ಕರ ಭಟ್,
ಬೆಂಗಳೂರು ರಾಜೇಶ ಶೆಟ್ಟಿ, ಐಕಳ ಮಹಾಬಲ ಶೆಟ್ಟಿ,
ತೀಯಾ ಸಮಾಜದ ಚಂದ್ರಶೇಖರ ಬೆಳ್ಚಡ,
ಬೆಹರಿನ್ ರಕ್ಷಣಾ ಇಲಾಖೆಯ ರುಕ್ಮಯದಾಸ್, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ,
ಉಪಪ್ರಾಚಾರ್ಯ ಕೆ.ವಿ.ಶೆಟ್ಟಿ, ಮುಖ್ಯ ಶಿಕ್ಷಕಿ ಮಾಲತಿ ವೈ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು.
ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಕಾಲ ೧೪ ಮಕ್ಕಳ ತಂಡಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಒಟ್ಟು ೧೦೨ಗಂಡು ಮಕ್ಕಳು ಹಾಗೂ ೮೬ಹೆಣ್ಣು ಮಕ್ಕಳು ವೇಷ ಧರಿಸಿ
ಕಟೀಲಿನ ಕಲಾಪರ್ವದಲ್ಲಿ ಭಾಗವಹಿಸಿದ್ದು, ಮೂರು ಮಕ್ಕಳ ತಂಡಗಳಿಗೆ
ಮಹಿಳೆಯರೇ ನಿರ್ದೇಶನ ಮಾಡಿದ್ದು ವಿಶೇಷವಾಗಿತ್ತು.
(ಸುರತ್ಕಲ್ ವಿದ್ಯಾದಾಯಿನಿ ತಂಡಕ್ಕೆ ಪೂರ್ಣಿಮಾ, ಕಳಸ ತಂಡಕ್ಕೆ ಜ್ಯೋತಿ ಟಿ.ಎನ್.
ಹಾಗೂ ಪೊರ್ಕೊಡಿ ತಂಡಕ್ಕೆ ಲಕ್ಷ್ಮೀ). ಸಭಾ ಕಾರ‍್ಯಕ್ರಮದ
ಬಳಿಕ ದುರ್ಗಾಮಕ್ಕಳ ಮೇಳದ ಕಲಾವಿದರಿಂದ ದಕ್ಷಾಧ್ವರ ಪ್ರದರ್ಶನಗೊಂಡಿತು.
ಕಟೀಲು : ಯಕ್ಷಗಾನ ಕಲೆಯ ಮಹತ್ವ, ಸಾರವನ್ನು ಕಲಾವಿದರು ಹಾಗೂ ಕಲಾ ಸಂಘಟಕರು
ಹೆಚ್ಚಿಸಿದಾಗ ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.
ಹೆಚ್ಚಿಸಿದಾಗ ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.
ಕಟೀಲು ಸರಸ್ವತಿ ಸದನದಲ್ಲಿ ಶುಕ್ರವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಮೂರು ದಿನಗಳ ಕಾಲದ
ವಾರ್ಷಿಕ ಕಲಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಟೀಲು ದೇವಳ
ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಮಂಗಳೂರು ದುರ್ಗಾ ಫೆಸಿಲಿಟಿ ಸಂಸ್ಥೆಯ
ನಿರ್ದೇಶಕ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದ
ಮೊಕ್ತೇಸರ ಶೇಖರ ಶೆಟ್ಟಿ, ಬಿ.ಕೆ ಸಂದೀಪ್, ಉದ್ಯಮಿಗಳಾದ ಬಾಬು ಎನ್. ಶೆಟ್ಟಿ,
ಕಿನ್ನಿಗೋಳಿ ಬಿ.ಡಿ. ರಾಮಚಂದ್ರ ಆಚಾರ್ಯ, ನಿಲೇಶ್ ಶೆಟ್ಟಿಗಾರ್,
ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು

ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರಿಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು.
ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ
ಪರ್ಯಂತ ಕರಾವಳಿಯ ೧೫ ಮಕ್ಕಳ ತೆಂಕುತಿಟ್ಟು ಯಕ್ಷಗಾನ ತಂಡಗಳು
ಪ್ರದರ್ಶನ ನೀಡಲಿವೆ. ತಾ.೯ರ ಭಾನುವಾರ ಸಂಜೆ ಸಮಾರೋಪ,
ಕಲಾವಿದರ ಸಂಮಾನ ನಡೆಯಲಿವೆ.
ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ
ಪರ್ಯಂತ ಕರಾವಳಿಯ ೧೫ ಮಕ್ಕಳ ತೆಂಕುತಿಟ್ಟು ಯಕ್ಷಗಾನ ತಂಡಗಳು
ಪ್ರದರ್ಶನ ನೀಡಲಿವೆ. ತಾ.೯ರ ಭಾನುವಾರ ಸಂಜೆ ಸಮಾರೋಪ,
ಕಲಾವಿದರ ಸಂಮಾನ ನಡೆಯಲಿವೆ.
No comments:
Post a Comment