Monday, November 3, 2014

ಕಟೀಲು : ಸರಸ್ವತೀ ಮಂದಿರದ ನೂತನ ಸಭಾಂಗಣ ಉದ್ಘಾಟನೆ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಮಂದಿರದ ವಿಸ್ತರಿತ ನೂತನ ಸಭಾಂಗಣವನ್ನು ಸಾಂಸದ ನಳಿನ್ ಕುಮಾರ್ ಸೋಮವಾರ ಉದ್ಘಾಟಿಸಿದರು. ಸಚಿವ ಅಭಯಚಂದ್ರ ಜೈನ್, ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಜಿ.ಪಂ.ಸದಸ್ಯ ಈಶ್ವರ ಕಟೀಲ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು ಉಪಸ್ಥಿತರಿದ್ದರು. .
ನೂತನ ಸರಸ್ವತೀ ಮಂದಿರ ೬೦೦ಮಂದಿ ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿದ್ದು, ಕಲ್ಲಾಡಿ ವಿಠಲ ಶೆಟ್ಟಿ ಅಭಿಮಾನಿ ಬಳಗದವರು ಸುಂಆರು ೧೫ಲಕ್ಷ ವೆಚ್ಚದಲ್ಲಿ ನಿರ್ಮಿಸಿ ದೇಗುಲಕ್ಕೆ ಅರ್ಪಿಸಿದ್ದಾರೆ. ಈ ಸಂದರ್ಭ ಕಲ್ಲಾಡಿ ವಿಠಲ ಶೆಟ್ಟಿ ಅಭಿಮಾನಿ ಬಳಗದ ಪರವಾಗಿ ದೇವೀಪ್ರಸಾದ ಶೆಟ್ಟಿ ದಂಪತಿಗಳನ್ನು ಸಂಮಾನಿಸಲಾಯಿತು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ವಂದಿಸಿದರು
ಚಿತ್ರ : ಕಟೀಲ್ ಸ್ಟುಡಿಯೋ

No comments:

Post a Comment