ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕಗಳ ವಿದ್ಯಾರ್ಥಿಗಳಿಂದ ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಕಿನ್ನಿಗೋಳಿ ರೋಟರಿ, ರೋಟರ್‍ಯಾಕ್ಟ್‌ಗಳ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು. ಕೆಎಂಸಿ ರಕ್ತನಿಧಿಯ ಮುಖ್ಯಸ್ಥೆ ಪೂರ್ಣಿಮಾ ರಾವ್ ಶಿಬಿರ ಉದ್ಘಾಟಿಸಿದರು. ಪದವಿ ಕಾಲೇಜಿನ ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ, ಪ.ಪೂ.ಕಾಲೇಜಿನ ಜಯರಾಮ ಪೂಂಜ, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ರೋಟರಿಯ ಸತೀಶ್ಚಂದ್ರ ಹೆಗ್ಡೆ, ಜೆರಾಲ್ಡ್ ಮಿನೇಜಸ್, ರೋಟರ್‍ಯಾಕ್ಟ್‌ನ ಪ್ರಕಾಶ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಕೇಶವ ಎಚ್. ಸ್ವಾಗತಿಸಿದರು. ಡಾ.ಕೃಷ್ಣ ಕಾಂಚನ್ ವಂದಿಸಿದರು. ೫೯ ವಿದ್ಯಾರ್ಥಿಗಳು ರಕ್ತ ನೀಡಿದರು.
No comments:
Post a Comment