ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಂದಿನೀ ಅವತರಣ ದಿನದ ಪ್ರಯುಕ್ತ ಆಯೋಜಿಸಲಾದ ಕೃಷ್ಣ ಆಸ್ರಣ್ಣ ಸಂಸ್ಮರಣಾರ್ಥ ಯಕ್ಷಗಾನ ಬಯಲಾಟ ಅಕಾಡಮಿ, ದುರ್ಗಾಮಕ್ಕಳ ಮೇಳ, ಕಮಲಾದೇವಿ ಆಸ್ರಣ್ಣರ ಸಹಯೋಗದಲ್ಲಿ ಆಯೋಜಿಸಲಾದ ಕಾರ್‍ಯಕ್ರಮದಲ್ಲಿ ಹರಿನಾರಾಯಣ ಬೈಪಾಡಿತ್ತಾಯ ರಚಿತ ಧೀಂಕಿಟ-ಚೆಂಡೆ ಮದ್ದಲೆ ಪಠ್ಯಕ್ರಮದ ಕೃತಿಯನ್ನು ಮಧೂರಿನ ತಂತ್ರಿವರ್‍ಯ ಉಳಿತ್ತಾಯ ವಿಷ್ಣು ಆಸ್ರ ಬಿಡುಗಡೆಗೊಳಿಸಿದರು.ಡಾ.ಕೆ.ಭಾಸ್ಕರಾನಂದ ಕುಮಾರ್‌ರನ್ನು ಸಂಮಾನಿಸಲಾಯಿತು. ಕಟೀಲಿನಲ್ಲಿ ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಿಸುವ ಬಲಿಪ ಶಿವಶಂಕರ ಭಟ್, ಹರಿನಾರಾಯಣ ಬೈಪಡಿತ್ತಾಯ, ರಾಜೇಶ್ ಐ.ಯವರನ್ನು ಅಭಿನಂದಿಸಲಾಯಿತು. ಪುಚ್ಚಕರೆ ಕೃಷ್ಣ ಭಟ್ ಅಭಿನಂದನೆ ಮಾತುಗಳನ್ನಾಡಿದರು.ಕಟೀಲಿನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಎಂಆರ್‌ಪಿಎಲ್‌ನ ಲಕ್ಷ್ಮೀಕುಮಾರನ್, ಬಜಪೆ ರಾಘವೇಂದ್ರ ಭಟ್ ಮತ್ತಿತರರಿದ್ದರು.ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪ್ರಸಾದ ಆಸ್ರಣ್ಣ ವಂದಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರುಉಪಿಸಿದರು.
ಇದೇ ಸಂದರ್ಭ ಯಕ್ಷಗಾನ ತಾಳಮದ್ದಲೆ, ದುರ್ಗಾ ಮಕ್ಕಳ ಮೇಳದಿಂದ, ಮಡಾಮಕ್ಕಿ ಮೇಳದಿಂದ ಬಡಗುತಿಟ್ಟು ಬಯಲಾಟ, ನೃತ್ಯ ಭಾರತಿ ತಂಡದಿಂದ ಭರತನಾಟ್ಯ ನಡೆಯಿತು.ನಂದಿನೀ ಅವತರಣ ದಿನಾಚರಣೆಯ ಸಲುವಾಗಿ ಶ್ರೀ ಭ್ರಾಮರೀಗೆ ನಾಲ್ಕು ಸಾವಿರ ಬೊಂಡಾಭಿಷೇಕ ನಡೆಯಿತು.
ಚಿತ್ರಗಳು : ಕಟೀಲ್ ಸ್ಟುಡಿಯೋ
No comments:
Post a Comment