ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೧೮ರಂದು ಮಾಘಶುದ್ಧ ಹುಣ್ಣಿಮೆಯಂದು ನಂದಿನೀ ಅವತರಣ ದಿನದಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ.ನದಿ ನಂದಿನಿಯ ಜನ್ಮದಿನದಂದು ನಂದಿನೀ ಸ್ನಾನ, ಶ್ರೀದೇವಿಗೆ ಎಳನೀರು ಅಭಿಷೇಕ, ಕ್ಷೀರಾಭಿಷೇಕ, ಕ್ಷೀರಪಾಯಸ ಸೇವೆ ನಡೆಯಲಿದ್ದು ಶ್ರೀ ಕ್ಷೇತ್ರದಲ್ಲಿ ಮಹತ್ವದ ದಿನವಾಗಿದೆ.ಅಂದು ಕಟೀಲು ದೇಗುಲದಲ್ಲಿ ಅರ್ಚಕರಾಗಿದ್ದ ದಿ. ಕೃಷ್ಣ ಆಸ್ರಣ್ಣರ ಸಂಸ್ಮರಣಾರ್ಥ ಕಮಲಾದೇವಿ ಪ್ರಸಾದ ಆಸ್ರಣ್ಣ, ಕರ್ನಾಟಕ ಯಕ್ಷಗಾನ ಅಕಾಡಮಿ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ವಿವಿಧ ಕಾರ್‍ಯಕ್ರಮಗಳು ನಡೆಯಲಿದೆ.ಮಧ್ಯಾಹ್ನ ಬಲಿಪ, ಕೊರ್ಗಿ ಉಪಾಧ್ಯಾಯ, ಗೋವಿಂದ ಭಟ್, ಸುಣ್ಣಂಬಳ, ವಾಸುದೇವರಂಗ ಭಟ್ ಉಪಸ್ಥಿತಿಯಲ್ಲಿ ವೀರಮಣಿ ಕಾಳಗ ತಾಳಮದ್ದಲೆ, ದುರ್ಗಾಮಕ್ಕಳ ಮೇಳದ ಕಲಾವಿದರಿಂದ ಸಾಂಪ್ರದಾಯಿಕ ಯಕ್ಷಗಾನ ಪೂರ್ವರಂಗ ಬಳಿಕ ಕಲಾಪೋಷಕ ಡಾ.ಭಾಸ್ಕರಾನಂದ ಕುಮಾರ್‌ಗೆ ಕಲಾಪೋಷಕ ಸಂಮಾನ ನಡೆಯಲಿದೆ. ಅಕಾಡಮಿ ಸದಸ್ಯ ಸಿ.ಪಿ.ಅತಿಕಾರಿ, ಲಕ್ಷ್ಮೀನಾರಾಯಣ ಆಸ್ರಣ್ಣ, ಪಿ.ಕೃಷ್ಣ ಭಟ್ ಉಪಸ್ಥಿತಿಯಲ್ಲಿ ಹರಿನಾರಾಯಣ ಬೈಪಡಿತ್ತಾಯ ರಚಿತ ಧೀಂಕಿಟ ಚೆಂಡೆ ಮದ್ದಲೆ ಪಠ್ಯಕ್ರಮ ಕೃತಿಯನ್ನು ಉಳಿತ್ತಾಯ ವಿಷ್ಣು ಅಸ್ರ ಬಿಡುಗಡೆಗೊಳಿಸಲಿದ್ದಾರೆ.ಬಲಿಪ ಶಿವಶಂಕರ ಭಟ್, ಹರಿನಾರಾಯಣ ಹಾಗೂ ರಾಜೇಶ್ ಕಟೀಲ್‌ಗೆ ಗುರುವಂದನೆ ನಡೆಯಲಿದ್ದು, ಹರಿನಾರಾಯಣದಾಸ ಆಸ್ರಣ್ಣ ಅಭಿನಂದಿಸಲಿದ್ದಾರೆ.ಬಳಿಕ ಮಕ್ಕಳ ಮೇಳದವರಿಂದ ಜಾಂಬವತೀ ಕಲ್ಯಾಣ ಹಾಗೂ ಮಡಾಮಕ್ಕಿ ಮೇಳದವರಿಂದ ಯಕ್ಷಗಾನ ಬಯಲಾಟವಿದೆ ಎಂದು ಪ್ರಕಟನೆ ತಿಳಿಸಿದೆ.
No comments:
Post a Comment