ರಾಷ್ಟ್ರೀಯ ಸೇವಾ ಯೋಜನೆ ಸಮಾಜ ಸೇವೆಯಲ್ಲಿ ತೊಡಗಲು ವಿದ್ಯಾರ್ಥಿ ದೆಸೆಯಲ್ಲಿಯೇ ಯುವಕರನ್ನು ಪ್ರೇರೇಪಿಸುತ್ತಿದೆ ಎಂದು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.ಅವರು ಗುರುವಾರ ಉಲ್ಲಂಜೆ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಬಲ್ಮಠ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಹರಿಪ್ರಸಾದ ಶೆಟ್ಟಿ, ರಥಬೀದಿ ಸರಕಾರಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಶೇಷಪ್ಪ, ಕಟೀಲು ಕಾಲೇಜಿನ ಸುರೇಶ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶೈಲಾ ಶೆಟ್ಟಿ, ಸಾಮಾಜಿಕ ಮುಖಂಡ ಭುವನಾಭಿರಾಮ ಉಡುಪ, ಶಿಕ್ಷಕಿ ಜೆಸಿಂತಾ ಡಿಸೋಜ,, ಶಾಲಾಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ, ಶರ್ಮಿಳಾ, ಎನ್‌ಎಸ್‌ಎಸ್ ಘಟಕದ ಕೀರ್ತನ್, ಯಶ್ವಿತಾ, ಹರಿಪ್ರಸಾದ, ದೇವಿಕಾ ಮತ್ತಿತರರಿದ್ದರು. ಕಿನ್ನಿಗೋಳಿ ರೋಟರ‍್ಯಾಕ್ಟ್ ವತಿಯಿಂದ ೮೦ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ಕ್ಲಬ್‌ನ ಪ್ರಕಾಶ್ ಆಚಾರ್ ವಿತರಿಸಿದರು. ಯೋಜನಾಧಿಕಾರಿ ಕೇಶವ ಎಚ್. ಸ್ವಾಗತಿಸಿದರು. ಕೃಷ್ಣ ಕೆ.ಕೆ.ವಂದಿಸಿದರು. ಘಟಕದ ವತಿಯಿಂದ ಶಾಲೆಗೆ ಗೋಡೆಗಡಿಯಾರ ನೀಡಲಾಯಿತು.
Thursday, December 30, 2010
ಎನ್‌ಎಸ್‌ಎಸ್ ಸೇವೆಗೆ ಪ್ರೇರಣೆ-ಅನಂತ ಆಸ್ರಣ್ಣ

Subscribe to:
Post Comments (Atom)
No comments:
Post a Comment