ವಿದ್ಯಾರ್ಥಿ ಜೀವನದಲ್ಲಿ ಪಾಠ ಪ್ರವಚನಗಳ ಜೊತೆಗೆ ಬದುಕಿನ ಪಾಠವನ್ನು ಕಲಿಸಲು ಎನ್‌ಎಸ್‌ಎಸ್ ಚಟುವಟಿಕೆ ಪೂರಕ ಎಂದು ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಶುಕ್ರವಾರ(ಡಿ೨೪) ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ, ಉಪನ್ಯಾಸಕ ಸುರೇಶ್, ಶಿಕ್ಷಕ ಕೆ.ವಿ.ಶೆಟ್ಟಿ, ಉಲ್ಲಂಜೆ ಶಾಲೆಯ ಮುಖ್ಯ ಶಿಕ್ಷಕಿ ಮಂಗಳಾ ಎಸ್.ಭಟ್, ಶಾಲಾಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ ಮತ್ತಿತರರಿದ್ದರು. ಯೋಜನಾಧಿಕಾರಿ ಕೇಶವ ಎಚ್.ಸ್ವಾಗತಿಸಿದರು. ಡಾ.ಕೃಷ್ಣ ವಂದಿಸಿದರು. ಯಶ್ವಿತಾ ನಿರೂಪಿಸಿದರು. ಶಿಬಿರ ತಾ.೩೦ರವರೆಗೆ ನಡೆಯಲಿದೆ.
No comments:
Post a Comment