ಅತ್ಯಂತ ಜ್ಞಾನಿಗಳೂ, ಬರೆಯಲೂ ಓದಲೂ ಬಾರದ ಅನಕ್ಷಸ್ಥರು, ಅತ್ಯಂತ ಶ್ರೀಮಂತರೂ, ಕಡು ಬಡವರೂ, ಆರೋಗ್ಯವಂತರೂ, ಕಾಯಿಲೆಗಳಿಂದ ನರಳುವವರೂ ಹೀಗೆ ಜನರ ಮಧ್ಯೆ ದೊಡ್ಡದಾದ ಅಂತರವನ್ನು ನಮ್ಮ ದೇಶದಲ್ಲಿ ಕಾಣಬಹುದು. ಸ್ವಾತಂತ್ರ್ಯಾನಂತರ ಸಮಾನತೆಯ ಸಮಾಜದ ಸ್ಥಾಪನೆಗಾಗಿ ಕೇಂದ್ರ ರಾಜ್ಯ ಸರಕಾರಗಳು ಅದೆಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಾಧ್ಯವಾಗುತ್ತಿಲ್ಲ. ಪ್ರತಿ ಗ್ರಾಮವನ್ನು ಆದರ್ಶವಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದಾಗ ದೇಶ ಬಲಿಷ್ಟವಾಗಬಲ್ಲದು ಎಂದು ಮೂಡುಬಿದ್ರೆಯ ಡಾ.ಮೋಹನ ಆಳ್ವ ಹೇಳಿದರು.ಅವರು ಶನಿವಾರ ರಾತ್ರಿ ನಿಡ್ಡೋಡಿಯಲ್ಲಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನಿಡ್ಡೋಡಿ ಗ್ರಾಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೋತ್ಸವದ ಬಗ್ಗೆ ಉಪನ್ಯಾಸಗೈದ ಗಣೇಶ್ ಅಮೀನ್ ಸಂಕಮಾರ್, ನಮ್ಮ ಮಣ್ಣಿನ ಪ್ರೀತಿ, ಅಭಿಮಾನಗಳನ್ನು ಜಾನಪದ ಸಂಸ್ಕೃತಿ ನಮಗೆ ಕಲಿಸಿಕೊಡುತ್ತದೆ ಎಂದರು.ಸಾಂಸದ ನಳಿನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಬಗ್ಗೆ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕೆಂದರು.ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಂ.ಆರ್.ಜೈನ್, ತೋಕೂರು ಐಟಿಐನ ವೈ.ಎನ್.ಸಾಲ್ಯಾನ್, ವೇಣೂರು ಐಟಿಐನ ಸದಾನಂದ ಪೂಜಾರಿ ಮತ್ತಿತರರಿದ್ದರು.ಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ ಸ್ವಾಗತಿಸಿದರು. ಐಟಿಐನ ಪ್ರಾಚಾರ‍್ಯೆ ಅನುರಾಧಾ ಎಸ್.ಸಾಲ್ಯಾನ್ ವರದಿ ವಾಚಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ, ನಿಡ್ಡೋಡಿ ಗ್ರಾಮದ ಪ್ರತಿಭಾವಂತರಿಂದ ಸಾಂಸ್ಕೃತಿಕ, ಜಾನಪದ ಕಾರ‍್ಯಕ್ರಮಗಳು ನಡೆದವು.
No comments:
Post a Comment