
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಾರಂಭದಲ್ಲಿ ಯಕ್ಷಗಾನ ಚೆಂಡೆವಾದಕ ಪೆರುವಾಯಿ ನಾರಾಯಣ ಭಟ್ಟರಿಗೆ ಆಸ್ರಣ್ಣ ಪ್ರಶಸ್ತಿ, ಉಜಿರೆ ಜನಾರ್ದನ ದೇಗುಲದ ಆಡಳಿತ ಮೊಕ್ತೇಸರ ವಿಜಯರಾಘವ ಪಡುವಣ್ಣಾಯರಿಗೆ ಮೊಕ್ತೇಸರ ಸಂಮಾನ, ಖ್ಯಾತ ಸ್ತ್ರೀವೇಷ ಕಲಾವಿದ ಪುಂಡರೀಕಾಕ್ಷ ಉಪಾಧ್ಯಾಯರಿಗೆ ಕಲಾವಿದ ಸಂಮಾನ, ಮುಂಡ್ಕೂರು ದೇಗುಲದ ಜಯರಾಮ ಆಚಾರ‍್ಯರಿಗೆ ಅರ್ಚಕ ಸಂಮಾನ ನೀಡಿ ಗೌರವಿಸಲಾಯಿತು. ಸಾಧಕರಾದ ಉಮೇಶರಾವ್ ಎಕ್ಕಾರು, ಮೋನಪ್ಪ ಶೆಟ್ಟಿ, ರತ್ನಾಕರ ಶೆಟ್ಟಿ, ದೇವಪ್ರಸಾದ ಪುನರೂರು, ಸುಮಿತ್ ಕುಮಾರ್, ಶ್ರೀಹರಿ ಭಟ್‌ರನ್ನು ಅಭಿನಂದಿಸಲಾಯಿತು.
No comments:
Post a Comment