
ಮೂಲ್ಕಿ : ನಾನಾ ಕಾರಣಗಳಿಂದಾಗಿ ಯುವಕರು ಪೇಟೆಯೆಡೆಗೆ ಸಾಗುತ್ತಿದ್ದಾರೆ. ಬದಲಾಗಿ ಹಳ್ಳಿಯಲ್ಲಿದ್ದುಕೊಂಡೇ ಕೃಷಿ ಮುಂತಾದ ಕೆಲಸಗಳಿಂದ ಮಹತ್ತರವಾದುದನ್ನು ಸಾಧಿಸಿ ತೋರಿಸಬೇಕಾಗಿದೆ ಎಂದು ಶಾಸಕ ಅಭಯಚಂದ್ರ ಹೇಳಿದರು.
ಅವರು ಶುಕ್ರವಾರ ಪಡುಪಣಂಬೂರು ಮಾದರಿ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟೀಲು ದೇಗುಲ ಪದವೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್, ಮೂಲ್ಕಿ ಅರಸು ಕಂಬಳ ಸಮಿತಿಯ ರಾಮಚಂದ್ರ ನಾಯ್ಕ್, ಕಾಲೇಜಿನ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಕಲ್ಲಾಪು ದೇಗುಲದ ಕಾಂತಪ್ಪ ಗುರಿಕಾರ, ತಾ.ಪಂ.ಸದಸ್ಯ ರಾಜು ಕುಂದರ್, ಮುಖ್ಯ ಶಿಕ್ಷಕಿ ಭುವನೇಶ್ವರೀ, ಶಿಬಿರಾಧಿಕಾರಿಗಳಾದ ಕೇಶಚ ಎಚ್, ಡಾ.ಕೃಷ್ಣ ಕೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಚಂದ್ರಕಲಾ, ಸುಪ್ರೀತ್, ಪ್ರಮೀಳಾ, ಪ್ರಜ್ವಲ್ ಮತ್ತಿತರರಿದ್ದರು. ಶಿಬಿರ ತಾ.೨೯ರಂದು ಸಮಾಪನಗೊಳ್ಳಲಿದ್ದು, ನದಿಗೆ ತಡೆಗೋಡೆ ರಚನೆ, ಸಮುದ್ರದ ಬದಿ ಕಾಂಡ್ಲಾ ಗಿಡ ನೆಡುವುದು, ರಸ್ತೆ ನಿರ್ಮಾಣ, ಹೂತೋಟ ರಚನೆ, ಬಸದಿ ಪರಿಸರ ಸ್ವಚ್ಛತೆ ಮುಂತಾದ ಕಾರ‍್ಯಗಳನ್ನು ಹಮ್ಮಿಕೊಳ್ಳಲಾಗಿದೆ.
No comments:
Post a Comment