Wednesday, December 21, 2011
ಕಟೀಲು, ಕೊಲ್ಲೂರು ದೇಗುಲ ಅಭಿವೃದ್ದಿ ಬಗ್ಗೆ ಸಭೆ
ಕಟೀಲು : ಧಾರ್ಮಿಕ ದತ್ತಿ ಇಲಾಖಾ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕಟೀಲು ಮತ್ತು ಕೊಲ್ಲೂರು ದೇಗುಲಗಳ ಅಭಿವೃದ್ಧಿ ಬಗ್ಗೆ ಬುಧವಾರ ಸಂಜೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕಟೀಲಿನಲ್ಲಿ ಡ್ರೈನೇಜು ಕಾಮಗಾರಿಯನ್ನು ದೇಗುಲದ ಸುಮಾರು ರೂ. ೪ಕೋಟಿ ಮೊತ್ತದಲ್ಲಿ ಕೂಡಲೇ ಆರಂಭಿಸುವಂತೆ ಕ್ರಮಕೈಗೊಳ್ಳಬೇಕು. ಸ್ನಾನಘಟ್ಟವನ್ನು ಸರಿಪಡಿಸುವುದು. ಮೂಲಸ್ಥಾನ ಕುದ್ರುವಿನ ಅಭಿವೃದ್ಧಿಗೆ ವೇಗ ಕೊಡುವುದು, ಯಾತ್ರಿ ನಿವಾಸದ ಕಾಮಗಾರಿ ಮಾಸ್ಟರ್ ಪ್ಲಾನ್ ರಚನೆಯ ಕಾರಣಕ್ಕಾಗಿ ವಿಳಂಬವಾಗಿದೆ. ನಲವತ್ತಕ್ಕೂ ಹೆಚ್ಚು ವಿಚಾರಗಳು ಚರ್ಚೆಗೊಳಗಾಗಿದ್ದು, ಜನವರಿ ಕೊನೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದ ಆಯುಕ್ತರು, ಕಟೀಲು ದೇಗುಲದ ಚಿನ್ನದ ರಥ ನಿರ್ಮಾಣಕ್ಕೆ ಟೆಂಡರು ಪ್ರಕ್ರಿಯೆ ಮುಗಿದಿದೆ. ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣವಾಗುವುದು ಎಂದು ತಿಳಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಆಗಮ ಶಾಸ್ತ್ರ ವಿಭಾಗದ ಗಣಪತಿ ಶಾಸ್ತ್ರಿ, ಜಿಲ್ಲೆಯ ಅಧಿಕಾರಿ ಲಕ್ಷ್ಮೀ, ಪ್ರಭಾಕರ್, ಸಹಾಯಕ ಆಯುಕ್ತ ವೆಂಕಟೇಶ್, ಪ್ರಬಂಧಕ ವಿಶ್ವೇಶ ರಾವ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲೂರು ಮೂಕಾಂಬಿಕಾ ದೇಗುಲದ ಶಿಲಾಮಯ ಗರ್ಭಗೃಹ ಸೋರುವ ಕಾರಣಕ್ಕೆ ತಾಮ್ರ ಮುಚ್ಚಿಸುವುದು, ಸೌಪರ್ಣಿಕಾ ಸ್ನಾನಘಟ್ಟವನ್ನು ಉತ್ತಮವಾಗಿಸುವುದು, ನದಿಯ ಸ್ವಚ್ಛತೆ, ಆನೆಬಾಗಿಲು ಹೊಸತಾಗಿಸುವುದು, ಹೊಸ ದಾಸೋಹಗೃಹ ರಚನೆ ಮುಂತಾದ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ ನಡೆಯಿತು.
ಕುಂದಾಪುರ ಉಪವಿಭಾಗಾಧಿಕಾರಿ, ಆಡಳಿತಾಧಿಕಾರಿ ಸದಾಶಿವ ಪ್ರಭು, ಕಾರ‍್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ, ಇಂಜಿನಿಯರುಗಳಾದ ಮುರಳಿ, ಪ್ರದೀಪ, ಅರ್ಚಕರಾದ ವಿಶ್ವನಾಥ ಅಡಿಗ, ಮಂಜುನಾಥ ಅಡಿಗ, ಶ್ರೀಕಾಂತ ಅಡಿಗ, ಶ್ರೀಧರ ಅಡಿಗ ಮತ್ತಿತರರಿದ್ದರು.
Subscribe to:
Post Comments (Atom)
No comments:
Post a Comment