ಕಟೀಲು ಮೇಳಗಳ 20 ಕಲಾವಿದರಿಗೆ ಆರೋಗ್ಯ ಕಾರ್ಡ್
ಕಟೀಲು ದೇವಳದ ಐದು ಮೇಳಗಳ ಯಕ್ಷಗಾನ ಕಲಾವಿದರಲ್ಲಿ ತಲಾ 5 ಮಂದಿಯಂತೆ 20 ಕಲಾವಿದರ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ಮಾಡಲು ಹತ್ತುಸಾವಿರ ರೂಪಾಯಿಗಳ ಕೊಡುಗೆಯನ್ನು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನಿಂದ ನೀಡಲಾಯಿತು. ಕಟೀಲು ದೇವಳದ ಪ್ರಬಂಧಕ ವಿಶ್ವೇಶ ರಾವ್, ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ರೋಟರಾಕ್ಟ್ ವಲಯ ಪ್ರತಿನಿಧಿ ಹರೀಶ್ ಅಡ್ಯಾರ್, ದಿನೇಶ್ ಕೊಡಿಯಾಲ್ ಬೈಲ್, ಕಿನ್ನಿಗೋಳಿ ಕ್ಲಬ್‌ನ ಅಧ್ಯಕ್ಷ ಗಣೇಶ್ ಕಾಮತ್, ಜಾಕ್ಸನ್, ಕ್ಲಬ್ ಸಭಾಪತಿ ಕೆ.ಬಿ.ಸುರೇಶ್, ಸುಮಿತ್ ಮತ್ತಿತರರಿದ್ದರು.
No comments:
Post a Comment