ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲ, ಕಟೀಲ್ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್, ಕಿನ್ನಿಗೋಳಿ ರೋಟರಿ, ರೋಟರ‍್ಯಾಕ್ಟ್ ಸಹಯೋಗದಲ್ಲಿ ಕಾರ್ಕಳ ರೋಟರಿ ಕಣ್ಣಿನ ಆಸ್ಪತ್ರೆಯ ವೈದ್ಯರಿಂದ ಕಟೀಲಿನಲ್ಲಿ ನಡೆದ ಉಚಿತ ಕಣ್ಣಿನ ತಪಾಸನೆ, ಶಸ್ತ್ರಕ್ರಿಯೆ, ಕನ್ನಡಕ ವಿತರಣೆ ಶಿಬಿರದಲ್ಲಿ ೧೬೫ಮಂದಿ ಪ್ರಯೋಜನ ಪಡೆದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಡಾ.ಲಲಿತ್, ರೋಟರಿಯ ಜಯರಾಮ ಪೂಂಜ, ಹೆರಿಕ್ ಪಾಯಸ್, ಯಶವಂತ, ಕೆ.ಬಿ.ಸುರೇಶ್, ರೋಟರ‍್ಯಾಕ್ಟ್‌ನ ಗಣೇಶ್, ಗೇಮ್ಸ್ ಕ್ಲಬ್‌ನ ಕೇಶವ್, ವೆಂಕಟರಮಣ ಮಯ್ಯ, ದಾಮೋದರ್ ಮತ್ತಿತರರಿದ್ದರು.
ಆರು ಮಂದಿಗೆ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ೭೦ಮಂದಿಗೆ ಉಚಿತ ಕನ್ನಡಕಗಳನ್ನು ತಾ.೨೫ರಂದು ವಿತರಿಸಲಾಗುವುದೆಂದು ಪ್ರಕಟನೆ ತಿಳಿಸಿದೆ.
No comments:
Post a Comment