ಸಾಹಿತ್ಯದಿಂದ ಉತ್ತಮ ವಾತಾವರಣ- ಕೋಟ ಶ್ರೀನಿವಾಸ ಪೂಜಾರಿ
ಕಿನ್ನಿಗೋಳಿ : ಸಾಹಿತ್ಯದಿಂದ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಓದುವಿಕೆ ಎಲ್ಲರ ಹವ್ಯಾಸವಾಗಬೇಕು. ಸಾಹಿತ್ಯ ರಚಿಸಿದ ಎಷ್ಟೋ ಬರಹಗಾರರು ಆರ್ಥೀಕವಾಗಿ ಶ್ರೀಮಂತರಾಗಿರುವುದಿಲ್ಲ. ಅಥವಾ ಅವರನ್ನು ಪ್ರೋತ್ಸಾಹಿಸುವವರಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಾಹಿತಿಗಳನ್ನು ಬೆಂಬಲಿಸುವ ಕಾರ‍್ಯ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಗುರುವಾರ ಸಂಜೆ ಕಿನಿಗೋಳಿಯ ನೇಕಾರ ಸೌಧದಲ್ಲಿ ನಡೆದ ಅನಂತ ಪ್ರಕಾಶ ಸಂಸ್ಥೆಯ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಎಂಟು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಡಾ.ವಿಶ್ವನಾಥ ಕಾರ್ನಾಡರ ಸಾಹಿತ್ಯ ಲೇಖನಗಳ ಸ್ಪಂದನ, ಕೆ.ಜಿ.ಭದ್ರಣ್ಣವರ ಹನಿಗವನ ಭಂಡಾರ, ಸೂರ‍್ಯನಾರಾಯಣ ರಾವ್‌ರ ಕೋಟಿ ಚೆನ್ನಯ ನಾಟಕ, ಮಸುಮರ ನಾಟಕ ಹಬಾಶಿಕಾ, ಕವನ ಸಂಕಲನ ಮಕರಂದ, ವಿಶ್ವಂಭರ ಉಪಾಧ್ಯಾಯರ ನಾಗನೂಪುರ, ಅರ್ಪಿತಾರ ಮಳೆಬಿಲ್ಲು, ಕೆ.ಜಿ.ಸುಪ್ರದಾ ರಾವ್‌ರ ಕವನ ಸಂಕಲನ ನಾಡು ಹಾಡು ಬಿಡುಗೊಳಿಸಲಾಯಿತು.
ಉಮೇಶ್ ರಾವ್ ಎಕ್ಕಾರು, ಉಪೇಂದ್ರ ಸೋಮಯಾಜಿ ಮತ್ತಿತರರಿದ್ದರು. ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಗಾಯತ್ರೀ ಉಡುಪ ಕಾರ‍್ಯಕ್ರಮ ನಿರೂಪಿಸಿದರು. ಬಳಿಕ ನಿಡ್ಲೆ ಮಹಾಗಣಪತಿ ಮಂಡಳಿಯವರಿಂದ ಹರಿದರ್ಶನ ಯಕ್ಷಗಾನ ಜರಗಿತು.
No comments:
Post a Comment