ಬ್ಲೆಂಡೆಟೆ ಪ್ಲೆಟೆಟೆ ಬ್ಲೆಂಡೆಟೆ ಪ್ಲೆಟೆಟೆ...
ಭಾನುವಾರ ಕಟೀಲಿನ ರಥಬೀದಿಯಲ್ಲಿ ಉತ್ಸವದ ವಾತಾವರಣ. ದಿನವಿಡೀ ತಾಸೆ, ಡೋಲುಗಳದೇ ಅಬ್ಬರ. ನೂರಾರು ಸಂಖ್ಯೆಯಲ್ಲಿ ಹುಲಿವೇಷಗಳು ಕುಣಿದು ಸೇರಿದ್ದ ಸಾವಿರಾರು ಮಂದಿಯನ್ನು ರಂಜಿಸಿದವು. ಸ್ಥಳೀಯ ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ರಜತ ಮಹೋತ್ಸವದ ಸಲುವಾಗಿ ಆಯೋಜಿಸಿದ ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳ ಕಲಾವಿದರು ಸಾಂಪ್ರದಾಯಿಕ ಕುಣಿತದೊಂದಿಗೆ ಮೈನವಿರೇಳಿಸುವ ಕಸರತ್ತುಗಳೊಂದಿಗೆ ರಂಜಿಸಿದರು. ಹುಲಿ ಕುಣಿತದ ವಿವಿಧ ಆಯಾಮಗಳನ್ನು ಬಿಡಿಸಿಟ್ಟ ಕಲಾವಿದರು ಹಲ್ಲಿನಿಂದ ಅಕ್ಕಿಮುಡಿ ಕಚ್ಚಿ ಹಿಂದೆಕ್ಕೆಸೆದು, ಕೈಗೆ ಕಾಲುಗಳಿಗೆ ಕೋಲು ಕಟ್ಟಿಕೊಂಡು, ತೆಂಗಿನ ಕಾಯಿಯನ್ನು ಒಡೆದು, ವಿಧವಿಧವಾಗಿ ಪಲ್ಟಿ ಹೊಡೆದು, ಮಾನವ ಗೋಪುರ ನಿರ್ಮಿಸಿ ಗಮನ ಸೆಳೆದರು. ಬಳಿಕ ಮಂಗಳೂರಿನ ಮಂಜುಶ್ರೀ ಮಹಿಳಾ ತಂಡದವರಿಂದ ಹುಲಿವೇಷ ಕುಣಿತವೂ ಗಮನ ಸೆಳೆಯಿತು. ಶಿವಮೊಗ್ಗದ ಮಹಿಳಾ ತಂಡದವರ ಡೊಳ್ಳುಕುಣಿತ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಮೂರು ಬಾರಿ ಪ್ರದರ್ಶನಗೊಂಡಿತು. ನಿಟ್ಟೂರಿನ ಡಿಡಿ ಮಹಿಳಾ ತಂಡದಿಂದ ಪ್ರದರ್ಶಿಸಲ್ಪಟ್ಟ ಡ್ರಾಗನ್ ಕುಣಿತವೂ ಹೊಸ ಆಕರ್ಷಣೆಯಾಗಿತ್ತು.ಹುಲಿವೇಷ ಸ್ಪರ್ಧೆಯನ್ನು ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಉದ್ಘಾಟಿಸಿದರು. ಹರಿನಾರಾಯಣದಾಸ ಆಸ್ರಣ್ಣ, ರಮೇಶ ಐ.ಕೆ ಕುವೈಟ್, ಚಂದ್ರಶೇಖರ ವಿ, ಮುಂಬೈನಿತಿನ್ ಶೆಟ್ಟಿ, ದೊಡ್ಡಯ್ಯ ಮೂಲ್ಯ, ರಾಮಗೋಪಾಲ್, ಕೇಶವ್ ಕಟೀಲ್, ಕಿರಣ್ ಶೆಟ್ಟಿ ಮತ್ತಿತರರಿದ್ದರು.ಇದೇ ಸಂದರ್ಭ ಕಿನ್ನಿಗೋಳಿಯಿಂದ ಕಟೀಲುವರೆಗೆ ಆಯೋಜಿಸಲಾದ ಹುಲಿವೇಷ ಟ್ಯಾಬ್ಲೋ ಹಾಗೂ ಸ್ತಬ್ಧಚಿತ್ರ ಸ್ಪರ್ಧೆಯ ಮೆರವಣಿಗೆಯಲ್ಲಿ ಉಭಯ ಜಿಲ್ಲೆಗಳ ವಿವಿಧ ತಂಡಗಳು ಭಾಗವಹಿಸಿದ್ದವು. ಸತ್ಯನಾರಾಯಣ ಪೂಜೆ, ಗೀತೋಪದೇಶ, ಸತ್ಯಹರಿಶ್ಚಂದ್ರ, ಭಕ್ತ ಕನಕದಾಸ, ದೇವರ ಬಲಿ ಉತ್ಸವ, ಡ್ರಾಗನ್, ಆಪ್ತಮಿತ್ರ ಸಿನಿಮಾದ ದೃಶ್ಯಗಳು ಗಮನ ಸೆಳೆದವು.ಟ್ಯಾಬ್ಲೋ ಸ್ಪರ್ಧೆ ಉದ್ಘಾಟನೆಯಲ್ಲಿ ವೆಂಕಟರಮಣ ಆಸ್ರಣ್ಣ, ನಾಮದೇವ ಕಾಮತ್, ಪಿ.ಸತೀಶ್ ರಾವ್, ಪುರುಷೋತ್ತಮ ಶೆಟ್ಟಿ, ಭುವನಾಭಿರಾಮ ಉಡುಪ, ಧನಂಜಯ ಶೆಟ್ಟಿಗಾರ್ ಮತ್ತಿತರರಿದ್ದರು.ರಾತ್ರಿ ಕಟೀಲಿನ ನವರಾತ್ರಿ ಸಮಿತಿಯ ಮೆರವಣಿಗೆ ಇಪ್ಪತ್ತೈದು ಟ್ಯಾಬ್ಲೋಗಳೊಂದಿಗೆ ಕಟೀಲನ್ನು ತಲುಪಿದ ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಟೀಲಿನ ರಥಬೀದಿಯಲ್ಲಿ ಹುಲಿವೇಷಗಳ ಸ್ಪರ್ಧೆ ಫೋಟೋಗಳು

ಭಕ್ತಿಯ ಪ್ರದರ್ಶನವಾಗಬಾರದು. ಸಂಘಟನೆಯೊಂದಿಗೆ ಧರ್ಮಜಾಗೃತಿಯಾಗಬೇಕು. ನಮ್ಮ ಸಂಸ್ಕೃತಿಯ ವೈಭವವನ್ನು ಹಬ್ಬಗಳ, ಧಾರ್ಮಿಕ ಆಚರಣೆಯೊಂದಿಗೆ ಇನ್ನಷ್ಟು ಹೆಚ್ಚಿಸಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಕಟೀಲಿನಲ್ಲಿ ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇದೇ ಸಂದರ್ಭ ಆಯೋಜಿಸಲಾದ ಹುಲಿವೇಷ, ಟ್ಯಾಬ್ಲೋ ಸ್ಪರ್ಧೆಗಳ ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.ಮಾಣಿಲ ಮೋಹನದಾಸ ಸ್ವಾಮೀಜಿ, ಕಟೀಲಿನ ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಎಂಆರ್ಪಿಎಲ್ನ ಅಧಿಕಾರಿ ಲಕ್ಷ್ಮೀ ಕುಮಾರನ್, ಪುಚ್ಚಕೆರೆ ಕೃಷ್ಣ ಭಟ್, ಬಜಪೆ ರಾಘವೇಂದ್ರ ಆಚಾರ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಬಜಪೆ ವ್ಯವಸಾಯ ಬ್ಯಾಂಕಿನ ಎಕ್ಕಾರು ಮೋನಪ್ಪ ಶೆಟ್ಟಿ, ಸೌಂದರ್ಯ ಪ್ಯಾಲೇಸ್ನ ಎಂ.ಎಸ್. ರಮೇಶ್, ಸಮಿತಿಯ ದೊಡ್ಡಯ್ಯ ಮೂಲ್ಯ, ರಾಮ್ಗೋಪಾಲ್, ಚಂದ್ರಶೇಖರ ಬಿ., ರಮೇಶ್ ಐ.ಕೆ.ಕುವೈಟ್, ಕೇಶವ ಕಟೀಲು, ರಾಜು ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತಿತರರಿದ್ದರು. ರಾಜೇಂದ್ರ ಕುಮಾರ್, ದಾಮೋದರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಮಡಿವಾಳ ವಂದಿಸಿದರು.
ಕಿನ್ನಿಗೋಳಿಯಿಂದ ಕಟೀಲುವರೆಗೆ ಹುಲಿವೇಷ, ಟ್ಯಾಬ್ಲೋಗಳ ಮೆರವಣಿಗೆ, ಮಹಿಳಾ ಹುಲಿ, ಡೊಳ್ಳುಕುಣಿತ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಡೆಯಿತು.
ಹುಲಿವೇಷಗಳ ಸ್ಪರ್ಧೆ: ಅಶೋಕ್ ರಾಜ್ ತಂಡ ಕಾಡಬೆಟ್ಟು(ಪ್ರಥಮ), ಬಲ್ಲಾಣ ಫ್ರೆಂಡ್ಸ್(ದ್ವಿತೀಯ)ಹುಲಿ ವೇಷ ಟ್ಯಾಬ್ಲೋ ಸ್ಪರ್ಧೆ: ಸುರೇಂದ್ರ ಕಾಡಬೆಟ್ಟು ತಂಡ ಉಡುಪಿ(ಪ್ರಥಮ), ಓಂಕಾರೇಶ್ವರೀ ಮಂದಿರ ತೋಕೂರು(ದ್ವಿ)
ಹುಲಿವೇಷ ವಿಭಾಗ ಪ್ರಶಸ್ತಿ: ಸುರೇಂದ್ರ ಕಾಡಬೆಟ್ಟು ತಂಡ(ಕಸರತ್ತು), ವಿಜಿಪಿ ತೊಕ್ಕೊಟ್ಟು(ಕುಣಿತ), ವಸಂತರಾಜ್ ಬಳಗ ದೇವರಗುಡ್ಡೆ(ಬಣ್ಣ), ಅಯ್ಯಪ್ಪ ಸಮಿತಿ, ಲಿಂಗಪ್ಪಯ್ಯಕಾಡು(ಶಿಸ್ತು), ತುಕಾರಾಮ್ ಬಳಗ ಕೂಳೂರು(ಹಿಮ್ಮೇಳ)
ಸ್ತಬ್ದ ಚಿತ್ರ : ಕನಕನ ಕಿಂಡಿ-ಕಿನ್ನಿಗೋಳಿ ಫ್ರೆಂಡ್ಸ್(ಪ್ರಥಮ), ನಾಗವಲ್ಲಿ-ಮಾರುತಿ ಗ್ರೂಪ್ಸ್ ಮೂಡುಬಿದ್ರೆ
Thanks for the pics :)
ReplyDelete